ಕೇಪ್‌ಟೌನ್(ಸೆ.30): ಮುಂಬರುವ ಆಸ್ಟ್ರೇಲಿಯಾ ಏಕದಿನ ಸರಣಿಗಾಗಿ ದಕ್ಷಿಣ ಆಫ್ರಿಕಾ ತಂಡಕ್ಕೆ ಅನುಭವಿ ವೇಗದ ಬೌಲರ್ ಡೇಲ್ ಸ್ಟೇನ್ ಅವರನ್ನು ಸೇರಿಸಿಕೊಳ್ಳಲು ಸಿಮೀತ ಓವರ್‌ಗಳ ತಂಡದ ನಾಯಕ ಫಾಪ್ ಡು ಪ್ಲೇಸಿಸ್ ಶಿಾರಸ್ಸು ಮಾಡಿದ್ದಾರೆ.

ಸ್ಟೇನ್ ತಂಡಕ್ಕೆ ಸೇರಿಕೊಂಡರೆ, ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳಿಗೆ ಭಯ ಕಾಡಲಿದೆ ಎಂದು ಡುಪ್ಲೇಸಿಸ್ ತಿಳಿಸಿದ್ದಾರೆ. ವಿಶ್ವ ಕ್ರಿಕೆಟ್‌ನ ಶ್ರೇಷ್ಟ ಬೌಲರ್‌ಗಳಲ್ಲಿ ಒಬ್ಬರಾಗಿರುವ ಸ್ಟೇನ್, ಯಾವುದೇ ತಂಡದಲ್ಲಿ ಆಡಿದರೂ ತಮ್ಮ ಪ್ರಭಾವಿ ಬೌಲಿಂಗ್‌ನಿಂದ ಗಮನಸೆಳೆಯಲಿದ್ದಾರೆ ಎಂದಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಸರಣಿ ನಮಗೆ ಅತ್ಯಮೂಲ್ಯವಾಗಿದೆ. ಹೀಗಾಗಿ ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರುವುದೇ ಪ್ರಮುಖ ಉದ್ದೇಶವಾಗಿದೆ ಎಂದು ಡುಪ್ಲೇಸಿಸ್ ಹೇಳಿದ್ದಾರೆ.