ಈ ಮೂಲಕ ಕಾಮನ್’ವೆಲ್ತ್ ಗೇಮ್ಸ್’ನಲ್ಲಿ ಮೂರು ಚಿನ್ನದ ಪದಕ ಗೆದ್ದ ಮೊದಲ ಕುಸ್ತಿಪಟು ಎನ್ನುವ ಹಿರಿಮೆಗೆ ಸುಶೀಲ್ ಪಾತ್ರರಾಗಿದ್ದಾರೆ. ಫೈನಲ್’ನಲ್ಲಿ ತಾಂತ್ರಿಕ ಮೇಲುಗೈ ಮೆರೆದ ಸುಶೀಲ್ ಒಂದೇ ಒಂದು ಅಂಕ ಬಿಟ್ಟುಕೊಡದೇ ಕೇವಲ 80 ಸೆಕೆಂಡ್’ಗಳಲ್ಲಿ ಜಯಭೇರಿ ಬಾರಿಸಿದರು.

ಗೋಲ್ಡ್'ಕೋಸ್ಟ್(ಏ.12): ಹ್ಯಾಟ್ರಿಕ್ ಚಿನ್ನ ಗೆದ್ದ ಸುಶೀಲ್ ಕುಮಾರ್ ಭಾರತದ ಅನುಭವಿ ಕುಸ್ತಿಪಟು ಸುಶೀಲ್ ಕುಮಾರ್ 74 ಕೆ.ಜಿ ಕುಸ್ತಿ ವಿಭಾಗದಲ್ಲಿ ದಕ್ಷಿಣ ಆಫ್ರಿಕಾದ ಜೋನ್ಸ್ ಬೋಥಾರನ್ನು ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಮೂಲಕ ಕಾಮನ್’ವೆಲ್ತ್ ಗೇಮ್ಸ್’ನಲ್ಲಿ ಮೂರು ಚಿನ್ನದ ಪದಕ ಗೆದ್ದ ಮೊದಲ ಕುಸ್ತಿಪಟು ಎನ್ನುವ ಹಿರಿಮೆಗೆ ಸುಶೀಲ್ ಪಾತ್ರರಾಗಿದ್ದಾರೆ. ಫೈನಲ್’ನಲ್ಲಿ ತಾಂತ್ರಿಕ ಮೇಲುಗೈ ಮೆರೆದ ಸುಶೀಲ್ ಒಂದೇ ಒಂದು ಅಂಕ ಬಿಟ್ಟುಕೊಡದೇ ಕೇವಲ 80 ಸೆಕೆಂಡ್’ಗಳಲ್ಲಿ ಜಯಭೇರಿ ಬಾರಿಸಿದರು.

Scroll to load tweet…

ಈ ಮೊದಲು ಸುಶೀಲ್ ಕುಮಾರ್ 2010ರಲ್ಲಿ 66 ಕೆ.ಜಿ. ವಿಭಾಗದಲ್ಲಿ, 2014ರಲ್ಲಿ 74 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರು. ಮೊದಲೆರಡು ಸುತ್ತುಗಳಲ್ಲಿ ಕೆನಡಾ ಹಾಗೂ ಪಾಕಿಸ್ತಾನದ ಕುಸ್ತಿಪಟುಗಳನ್ನು ಕ್ರಮವಾಗಿ 11-0 ಹಾಗೂ 10-0 ಅಂತರದಲ್ಲಿ ಪಂದ್ಯ ಗೆದ್ದಿದ್ದರು. ಇನ್ನು ಸೆಮಿಫೈನಲ್ಸ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಕಾನೋರ್ ಇವಾನ್ಸ್’ರನ್ನು ಕೇವಲ ಎರಡು ನಿಮಿಷದಲ್ಲಿ ಮಣಿಸಿ ಫೈನಲ್ ಪ್ರವೇಶಿಸಿದ್ದರು.

ಇದಕ್ಕೂ ಮೊದಲು 57 ಕೆ.ಜಿ ವಿಭಾಗದಲ್ಲಿ ರಾಹುಲ್ ಆವ್ರೆ ಕೆನಡಾದ ಸ್ಟೀವನ್ ತಕುಹಾಶಿಯನ್ನು ಮಣಿಸಿ ಚಿನ್ನದ ಪದಕ ಗೆದ್ದುಕೊಂಡರು. ಈ ಮೂಲಕ ಪ್ರಸಕ್ತ ಆವೃತ್ತಿಯ ಕುಸ್ತಿ ವಿಭಾಗದಲ್ಲಿ ಪದಕದ ಖಾತೆ ಆರಂಭಿಸಿದ್ದರು. ಮಹಿಳೆಯರ 53 ಕೆ.ಜಿ. ವಿಭಾಗದಲ್ಲಿ ಬಬಿತಾ ಕುಮಾರಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದರು.