ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಮಕಾವ್ ತಂಡವನ್ನು 4-1 ಗೋಲುಗಳ ಅಂತರದಿಂದ ಮಣಿಸುವ ಮೂಲಕ ಭಾರತ ತಂಡ ಏಷ್ಯಾಕಪ್‌'ಗೆ ಅರ್ಹತೆ ಗಿಟ್ಟಿಸಿದೆ.
ಬೆಂಗಳೂರು(ಅ.12): ಪ್ರಸ್ತುತ ಇರುವ ಭಾರತ ಫುಟ್ಬಾಲ್ ತಂಡ ದೇಶದ ಫುಟ್ಬಾಲ್ ಇತಿಹಾಸದಲ್ಲಿನ ಶ್ರೇಷ್ಠ ತಂಡಗಳಲ್ಲಿ ಒಂದಾಗಿದೆ ಎಂದು ಭಾರತ ಫುಟ್ಬಾಲ್ ತಂಡದ ಕೋಚ್ ಸ್ಟೀಫನ್ ಕಾನ್'ಸ್ಟನ್'ಟೈನ್ ಹೇಳಿದ್ದಾರೆ.
ಬುಧವಾರ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಮಕಾವ್ ತಂಡವನ್ನು 4-1 ಗೋಲುಗಳ ಅಂತರದಿಂದ ಮಣಿಸುವ ಮೂಲಕ ಭಾರತ ತಂಡ ಏಷ್ಯಾಕಪ್'ಗೆ ಅರ್ಹತೆ ಗಿಟ್ಟಿಸಿದೆ.
ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಸ್ಟೀಫನ್, ‘ತಂಡದಲ್ಲಿರುವ ಪ್ರತಿಯೊಬ್ಬರು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಇದು ಕೇವಲ ತಂಡಕ್ಕೆ ಸಂದ ಗೌರವವಲ್ಲ, ಇಡೀ ದೇಶಕ್ಕೆ ಸಂದ ಗೌರವ. ಈ ಯಶಸ್ಸಿನ ಹಿಂದೆ ಹಲವರ ಶ್ರಮವಿದೆ’ ಎಂದಿದ್ದಾರೆ.
