ದಿಗ್ಗಜರಿಬ್ಬರ ಸವಾಲಿನಲ್ಲಿ ಟಾಸ್ ಗೆದ್ದ ಧೋನಿ: ಗೆಲುವು ಯಾರಿಗೆ ?

CSK take on table-toppers SRH in IPL clash
Highlights

ಆದರೂ ಅಂಕಪಟ್ಟಿಯಲ್ಲಿ ಅಗ್ರ 2ರಲ್ಲಿ ಸ್ಥಾನ ಪಡೆಯಬೇಕು ಎನ್ನುವ ಲೆಕ್ಕಾಚಾರ ಚೆನ್ನೈದಾಗಿದೆ. ಒಂದೊಮ್ಮೆ ಹೈದರಾಬಾದ್ ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ, 20 ಅಂಕ ಸಂಪಾದಿಸಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಖಚಿತಪಡಿಸಿಕೊಳ್ಳಲಿದೆ. ತಂಡಕ್ಕೆ ಈ ಪಂದ್ಯದ ಬಳಿಕ ಇನ್ನೂ 2 ಪಂದ್ಯ ಬಾಕಿ ಇರಲಿದ್ದು ಅಂಕಗಳ ಅಂತರವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಅವಕಾಶವಿರಲಿದೆ.

ಪುಣೆ(ಮೇ.13): ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್  ಪ್ಲೇ-ಆಫ್  ಸ್ಥಾನಕ್ಕೇರಲು ಹಪಹಪಿಸುತ್ತಿದೆ. ತಂಡಕ್ಕಿನ್ನೂ 3 ಪಂದ್ಯ  ಬಾಕಿ ಇದ್ದು, ಒಂದರಲ್ಲಿ ಗೆದ್ದರೆ ಪ್ಲೇ-ಆಫ್ ಸ್ಥಾನ ಖಚಿತಗೊಳ್ಳಲಿ ದೆ.
ಇಂದು ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಚೆನ್ನೈ, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಲಿದೆ. 2 ವರ್ಷಗಳ  ನಿಷೇಧದ ಬಳಿಕ ಐಪಿಎಲ್ ವಾಪಸಾದ  ಧೋನಿ ನೇತೃತ್ವದ ಚೆನ್ನೈ, ತನ್ನ ಅಗ್ರಸ್ಥಾನ ಭರ್ಜರಿಯಾಗಿ ನಡೆಸುತ್ತಿದೆ. ಮೊದಲ 6 ಪಂದ್ಯಗಳಲ್ಲಿ 5ರಲ್ಲಿ ಗೆದ್ದು ಬೀಗಿದ ತಂಡ, ಇತ್ತೀಚಿನ ಕೆಲ ಪಂ ದ್ಯಗಳಲ್ಲಿ ಸ್ವಲ್ಪ ಮಂಕಾಗಿದೆ. ಕಳೆದ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ ಸೋಲು ತಂಡದ ಆತ್ಮವಿಶ್ವಾಸಕ್ಕೆ ಪೆಟ್ಟು ನೀಡಿದರೂ, ಕೈಯಲ್ಲಿನ್ನೂ 3 ಪಂ ದ್ಯ  ಬಾಕಿ ಇರುವುದರಿಂದ ಹೆಚ್ಚು ಒತ್ತಡವಿಲ್ಲ.
ಆ ದರೂ ಅಂಕಪಟ್ಟಿಯಲ್ಲಿ ಅಗ್ರ 2ರಲ್ಲಿ ಸ್ಥಾನ ಪಡೆಯಬೇಕು ಎನ್ನುವ ಲೆಕ್ಕಾಚಾರ ಚೆನ್ನೈದಾಗಿದೆ. ಒಂದೊಮ್ಮೆ ಹೈದರಾಬಾದ್ ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ, 20 ಅಂಕ ಸಂಪಾದಿಸಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಖಚಿತಪಡಿಸಿಕೊಳ್ಳಲಿದೆ. ತಂಡಕ್ಕೆ ಈ ಪಂದ್ಯದ ಬಳಿಕ ಇನ್ನೂ 2 ಪಂದ್ಯ ಬಾಕಿ ಇರಲಿದ್ದು ಅಂಕಗಳ ಅಂತರವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಅವಕಾಶವಿರಲಿದೆ.
ಸನ್ ರೈಸರ್ಸ್  ಬೌಲಿಂಗ್ ಉಳಿದೆಲ್ಲಾ ತಂಡಗಳಿಗಿಂತ ಬಲಿಷ್ಠವಾಗಿ ದು, ಕಳೆ ದ ಪಂದ್ಯದಲ್ಲಿ ತಂಡದ  ಬ್ಯಾಟ್ಸ್'ಮನ್ಗಳು ಸಹ ಭರ್ಜರಿ ಆಟವಾಡಿದರು. ಅತ್ಯಂತ ಬಲಿಷ್ಠ ಎ ದುರಾಳಿಯನ್ನು ಕಟ್ಟಿಹಾಕಲು ಚೆನ್ನೈ  ವಿಭಿನ್ನ ತಂತ್ರಗಾರಿಕೆಯೊಂದಿಗೆ ಕಣಕ್ಕಿಳಿಯಬೇಕಿದೆ. ಲಯ ಕಳೆ ದುಕೊಂಡಿರುವ ಚೆನ್ನೈ  ಬೌಲಿಂಗ್ ವಿಭಾಗ ಮತ್ತೊಂದು ಅಗ್ನಿಪರೀಕ್ಷೆ ಎದುರಿಸಲಿ ದೆ.

ತಂಡ
ಚೆನ್ನೈ ಸೂಪರ್ ಕಿಂಗ್ಸ್: ಶೇನ್  ವಾಟ್ಸನ್, ರಾಯುಡು, ಸುರೇಶ್ ರೈನಾ, ಧೋ ನಿ (ನಾಯಕ), ಸ್ಯಾಬ್ ಬಿಲ್ಲಿಂಗ್, ಡ್ವೇನ್  ಬ್ರಾವೋ, ಜಡೇಜಾ, ಡೇವಿಡ್ ವಿಲ್ಲಿ, ಹರ್ಭಜನ್ ಸಿಂಗ್ , ಶಾರ್ದೂಲ್'ಕರ್  ಶರ್ಮಾ, 

ಸನ್ ರೈಸರ್ಸ್ ಹೈದ್ರಾಬಾದ್ : ಅಲೆಕ್ಸ್ ಹೆಲ್, ಧವನ್, ವಿಲಿಯಮ್ಸ್'ನ್(ನಾಯಕ), ಮನೀಶ್, ಶಕೀಬ್, ಯೂಸುಫ್, ಶ್ರೀವತ್ಸ ಗೋಸ್ವಾಮಿ,  ರಶೀದ್, ಭುವನೇಶ್ವರ್, ಸಿದ್ದಾರ್ಥ್ ಕೌಲ್, ಸಂದೀಪ್

loader