ಮುಂದುವರೆದ ಚೆನ್ನೈ ಜಯದ ನಾಗಾಲೋಟ; ಸನ್'ರೈಸರ್ಸ್'ಗೆ ರೋಚಕ ಸೋಲು

CSK survive Williamson special to clinch top spot
Highlights

ನಾಯಕ ಕೇನ್ ವಿಲಿಯಮ್ಸನ್ ಹಾಗೂ ಯೂಸೂಪ್ ಪಠಾಣ್ ಆಕರ್ಷಕ ಬ್ಯಾಟಿಂಗ್ ಹೊರತಾಗಿಯೂ ಚೆನ್ನೈ ಸೂಪರ್'ಕಿಂಗ್ಸ್ 4 ರನ್'ಗಳ ರೋಚಕ ಜಯ ಸಾಧಿಸಿದೆ. ಈ ಜಯದೊಂದಿಹೆ ಸಿಎಸ್'ಕೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಹೈದರಾಬಾದ್: ನಾಯಕ ಕೇನ್ ವಿಲಿಯಮ್ಸನ್ ಹಾಗೂ ಯೂಸೂಪ್ ಪಠಾಣ್ ಆಕರ್ಷಕ ಬ್ಯಾಟಿಂಗ್ ಹೊರತಾಗಿಯೂ ಚೆನ್ನೈ ಸೂಪರ್'ಕಿಂಗ್ಸ್ 4 ರನ್'ಗಳ ರೋಚಕ ಜಯ ಸಾಧಿಸಿದೆ. ಈ ಜಯದೊಂದಿಹೆ ಸಿಎಸ್'ಕೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಚೆನ್ನೈ ನೀಡಿದ್ದ ಸವಾಲಿನ ಗುರಿ ಬೆನ್ನತ್ತಿದ ಸನ್'ರೈಸರ್ಸ್ ಮೊದಲ ಓವರ್'ನಲ್ಲೇ ವಿಕೆಟ್ ಕಳೆದುಕೊಂಡು ಆಘಾತ ಎದುರಿಸಿತು. ಇದರ ಬೆನ್ನಲ್ಲೇ ಮನೀಶ್ ಪಾಂಡೆ ಹಾಗೂ ದೀಪಕ್ ಹೂಡಾ ಸಹ ಪೆವಿಲಿಯನ್ ಸೇರಿದರು ಆಗ ತಂಡದ ಮೊತ್ತ 22/3.

ವೇಳೆ 4ನೇ ವಿಕೆಟ್'ಗೆ ಜತೆಯಾದ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಶಕೀಬ್ ಅಲ್ ಹಸನ್ ಜೋಡಿ 51 ರನ್'ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಉತ್ತಮವಾಗಿ ಆಡುತ್ತಿದ್ದ ಶಕೀಬ್ 24 ರನ್ ಗಳಿಸಿದ್ದಾಗ ಕರಣ್ ಶರ್ಮಾಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ವಿಲಿಯಮ್ಸನ್ ಕೂಡಿಕೊಂಡ ಯೂಸುಪ್ ಪಠಾಣ್ ಸ್ಫೋಟಕ ಬ್ಯಾಟಿಂಗ್ ನಡೆಸುವ ಮೂಲಕ ತಂಡವನ್ನು ಗೆಲುವಿನ ಸಮೀಪ ಕೊಂಡ್ಯೊಯ್ದರು. ಉತ್ತಮ ಬ್ಯಾಟಿಂಗ್ ನಡೆಸಿದ ನಾಯಕ ವಿಲಿಯಮ್ಸನ್ 51 ಎಸೆತಗಳಲ್ಲಿ ತಲಾ 5 ಬೌಂಡರಿ ಹಾಗೂ ಸಿಕ್ಸರ್'ಗಳ ನೆರವಿನೊಂದಿಗೆ 84 ರನ್ ಸಿಡಿಸಿ ಬ್ರಾವೋಗೆ ವಿಕೆಟ್ ಒಪ್ಪಿಸಿದರು. ಇನ್ನು ಯೂಸುಪ್ ಕೇವಲ 27 ಎಸೆತಗಳಲ್ಲಿ 45 ರನ್ ಸಿಡಿಸಿದರು.

ರೋಚಕತೆ ಹೆಚ್ಚಿಸಿದ ಕೊನೆಯ ಓವರ್: ಅಂತಿಮ ಓವರ್'ನಲ್ಲಿ ಹೈದರಾಬಾದ್ ತಂಡಕ್ಕೆ 18 ರನ್'ಗಳ ಅವಶ್ಯಕತೆಯಿತ್ತು. ಮೊದಲ ಎಸೆತವನ್ನು ಬ್ರಾವೋ ಚುಕ್ಕೆ ಎಸೆತ ಹಾಕಿದರು. ಎರಡನೇ ಎಸೆತದಲ್ಲಿ 2 ರನ್ ನೀಡಿದರು. ಮರು ಎಸೆತದಲ್ಲಿ ಒಂದು ನೀಡಿದರು. ಕೊನೆ ಮೂರು ಎಸೆತದಲ್ಲಿ 15 ರನ್ ಅವಶ್ಯಕತೆಯಿತ್ತು. ನಾಲ್ಕನೇ ಎಸೆತವನ್ನು ಸಿಕ್ಸರ್'ಗೆ ಅಟ್ಟಿದ ರಶೀದ್ ಖಾನ್, 5ನೇ ಎಸೆತವನ್ನು ಬೌಂಡರಿ ಬಾರಿಸಿದರು. ಕೊನೆಯ ಎಸೆತದಲ್ಲಿ 6 ರನ್ ಅವಶ್ಯಕತೆಯಿತ್ತು. ಆದರೆ ಬ್ರಾವೋ ಯಾರ್ಕರ್ ಎಸೆಯುವ ಮೂಲಕ ಕೇವಲ ಒಂದು ರನ್ ಮಾತ್ರ ಬಿಟ್ಟುಕೊಟ್ಟರು. ಈ ಮೂಲಕ ಚೆನ್ನೈ 4 ರನ್'ಗಳ ಜಯಭೇರಿ ಬಾರಿಸಿತು.

ಇದಕ್ಕೂ ಮೊದಲು ಚೆನ್ನೈ ಸೂಪರ್'ಕಿಂಗ್ಸ್ ಅಂಬಟಿ ರಾಯುಡು ಹಾಗೂ ಸುರೇಶ್ ರೈನಾ ಬಾರಿಸಿದ ಅರ್ಧಶತಕಗಳ ನೆರವಿನಿಂದ 182 ರನ್ ಕಲೆಹಾಕಿತ್ತು.

ಸಂಕ್ಷಿಪ್ತ ಸ್ಕೋರ್:

ಚೆನ್ನೈ ಸೂಪರ್'ಕಿಂಗ್ಸ್: 182/3

ಅಂಬಟಿ ರಾಯುಡು: 79

ಭುವನೇಶ್ವರ್ ಕುಮಾರ್: 22/1

ಸನ್'ರೈಸರ್ಸ್ ಹೈದರಾಬಾದ್: 178/6

ಕೇನ್ ವಿಲಿಯಮ್ಸನ್: 84

ದೀಪಕ್ ಚಾಹರ್: 15/3

loader