ಒಟ್ಟು 18 ಆಟಗಾರರನ್ನು ಉಳಿಸಿಕೊಳ್ಳಲಾಗಿದ್ದು ಜನವರಿ 27, 28 ರಂದು ಬೆಂಗಳೂರಿನಲ್ಲಿ 11ನೇ ಆವೃತ್ತಿಯ ನೂತನ ಹರಾಜು ಪ್ರಕ್ರಿಯೆ ನಡೆಯಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್' 11ನೇ ಆವೃತ್ತಿಯ ರಿಟೈನ್ ಪಟ್ಟಿ ಪ್ರಕಟಿಸಿದ್ದು ಆರ್'ಸಿಬಿಯ ನಾಯಕ ವಿರಾಟ್ ಕೊಹ್ಲಿ, ಚೆನ್ನೈ ಸೂಪರ್ ಕಿಂಗ್ಸ್'ನ ಮಹೇಂದ್ರ ಸಿಂಗ್ ಧೋನಿ ಹಾಗೂ ಮುಂಬೈ ಟೀಂ ನಾಯಕ ರೋಹಿತ್ ಶರ್ಮಾ ಅತೀ ಹೆಚ್ಚು ಮೊತ್ತ ನೀಡಿ ಉಳಿಸಿಕೊಂಡ ಆಟಗಾರರಾಗಿದ್ದಾರೆ.
17 ಕೋಟಿಗೆ ಉಳಿಸಿಕೊಂಡಿರುವ ಕೊಹ್ಲಿ ಅತ್ಯಧಿಕ ಮೊತ್ತದ ಆಟಗಾರರಾಗಿದ್ದಾರೆ. ಎಂ.ಎಸ್.ಧೋನಿ ಹಾಗೂ ರೋಹಿತ್ ಶರ್ಮಾ ತಲಾ 15 ಕೋಟಿಗೆ ಉಳಿದುಕೊಂಡರೆ, ಸಿಎಸ್'ಕೆಯ ಸುರೇಶ್ ರೈನಾ ಮತ್ತು ಆರ್'ಸಿಬಿಯ ಎಬಿಡಿ ವಿಲಿಯರ್ಸ್ 11 ಕೋಟಿ ನೀಡಿ ಉಳಿಸಿಕೊಳ್ಳಲಾಗಿದೆ. ವಿದೇಶಿ ಆಟಗಾರರಲ್ಲಿ ರಾಜಸ್ಥಾನ್ ರಾಯಲ್ಸ್'ನ ಸ್ಟಿವ್ ಸ್ಮಿತ್ ಅತಿ ಹೆಚ್ಚು ಹಣಕ್ಕೆ ಉಳಿಸಿಕೊಂಡ ಆಟಗಾರ.
ಒಟ್ಟು 18 ಆಟಗಾರರನ್ನು ಉಳಿಸಿಕೊಳ್ಳಲಾಗಿದ್ದು ಜನವರಿ 27, 28 ರಂದು ಬೆಂಗಳೂರಿನಲ್ಲಿ 11ನೇ ಆವೃತ್ತಿಯ ನೂತನ ಹರಾಜು ಪ್ರಕ್ರಿಯೆ ನಡೆಯಲಿದೆ.
ರೀಟೈನ್ ಆದ ಆಟಗಾರರ ಪಟ್ಟಿ
ಆರ್ ಸಿಬಿ:
ವಿರಾಟ್ ಕೊಹ್ಲಿ 17 ಕೋಟಿ
ಎಬಿಡಿ ವಿಲಿಯರ್ಸ್ 11 ಕೋಟಿ
ಸರ್ಪರಾಜ್ ಖಾನ್ 1.75
ಚೆನ್ನೈ ಸೂಪರ್ ಕಿಂಗ್ಸ್ :
ಎಂ.ಎಸ್. ಧೋನಿ: 15 ಕೋಟಿ
ಸುರೇಶ್ ರೈನಾ: 11 ಕೋಟಿ
ರವೀಂದ್ರ ಜಡೇಜಾ: 7 ಕೋಟಿ
ರಾಜಸ್ಥಾನ್ ರಾಯಲ್ಸ್:
ಸ್ಟಿವ್ ಸ್ಮಿತ್: 12 ಕೋಟಿ
ಮುಂಬೈ ಇಂಡಿಯನ್ಸ್:
ರೋಹಿತ್ ಶರ್ಮಾ 15 ಕೋಟಿ
ಹಾರ್ದಿಕ್ ಪಾಂಡ್ಯ 11 ಕೋಟಿ
ಜಸ್ಪ್ರಿತ್ ಬುಮ್ರಾ 7 ಕೋಟಿ
ಸನ್'ರೈಸ್ ಹೈದರಾಬಾದ್:
ಡೇವಿಡ್ ವಾರ್ನ'ರ್ 12 ಕೋಟಿ
ಭುವನೇಶ್ವರ್ ಕುಮಾರ್ 8.5 ಕೋಟಿ
ಕೋಲ್ಕತ್ತಾ ನೈಟ್ ರೈಡರ್ಸ್:
ಸುನೀಲ್ ನರೈನ್ 8.5 ಕೋಟಿ
ಆಂಡ್ರೆ ರಸೆಲ್ 7 ಕೋಟಿ
ಕಿಂಗ್ಸ್ ಇಲೆವನ್ ಪಂಜಾಬ್:
ಅಕ್ಸ'ರ್ ಪಟೇಲ್ 6.75 ಕೋಟಿ
ಡೆಲ್ಲಿ ಡೇರ್ ಡೇವಿಲ್ಸ್:
ರಿಷಬ್ ಪಂತ್ 8 ಕೋಟಿ
ಕ್ರಿಸ್ ಮೋರಿಸ್ 7.1 ಕೋಟಿ
ಶ್ರೇಯಸ್ ಅಯ್ಯರ್ 7 ಕೋಟಿ
