IPL 2018: ಸಾಧಾರಣ ಮೊತ್ತ ಪೇರಿಸಿದ ಸನ್’ರೈಸರ್ಸ್

CSK Bowlers Restrict SRH To 139 for 7
Highlights

ಚೆನ್ನೈ ಸೂಪರ್’ಕಿಂಗ್ಸ್ ಪಡೆಯ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ತತ್ತರಿಸಿದ ಸನ್’ರೈಸರ್ಸ್ ಹೈದರಾಬಾದ್ 139 ರನ್’ಗಳ ಸಾಧಾರಣ ಮೊತ್ತ ಪೇರಿಸಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಹೈದರಾಬಾದ್ ಸವಾಲನ್ನು ಮೀರಿ ಚೆನ್ನೈ ಫೈನಲ್ ಪ್ರವೇಶಿಸುತ್ತಾ ಎನ್ನುವುದನ್ನು ಕಾದುನೋಡಬೇಕಿದೆ. ಇನ್ನು ಸುಲಭ ಗುರಿ ಬೆನ್ನತ್ತಿದ ಚೆನ್ನೈ ಮೊದಲ ಓವರ್’ನಲ್ಲೇ ವಾಟ್ಸನ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಭುವನೇಶ್ವರ್ ಮೊದಲ ಓವರ್’ನಲ್ಲೇ ಸಿಎಸ್’ಕೆ ಪಡೆಗೆ ಶಾಕ್ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಮುಂಬೈ[ಮೇ.22]: ಚೆನ್ನೈ ಸೂಪರ್’ಕಿಂಗ್ಸ್ ಪಡೆಯ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ತತ್ತರಿಸಿದ ಸನ್’ರೈಸರ್ಸ್ ಹೈದರಾಬಾದ್ 139 ರನ್’ಗಳ ಸಾಧಾರಣ ಮೊತ್ತ ಪೇರಿಸಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಹೈದರಾಬಾದ್ ಸವಾಲನ್ನು ಮೀರಿ ಚೆನ್ನೈ ಫೈನಲ್ ಪ್ರವೇಶಿಸುತ್ತಾ ಎನ್ನುವುದನ್ನು ಕಾದುನೋಡಬೇಕಿದೆ. ಇನ್ನು ಸುಲಭ ಗುರಿ ಬೆನ್ನತ್ತಿದ ಚೆನ್ನೈ ಮೊದಲ ಓವರ್’ನಲ್ಲೇ ವಾಟ್ಸನ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಭುವನೇಶ್ವರ್ ಮೊದಲ ಓವರ್’ನಲ್ಲೇ ಸಿಎಸ್’ಕೆ ಪಡೆಗೆ ಶಾಕ್ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಇಲ್ಲಿನ ವಾಂಖೇಡೆ ಮೈದಾನದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಸನ್’ರೈಸರ್ಸ್ ಆರಂಭದಲ್ಲೇ ಮುಗ್ಗರಿಸಿತು. ಪಂದ್ಯದ ಮೊದಲ ಎಸೆತದಲ್ಲಿ ಶಿಖರ್ ಧವನ್ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಶ್ರೀವಾತ್ಸವ್ ಗೋಸ್ವಾಮಿ 12 ರನ್ ಬಾರಿಸಿ ಎನ್ಜಿಡಿಗೆ ವಿಕೆಟ್ ಒಪ್ಪಿಸಿರೆ, ನಾಯಕ ವಿಲಿಯಮ್ಸನ್ 24 ರನ್ ಬಾರಿಸಿ ಪೆವಿಲಿಯನ್ ಸೇರಿದರು. ಇನ್ನು ಮನೀಶ್ ಪಾಂಡೆ ಆಟ 8 ರನ್’ಗೆ ಸೀಮಿತವಾಯಿತು.
ಗೌರವ ಕಾಪಾಡಿದ ಬ್ರಾಥ್’ವೈಟ್: ಒಂದು ಹಂತದಲ್ಲಿ 69 ರನ್’ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ ಹೈದರಾಬಾದ್ ತಂಡಕ್ಕೆ ಯೂಸುಫ್ ಪಠಾಣ್[24] ಹಾಗೂ ಕಾರ್ಲೋಸ್ ಬ್ರಾಥ್’ವೈಟ್ ಆಸರೆಯಾದರು. ಕೇವಲ 29 ಎಸೆತಗಳಲ್ಲಿ ಬ್ರಾಥ್’ವೈಟ್ 43* ರನ್ ಸಿಡಿಸಿ ತಂಡವನ್ನು 130ರ ಗಡಿ ದಾಟಿಸಿದರು.
ಸಿಎಸ್’ಕೆ ಪರ ಬ್ರಾವೋ 2, ಎನ್ಜಿಡಿ, ದೀಪಕ್ ಚಾಹರ್, ಶಾರ್ದೂಲ್ ಠಾಕೂರ್ ಹಾಗೂ ರವೀಂದ್ರ ಜಡೇಜಾ ತಲಾ ಒಂದೊಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್:
CSK: 139/7
ಬ್ರಾಥ್’ವೈಟ್: 43*  
ಬ್ರಾವೋ: 25/2
[* ವಿವರ ಅಪೂರ್ಣ]

loader