ಗರ್ಭಿಣಿ ಅಥ್ಲೀಟ್ ಎಮಿಲಿಯ ವರ್ಕೌಟ್ ವಿಡಿಯೋ ವೈರಲ್..!

CrossFit Athlete Emily Breeze On Why Workout-Shaming Pregnant Women Needs to Stop
Highlights

ಖ್ಯಾತ ಕ್ರಾಸ್ ಫಿಟ್ ಅಥ್ಲೀಟ್ ಮತ್ತು ಟ್ರೈನರ್ ಎಮಿಲಿ ಬ್ರೀಜ್ ಗರ್ಭಿಣಿಯದ ಮೇಲೂ ಜಿಮ್ ನಲ್ಲಿ ತರಬೇತಿ ಮಾಡಿ ಹಲವರ ಕಂಗೆಣ್ಣಿಗೆ ಗುರಿಯಾಗಿದ್ದಾರೆ. ಗರ್ಭಿಣಿ ಎಮಿಲಿಯ ವರ್ಕೌಟ್ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಭಾರದ ವಸ್ತುಗಳನ್ನು ಎತ್ತುತ್ತಿರುವ ಎಮಿಲಿಗೆ ಹಲವರು ತರಾಟೆಗೆ ತೆಗೆದುಕೊಂಡಿದ್ದಾರೆ. ತೆಗೆದುಕೊಂಡಿದ್ದಾರೆ. ಎಮಿಲಿಗೆ ತಮ್ಮ ಮಗುವಿನ ಮೇಲೆ ಪ್ರೀತಿ ಇದ್ದಂತಿಲ್ಲ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು(ಜೂ.3): ಖ್ಯಾತ ಕ್ರಾಸ್ ಫಿಟ್ ಅಥ್ಲೀಟ್ ಮತ್ತು ಟ್ರೈನರ್ ಎಮಿಲಿ ಬ್ರೀಜ್ ಗರ್ಭಿಣಿಯದ ಮೇಲೂ ಜಿಮ್ ನಲ್ಲಿ ತರಬೇತಿ ಮಾಡಿ ಹಲವರ ಕಂಗೆಣ್ಣಿಗೆ ಗುರಿಯಾಗಿದ್ದಾರೆ. ಗರ್ಭಿಣಿ ಎಮಿಲಿಯ ವರ್ಕೌಟ್ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಭಾರದ ವಸ್ತುಗಳನ್ನು ಎತ್ತುತ್ತಿರುವ ಎಮಿಲಿಗೆ ಹಲವರು ತರಾಟೆಗೆ ತೆಗೆದುಕೊಂಡಿದ್ದಾರೆ. ಎಮಿಲಿಗೆ ತಮ್ಮ ಮಗುವಿನ ಮೇಲೆ ಪ್ರೀತಿ ಇದ್ದಂತಿಲ್ಲ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಪ್ರತ್ಯುತ್ತರ ನೀಡಿರುವ ಎಮಿಲಿ, ತಾವು ಅಥ್ಲೀಟ್ ಜೊತೆ ಜೊತೆಗೆ ಟ್ರೈನರ್ ಕೂಡ ಆಗಿದ್ದು, ತನ್ನ ಮತ್ತು ಮಗುವಿನ ಯೋಗಕ್ಷೇಮ ಕಾಪಾಡಿಕೊಳ್ಳಬಲ್ಲೆ ಎಂದು ಹೇಳಿದ್ದಾರೆ. ತಾವು ಮೊದಲ ಬಾರಿಗೆ ಗರ್ಭಿಣಿ ಆದಾಗಲೂ ಇದೇ ರೀತಿ ವರ್ಕೌಟ್ ಮಾಡಿದ್ದಾಗಿ ಎಮಿಲಿ ಹೇಳಿದ್ದಾಳೆ.

ನಾನು ಶಾಲಾ ಮತ್ತು ಕಾಲೇಜು ದಿನಗಳಿಂದಲೇ ನಿಯಮಿತ ವ್ಯಾಯಾಮ ಮಾಡುತ್ತಿದ್ದು, ಆಟದ ಮೇಲಿನ ವಿಶೇಷ ಗಮನ ಹರಿಸುವಿಕೆ ಗರ್ಭಿಣಿ ಆದ ಮೇಲೂ ಸಹಾಯಕ್ಕೆ ಬಂದಿದೆ ಎಂದು ಎಮಿಲಿ ಹೇಳಿದ್ದಾರೆ. ಅಲ್ಲದೇ ತಮ್ಮ ತರಬೇತುದಾರರಿಂದ ಇದಕ್ಕೆಂದೇ ಸೂಕ್ತ ತರಬೇತಿ ಪಡೆದಿದ್ದಾಗಿಯೂ ಎಮಿಲಿ ಹೇಳಿದ್ದಾರೆ.

ಮಗುವಿಗೆ ಯಾವುದೇ ಹಾನಿಯಾಗದಂತೆ ವ್ಯಾಯಾಮ ಮಾಡುವ ಕಲೆ ತಮಗೆ ಗೊತ್ತು ಎಂದಿರುವ ಎಮಿಲಿ, ಈ ಕುರಿತು ನಿಮ್ಮೆಲ್ಲರ ಕಾಳಜಿಗೆ ಧನ್ಯವಾದ ಎಂದು ಹೇಳಿದ್ದಾರೆ. ಎಮಿಲಿ ಅವರ ಈ ಫೋಟೋ ಮತ್ತ ವಿಡಿಯೋ  ತುಸು ಹಳೆಯದಾಗಿದ್ದು, ಸದ್ಯ ಅವರ ಎರಡನೇ ಮಗುವೂ ಸುರಕ್ಷಿತವಾಗಿದೆ. ಆದರೆ ಎಮಿಲಿ ಅವರ ವರ್ಕೌಟ್ ಮಾಡುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿದೆ.

loader