ಪೋರ್ಚುಗಲ್(ಡಿ.10): ರಿಯಲ್ ಮ್ಯಾಡ್ರಿಡ್‌'ನ ಸ್ಟಾರ್ ಫುಟ್ಬಾಲಿಗ ಕ್ರಿಶ್ಚಿಯಾನೊ ರೊನಾಲ್ಡೊ ಅವರು 2015ರಲ್ಲಿ ತಾವು ಗಳಿಸಿರುವ ಆದಾಯವನ್ನು ಬಹಿರಂಗಗೊಳಿಸಿದ್ದಾರೆ.

ಪೋರ್ಚುಗಲ್ ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿದ್ದಾರೆಂದು ಇತ್ತೀಚೆಗೆ ಅವರ ಮೇಲೆ ಆರೋಪಗಳು ಕೇಳಿಬಂದಿದ್ದವು. ಈ ಟೀಕೆಗಳಿಗೆ ಉತ್ತರ ನೀಡುವ ಉದ್ದೇಶದಿಂದ ಅವರು, ತಮ್ಮ ವ್ಯವಹಾರಗಳನ್ನು ನೋಡಿಕೊಳ್ಳುವ ಜೆಸ್ಟಿಫ್ಯೂಟ್ ಎಂಬ ಸಂಸ್ಥೆಯ ಮೂಲಕ ತಮ್ಮ ಆದಾಯವನ್ನು ಘೋಷಿಸಿಕೊಂಡಿದ್ದಾರೆ.

ಅದರಂತೆ, 31ರ ಪ್ರಾಯದ ಈ ಆಟಗಾರ ಕಳೆದ ಋತುವಿನಲ್ಲಿ ವಿವಿಧ ಮೂಲಗಳಿಂದ ಒಟ್ಟಾರೆ ₹ 1,619 ಕೋಟಿಯಷ್ಟು ಹಣ ಗಳಿಸಿರುವುದಾಗಿ ಹೇಳಿಕೊಂಡಿದ್ದಾರೆ. ಈ ಮೂಲಕ ಜಗತ್ತಿನ ಅತ್ಯಂತ ಶ್ರೀಮಂತ ಫುಟ್ಬಾಲಿಗ ಎನ್ನುವ ಗರಿಮೆಯೂ ರೊನಾಲ್ಡೊ ಪಾಲಾಗಿದೆ.