ಪೋರ್ಚುಗಲ್(ಅ.20): ರಿಯಲ್ ಮ್ಯಾಡ್ರಿಡ್ ಫುಟ್ಬಾಲ್ ಕ್ಲಬ್‌ನ ಸ್ಟಾರ್ ಆಟಗಾರ ಕ್ರಿಶ್ಚಿಯಾನೊ ರೊನಾಲ್ಡೊ ಅವರ ಫೇಸ್‌ಬುಕ್‌'ನ ಸ್ಟೇಟಸ್ ಅಪ್‌ಡೇಟ್ ವಿವಾದಕ್ಕೆ ಗುರಿಯಾಗಿದ್ದು, ಖುದ್ದು ಅವರ ಅಭಿಮಾನಿಗಳೇ ಅವರನ್ನು ತೆಗಳುವಂತಾಗಿದೆ.

ಬುದ್ಧನ ಮೂರ್ತಿಯಿರುವ ಸ್ತಂಭವೊಂದರ ಕಟ್ಟೆಯ ಮೇಲೆ ಶೂ ಧರಿಸಿರುವ ಕಾಲನ್ನಿಟ್ಟು ನಿಂತು ‘ಗುಡ್‌ಮಾರ್ನಿಂಗ್’ ಎಂಬ ಸಂದೇಶವನ್ನು ಹಾಕಿದ್ದ ರೊನಾಲ್ಡೊ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.

ಈ ಬಗ್ಗೆ ರೊನಾಲ್ಡೊ ಅವರ ಅಭಿಮಾನಿಗಳೇ ಪ್ರತ್ಯುತ್ತರ ನೀಡಿ, ತಕ್ಷಣವೇ ರೊನಾಲ್ಡೊ ಅವರು ಕ್ಷಮೆ ಕೋರಬೇಕು. ಕೆಲವರಂತೂ ‘ನಿಮಗೆ ಸುಸಂಸ್ಕೃತ ನಡಾವಳಿ ಗೊತ್ತಿಲ್ಲವೇ ?’ ಎಂದು ಪ್ರಶ್ನಿಸಿದ್ದಾರೆ.