‘‘ಯಾವುದೇ ಕಾರಣಕ್ಕೂ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ಇಡೀ ವಿಶ್ವವೇ ನಿಮ್ಮೊಂದಿಗಿದೆ. ನಾವು ನಿಮ್ಮನ್ನು ಸಂರಕ್ಷಣೆ ಮಾಡುತ್ತೇವೆ’’- ಕ್ರಿಶ್ಚಿಯಾನೊ ರೊನಾಲ್ಡೊ
ಲಂಡನ್(ಡಿ.25): ಯುದ್ಧಪೀಡಿತ ಸಿರಿಯಾದಲ್ಲಿ ದಿನಬೆಳಗಾದರೆ ಬಾಂಬ್ ಸ್ಫೋಟ, ಮದ್ದು ಗುಂಡುಗಳ ಭೋರ್ಗರೆತದ ಭೀಕರ ಪರಿಸ್ಥಿತಿಯ ನಡುವೆಯೇ ಜೀವನ ಸಾಗಿಸುತ್ತಿರುವ ಅಲ್ಲಿನ ಮಕ್ಕಳೇ ನಿಜವಾದ ಹೀರೋಗಳು ಎಂದು ಜಗದ್ವಿಖ್ಯಾತ ಫುಟ್ಬಾಲ್ ಆಟಗಾರ ಕ್ರಿಶ್ಚಿಯಾನೊ ರೊನಾಲ್ಡೊ ತಿಳಿಸಿದ್ದಾರೆ.
ಸಿರಿಯಾದ ಮಕ್ಕಳಿಗಾಗಿ ಅಗತ್ಯ ಆಹಾರ, ಔಷಧಿ ಹಾಗೂ ಆತ್ಮಸ್ಥೈರ್ಯ ತುಂಬುವ ವಿಶೇಷ ಅಭಿಯಾನದಲ್ಲಿ ಅಧಿಕೃತವಾಗಿ ತಾವೂ ಭಾಗಿಯಾದ ರೊನಾಲ್ಡೊ ಈ ವಿಚಾರ ತಿಳಿಸಿದರು.
‘‘ಯಾವುದೇ ಕಾರಣಕ್ಕೂ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ಇಡೀ ವಿಶ್ವವೇ ನಿಮ್ಮೊಂದಿಗಿದೆ. ನಾವು ನಿಮ್ಮನ್ನು ಸಂರಕ್ಷಣೆ ಮಾಡುತ್ತೇವೆ’’ ಎಂದು ಸಿರಿಯಾ ಮಕ್ಕಳಿಗೆ ರಿಯಲ್ ಮ್ಯಾಡ್ರಿಡ್ ತಂಡದ ಆಟಗಾರ ಕರೆ ನೀಡಿದರು.
