ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ನಟನೆಯತ್ತ ಮುಖ ಮಾಡಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ...
ಮುಂಬೈ[ಜೂ.30]: ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ನಟನೆಯತ್ತ ಮೊದಲ ಹೆಜ್ಜೆ ಇರಿಸಿದ್ದಾರೆ. ‘ದಿ ಆಫೀಸ್’ ಎನ್ನುವ ವೆಬ್ ಸೀರೀಸ್‌ನಲ್ಲಿ ಯುವಿ ಕಾಣಿಸಿಕೊಳ್ಳಲಿದ್ದಾರೆ.
ಯುವಿ ದಿಢೀರ್ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ್ದೇಕೆ..?
ಹಾಟ್ ಸ್ಟಾರ್‌ನಲ್ಲಿ ಈ ಸೀರೀಸ್ ಪ್ರಸಾರವಾಗಲಿದ್ದು, ಒಟ್ಟು 13 ಸಂಚಿಕೆಗಳನ್ನು ಒಳಗೊಂಡಿರಲಿದೆ. ‘ಇದೊಂದು ಹೊಸ ಪ್ರಯತ್ನ. ಕ್ರಿಕೆಟ್ ನನಗೆ ಎಲ್ಲವನ್ನೂ ಕೊಟ್ಟಿದೆ. ಆದರೆ ಕ್ರಿಕೆಟ್ ಹೊರತುಪಡಿಸಿ ಜೀವನದಲ್ಲಿ ಬೇರೆ ಏನನ್ನೂ ಮಾಡಿಲ್ಲ. ಹೀಗಾಗಿ ಹೊಸ ಕಲೆಯತ್ತ ಸಾಗಿದ್ದೇನೆ’ ಎಂದು ಯುವರಾಜ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ವೆಬ್ ಸೀರೀಸ್‌ಗಾಗಿ ಈಗಾಗಲೇ ಸಿದ್ಧತೆ ಆರಂಭಿಸಿರುವ ಯುವರಾಜ್, ಕಾಪೋರೇಟ್ ಆಫೀಸ್ ಸಿಬ್ಬಂದಿಯ ಜೀವನ ಹೇಗಿರಲಿದೆ ಎನ್ನುವುದರ ಅಧ್ಯಯನ ನಡೆಸುತ್ತಿದ್ದಾರೆ ಎನ್ನಲಾಗಿದೆ.
#BIGBREAKING ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಯುವಿ ಗುಡ್‌ಬೈ...!
ಟೀಂ ಇಂಡಿಯಾ ಆಲ್ರೌಂಡರ್ ಕೆಲದಿನಗಳ ಹಿಂದಷ್ಟೇ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದರು. ಇದರ ಜತೆಗೆ ವಿದೇಶಿ ಟಿ20 ಲೀಗ್‌ನಲ್ಲಿ ಪಾಲ್ಗೊಳ್ಳುವ ಇರಾದೆ ವ್ಯಕ್ತಪಡಿಸಿದ್ದಾರೆ.
