ಟೀಂ ಇಂಡಿಯಾ ಕಳೆದ ಕೆಲ ದಿನಗಳಲ್ಲಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿತ್ತು. ಈ ಪ್ರವಾಸದ ಸಂದರ್ಭದಲ್ಲಿ ಒಂದೆಡೆ ಧೋನಿ, ಯುವರಾಜ್ ಸಿಂಗ್, ಶಿಖರ್ ಧವನ್'ರಂತಹ ಆಟಗಾರರು ಮೈದಾನದಲ್ಲಿ ಬೆವರಿಳಿಸುತ್ತಿದ್ದರೆ, ಅತ್ತ ಅವರ ಪತ್ನಿಯರು ಬಹಳ ಎಂಜಾಯ್ ಮಾಡುತ್ತಿದ್ದರು. ಇದೇ ಪ್ರವಾಸದಲ್ಲಿ ಟೀಂ ಇಂಡಿಯಾದ ಆಟಗಾರರು ತಂಡದ 'ಮಿಸ್ಟರ್ ಕೂಲ್' ಎಂದೇ ಪ್ರಸಿದ್ಧಿ ಗಳಿಸಿರುವ ಎಮ್. ಎಸ್ ಧೋನಿಯ ಹುಟ್ಟುಹಬ್ಬವನ್ನೂ ಆಚರಿಸಿಕೊಂಡರು. ಆದರೆ ಇವೆಲ್ಲದರ ನಡುವೆ ಅದೇನಾಗಿದೆಯೋ ತಿಳಿಯದು, ಯಾಕೆಂದರೆ ಒಂದು ವರ್ಷದ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ ಯುವರಾಜ್ ಸಿಂಗ್ ಜೀವನ ಸಂಗಾತಿಯಾಗಿ ಬಂದ ಹೇಜಲ್ ಕೀಚ್ ತನ್ನ ಪತಿರಾಯನನ್ನು ಹಿಂಬಾಲಿಸುತ್ತಿರುವುದು ಕಂಡು ಬಂದಿದೆ.

ನವದೆಹಲಿ(ಜು.10): ಟೀಂ ಇಂಡಿಯಾ ಕಳೆದ ಕೆಲ ದಿನಗಳಲ್ಲಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿತ್ತು. ಈ ಪ್ರವಾಸದ ಸಂದರ್ಭದಲ್ಲಿ ಒಂದೆಡೆ ಧೋನಿ, ಯುವರಾಜ್ ಸಿಂಗ್, ಶಿಖರ್ ಧವನ್'ರಂತಹ ಆಟಗಾರರು ಮೈದಾನದಲ್ಲಿ ಬೆವರಿಳಿಸುತ್ತಿದ್ದರೆ, ಅತ್ತ ಅವರ ಪತ್ನಿಯರು ಬಹಳ ಎಂಜಾಯ್ ಮಾಡುತ್ತಿದ್ದರು. ಇದೇ ಪ್ರವಾಸದಲ್ಲಿ ಟೀಂ ಇಂಡಿಯಾದ ಆಟಗಾರರು ತಂಡದ 'ಮಿಸ್ಟರ್ ಕೂಲ್' ಎಂದೇ ಪ್ರಸಿದ್ಧಿ ಗಳಿಸಿರುವ ಎಮ್. ಎಸ್ ಧೋನಿಯ ಹುಟ್ಟುಹಬ್ಬವನ್ನೂ ಆಚರಿಸಿಕೊಂಡರು. ಆದರೆ ಇವೆಲ್ಲದರ ನಡುವೆ ಅದೇನಾಗಿದೆಯೋ ತಿಳಿಯದು, ಯಾಕೆಂದರೆ ಒಂದು ವರ್ಷದ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ ಯುವರಾಜ್ ಸಿಂಗ್ ಜೀವನ ಸಂಗಾತಿಯಾಗಿ ಬಂದ ಹೇಜಲ್ ಕೀಚ್ ತನ್ನ ಪತಿರಾಯನನ್ನು ಹಿಂಬಾಲಿಸುತ್ತಿರುವುದು ಕಂಡು ಬಂದಿದೆ.

ತನ್ನನ್ನು ಒಂದೇ ಸಮನೆ ಹಿಂಬಾಲಿಸುತ್ತಿದ್ದ ಪತ್ನಿ ಹೇಜಲ್ ತನ್ನ ಬಳಿ ಬರುವುದನ್ನು ಕಂಡ ಯುವರಾಜ್ 'ಇಲ್ಲಿ ನಿಮ್ಮ ಆಗಮನವನ್ನು ನಿರ್ಭಂಧಿಸಲಾಗಿದೆ. ಹೀಗಂತ ಗಂಡ ಹೆಂಡತಿಯರ ನಡುವೆ ಯಾವುದೇ ಜಗಳ ಆಗಿಲ್ಲ. ಅರೆ...! ಹಾಗಾದ್ರೆ ಯುವಿ ಪತ್ನಿಗೆ ಹೀಗಂದಿದ್ದು ಯಾಕೆ ಅಂತೀರಾ? ವಾಸ್ತವವಾಗಿ ಪತ್ನಿ ಹೇಜಲ್ ಪತ್ನಿಯೊಂದಿಗೆ ತಮಾಷೆಗಾಗಿ ಹೀಗೆ ನಡೆದುಕೊಂಡಿದ್ದಳು. ಇನ್ನು ಪತ್ನಿಯ ಈ ನಡೆಯನ್ನು ಕಂಡ ಯುವಿ ಕೂಡಾ ತಾನೂ ಏನೂ ಕಮ್ಮಿ ಇಲ್ಲ ಎನ್ನುವಂತೆ ತನ್ನದೇ ಶೈಲಿಯಲ್ಲಿ ಪತ್ನಿಗೆ ಸಾಥ್ ನೀಡಿದ್ದಾರೆ.

ಸದ್ಯ ಹೇಜಲ್ ತನ್ನ ಇನ್ಸ್ಟಾಗ್ರಾಂ ಅಕೌಂಟ್'ನಲ್ಲಿ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿದ್ದು, ಇದರಲ್ಲಿ ಆಕೆ ಯುವಿಯನ್ನು ಹಿಂಬಾಲಿಸುತ್ತಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ. ಈ ವಿಚಾರವನ್ನು ಖುದ್ದು ಹೇಜಲ್ ಈ ವಿಡಿಯೋದಲ್ಲಿ ತಿಳಿಸಿದ್ದಾರೆ. ವಿಡಿಯೋದಲ್ಲಿ ತನ್ನನ್ನು ತಾನು 'ಸ್ಟೆಸಿ ಸ್ಟಾಕರ್'(ಸ್ಟೆಸಿ ಹೆಸರಿನ ಯುವತಿಯನ್ನು ಹಿಂಬಾಲಿಸುವ ಯುವತಿ) ಎಂದು ಹೇಜಲ್ ಹೇಳಿಕೊಂಡಿದ್ದಾರೆ. ಇನ್ನು ವಿಡಿಯೋ ಕ್ಯಾಪ್ಶನ್'ನಲ್ಲಿ 'ಇಂದು ಮತ್ತೋರ್ವ ಹೊಸ ವ್ಯಕ್ತಿಯೊಂದಿಗೆ ಫ್ರೆಂಡ್'ಶಿಪ್ ಮಾಡಿದೆ ಯುವರಾಜ್ ಸಿಂಗ್, ಆತ ತುಂಬಾ ಸುಂದರವಾಗಿದ್ದಾನೆ. ಜನರನ್ನು ಹಿಂಬಾಲಿಸುವ ಸ್ಟೆಸಿ ಇಂದು ಹಲವರೊಂದಿಗೆ ಫ್ರೆಂಡ್'ಶಿಪ್ ಮಾಡಿಕೊಂಡಿದ್ದಾಳೆ' ಎಂದು ಬರೆದಿದ್ದಾರೆ.

ವಿಡಿಯೋದಲ್ಲಿ ಸ್ಟೆಸಿಯಾಗಿರುವ ಹೇಜಲ್ ನಿಧಾನವಾಗಿ ಯುವರಾಜ್ ಸಿಂಗ್'ರನ್ನು ಹಿಂಬಾಲಿಸಲಾರಂಭಿಸುತ್ತಾರೆ. ಈ ಸಂದರ್ಭದಲ್ಲಿ ಪತಿ ತನ್ನನ್ನು ಗಮನಿಸುತ್ತಿರುವುದನ್ನು ಕಂಡು 'ಹಾಯ್' ಎನ್ನುತ್ತಾರೆ. ಇನ್ನು ಯುವಿ ಕುಳಿತ ಕೋಣೆಗೆ ತಲುಪುತ್ತಿದ್ದಂತೆಯೇ, ಪತಿಯನ್ನು ನೋಡಿದ ಹೇಜಲ್ ಬಹಳಷ್ಟು ಅಚ್ಚರಿಪಟ್ಟುಕೊಳ್ಳುತ್ತಾರೆ. ಇನ್ನು ಪತ್ನಿ ಹೇಜಲ್'ನ ಈ ಸ್ಟೆಸಿ ಯುವತಿಯ ಅವತಾರ ಕಂಡ ಯುವರಾಜ್ ಸಿಂಗ್ ತನ್ನದೇ ಶೈಲಿಯಲ್ಲಿ 'ಅಸಹಜ ವ್ಯಕ್ತಿಗಳು ಇಲ್ಲಿ ಬರಲು ಅನುಮತಿ ಇಲ್ಲ' ಎನ್ನುತ್ತಾರೆ.

ಹೇಜಲ್ ಕೀಚ್ ಶೇರ್ ಮಾಡಿಕೊಂಡಿರುವ ಈ ಹಾಸ್ಯಾಸ್ಪದ ವಿಡಿಯೋವನ್ನು ಹಲವಾರು ಮಂದಿ ಇಷ್ಟಪಟ್ಟಿದ್ದಾರೆ. ಸ್ಟೆಸಿ ಯುವತಿಯ ಅವತಾರದಲ್ಲಿ ಅವರು ಯುವಿಯನ್ನು ಫಾಲೋ ಮಾಡುವುದರಲ್ಲಿ ಅವರೆಷ್ಟು ಸಫಲರಾಗಿದ್ದಾರೆ ಎಂಬುವುದು ತಿಳಿದಿಲ್ಲ. ಆದರೆ ಯುವಿಯ ಪತ್ನಿ ಹೇಜಲ್ ಕೀಚ್ ಆಗಿ ತನ್ನ ಪತಿಯ ಮೇಲೆ ಅವರ ಗಮನ ಯಾವತ್ತೂ ಇದ್ದೇ ಇರುತ್ತದೆ.