ಇಲ್ಲಿನ ಸರ್ಕಾರಿ ಶಾಲೆಯಲ್ಲಿ ವಿಜ್ಞಾನ ಮತ್ತು ಗಣಿತ ಪಠ್ಯದ ಶಿಕ್ಷಕರಾಗಿರುವ ರಾಜರಾಂ ಅವರು ಶಾಲಾ ವಾಹನದ ಚಾಲಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಶಿಕ್ಷಕ ರಾಜರಾಂ ಅವರ ಸ್ವಯಂ ಪ್ರವೃತ್ತಿಯ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದು ಮಾಜಿ ಕ್ರಿಕೆಟಿಗ ಲಕ್ಷ್ಮಣ್ ಕೊಂಡಾಡಿದ್ದಾರೆ.
ಉಡುಪಿ[ಜು.24]: ಇಲ್ಲಿನ ಬ್ರಹ್ಮಾವರ ತಾಲೂಕಿನ ಬಾರಾಳಿ ಗ್ರಾಮದ ಶಾಲೆಯ ಶಿಕ್ಷಕನ ಕಾರ್ಯಕ್ಕೆ ಭಾರತದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಷಯವನ್ನು ಲಕ್ಷ್ಮಣ್ ತಮ್ಮ ಟ್ವೀಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇಲ್ಲಿನ ಸರ್ಕಾರಿ ಶಾಲೆಯಲ್ಲಿ ವಿಜ್ಞಾನ ಮತ್ತು ಗಣಿತ ಪಠ್ಯದ ಶಿಕ್ಷಕರಾಗಿರುವ ರಾಜರಾಂ ಅವರು ಶಾಲಾ ವಾಹನದ ಚಾಲಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಶಿಕ್ಷಕ ರಾಜರಾಂ ಅವರ ಸ್ವಯಂ ಪ್ರವೃತ್ತಿಯ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದು ಮಾಜಿ ಕ್ರಿಕೆಟಿಗ ಲಕ್ಷ್ಮಣ್ ಕೊಂಡಾಡಿದ್ದಾರೆ. ಇಲ್ಲಿನ ಶಾಲೆಗೆ ಸ್ಥಳೀಯ ಪ್ರದೇಶದಿಂದ ಮಕ್ಕಳು ಆಗಮಿಸುತ್ತಾರೆ. ರಾಜಾರಾಂ ಶಾಲೆ ಸುತ್ತಮುತ್ತಲಿನ ಪ್ರದೇಶವಾದ ಕಲ್ಲುಬೆಟ್ಟು, ಹೊರಳಿಜೆಡ್ಡು, ಅಲ್ತಾರು, ಕಾರ್ತಿಬೆಟ್ಟು, ಕಾಜ್ರಳ್ಳಿ ಇತರೆಡೆಯಿಂದ ಸುಮಾರು 30 ಕಿ. ಮೀ. ದೂರದಲ್ಲಿರುವ ಮಕ್ಕಳನ್ನು ಪ್ರತಿನಿತ್ಯ ಶಾಲೆಗೆ ಕರೆತಂದು, ವಾಪಸ್ಸು ಮನೆಗಳಿಗೆ ಕರೆದುಕೊಂಡು ಹೋಗುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.
ಈ ಹಿಂದೆ ಇದೇ ಶಾಲೆಯಲ್ಲಿ 7 ರಿಂದ 7 ರವರೆಗೆ 5 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದರು. ಇದೀಗ ಮಕ್ಕಳ ಗಣತಿಯಲ್ಲಿ ಅಮೂಲಾಗ್ರ ಏರಿಕೆ ಕಂಡಿದೆ. ಅಂದಹಾಗೆ ರಾಜಾರಾಂ ಅವರಿಗೆ ವಾಹನದ ಸೌಕರ್ಯ ನೀಡಿರುವುದು ಶ್ರೀರಾಮ ಸೇವಾ ಸಮಿತಿ ಮೂಲಕ ಎಂದು ಈ ಶಾಲೆಯ ಹಳೇ ವಿದ್ಯಾರ್ಥಿ ವಿಜಯ ಹೆಗ್ಡೆ ಹೇಳಿದ್ದಾರೆ. ಈ ಮಿನಿ ಬಸ್‌ನ ನಿರ್ವಹಣೆ ವೆಚ್ಚವನ್ನು ರಾಜಾರಾಂ ಅವರೇ ನಿರ್ವಹಿಸುತ್ತಿದ್ದಾರೆ.
