ನವದೆಹಲಿ(ಅ.03): ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾಡಿದ ಭಾಷಣದ ಬಳಿಕ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗಿದೆ. ಇಷ್ಟೇ ಅಲ್ಲ ಇಮ್ರಾನ್ ಭಾಷಣ ನಗೆಪಾಟಲೀಗೀಡಾಗಿದೆ. ಅಮೇರಿಕಾ ಮಾಧ್ಯಮದ ಜೊತೆಗಿನ ಮಾತುಕತೆಯಲ್ಲಿ ಇಮ್ರಾನ್ ಬುರುಡೆ ಬಂಡವಾಳ ಸಾಕಷ್ಟು ಟ್ರೋಲ್ ಆಗಿತ್ತು. ಇದೀಗ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, ಪಾಕ್ ಪ್ರಧಾನಿ ಕಾಲೆಳೆದಿದ್ದಾರೆ.

ಇದನ್ನೂ ಓದಿ: ಪಾಕ್ ಮೇಲೆ ಬಾಂಬ್ ದಾಳಿ: ಸೆಹ್ವಾಗ್ ಟ್ವೀಟ್ ಅದ್ಭುತ!

ನೇರ ಪ್ರಸಾರ ಕಾರ್ಯಕ್ರಮದಲ್ಲಿ ಇಮ್ರಾನ್ ಮಾತು ಕೇಳಿಸಿಕೊಂಡ ಅಮೇರಿಕಾ ಮಾಧ್ಯಮದ ನಿರೂಪಕನ ಪ್ರತಿಕ್ರಿಯೆ ಇದೀಗ ವೈರಲ್ ಆಗಿದೆ. ಅಭಿವೃದ್ಧಿ ಚೀನಾಗೆ ಭೇಟಿ ನೀಡಿದರೆ ಅದ್ಭುತ ಎಂದೆನಿಸುತ್ತೆ. ಆದರೆ ನ್ಯೂಯಾರ್ಕ್‌ ರಸ್ತೆಯಲ್ಲಿ ಕಾರು ಸಲೀಸಾಗಿ ಪ್ರಯಾಣ ಮಾಡುತ್ತಿಲ್ಲ, ಜಂಪಿಂಗ್ ಮಾಡುತ್ತಿದೆ. ಎಂದಿದ್ದಾರೆ.  

ಇದನ್ನೂ ಓದಿ: ಸೆಲೆಕ್ಟರ್ ಆಗಲು ಹೊರಟ ಸೆಹ್ವಾಗ್‌; ಅಭಿಮಾನಿಗಳಿಂದ ಟ್ರೋಲ್!

ಇಮ್ರಾನ್ ಮಾತಿಗೆ ನಕ್ಕ ನಿರೂಪಕ, ನಿಮ್ಮ ಮಾತಿನಲ್ಲಿನೀವು ಪಾಕಿಸ್ತಾನ ಪ್ರಧಾನಿ ಅನ್ನೋದು ತಿಳಿಯುತ್ತಿಲ್ಲ. ಬದಲಾಗಿ ನ್ಯೂಯಾರ್ಕ್‌ನ ವೆಲ್ಡರ್ ರೀತಿ ಭಾಸವಾಗುತ್ತಿದೆ ಎಂದು ತಿರುಗೇಟು ನೀಡಿದ್ದಾರೆ. ಇದೇ ವಿಡಿಯೋವನ್ನು ಪೋಸ್ಟ್ ಮಾಡಿರುವ ಸೆಹ್ವಾಗ್, ತನ್ನನ್ನು ತಾನು ಅಪಮಾನಕ್ಕೆ ಗುರಿಯಾಗಿಸುವ ಹೊಸ ವಿಧಾನ ಇಮ್ರಾನ್ ತೋರಿಸಿಕೊಟ್ಟಿದ್ದಾರೆ ಎಂದು ಸೆಹ್ವಾಗ್ ಹೇಳಿದ್ದಾರೆ.

ಅಮೇರಿಕಾದಲ್ಲಿನ ಇಮ್ರಾನ್ ಖಾನ್ ಭಾಷಣಕ್ಕೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರು ಆಕ್ರೋಷ ವ್ಯಕ್ತಪಡಿಸಿದ್ದರು. ಇದೀಗ ಸೆಹ್ವಾಗ್ ವಿಡಿಯೋ ಮೂಲಕ ಇಮ್ರಾನ್ ಕಾಲೆಳೆದಿದ್ದಾರೆ.