ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ವಿರುದ್ಧ ಲೈಂಗಿಕ ಕಿರುಕುಳದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳಲು ಬಿಸಿಸಿಐನಲ್ಲೇ ಭಿನ್ನಾಭಿಪ್ರಾಯಗಳು ಕೇಳುತ್ತಿರುವುದು ಬೇಸರ ಮೂಡಿಸಿದೆ ಎಂದು ಹೇಳಿದ್ದಾರೆ.
ನವದೆಹಲಿ[ಅ.31]: ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ, ಭಾರತೀಯ ಕ್ರಿಕೆಟ್ ಅಪಯಾದಲ್ಲಿದೆ ಎಂದು ಮಂಗಳವಾರ ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ:ಬಿಸಿಸಿಐ ಮುಂದಿನ ಅಧ್ಯಕ್ಷರಾಗ್ತಾರ ಸೌರವ್ ಗಂಗೂಲಿ?
ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ವಿರುದ್ಧ ಲೈಂಗಿಕ ಕಿರುಕುಳದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳಲು ಬಿಸಿಸಿಐನಲ್ಲೇ ಭಿನ್ನಾಭಿಪ್ರಾಯಗಳು ಕೇಳುತ್ತಿರುವುದು ಬೇಸರ ಮೂಡಿಸಿದೆ ಎಂದು ಹೇಳಿದ್ದಾರೆ. ಈ ಕುರಿತು ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಮತ್ತು ಅಧ್ಯಕ್ಷ ಸಿ.ಕೆ.ಖನ್ನಾಗೆ ಕಳಿಸಿರುವ ಇ-ಮೇಲ್‌ನಲ್ಲಿ ಹಲವು ವಿಷಯಗಳ ವಿರುದ್ಧ ಬರೆದಿದ್ದಾರೆ.
’ಪಂದ್ಯಾವಳಿ ನಡೆಯುತ್ತಿರುವ ವೇಳೆಯಲ್ಲಿಯೇ ನಿಯಮಾವಳಿಗಳನ್ನು ಬದಲಿಸಿದ್ದಾರೆ. ಇದನ್ನು ನೋಡಿದರೆ ಭಾರತೀಯ ಕ್ರಿಕೆಟ್ ಅಪಾಯದತ್ತ ಸಾಗುತ್ತಿದೆ ಎಂದನಿಸುತ್ತಿದೆ ಎಂದು ಗಂಗೂಲಿ ಆತಂಕ ವ್ಯಕ್ತಪಡಿಸಿದ್ದಾರೆ.
