Asianet Suvarna News Asianet Suvarna News

ಶಿಖರ್ ಧವನ್ ಪತ್ನಿ ಆಯೇಷಾ ಬಿಚ್ಚಿಟ್ರು ಲವ್ ಸ್ಟೋರಿ ಸೀಕ್ರೆಟ್!

ಟೀಂ ಇಂಡಿಯಾ ಕ್ರಿಕೆಟರ್ ಶಿಖರ್ ಧವನ್ ಹಾಗೂ ಮೆಲ್ಬೋರ್ಟ್ ಬಾಕ್ಸರ್ ಅಯೇಷಾ ಮುಖರ್ಜಿ ಮದುವೆಯಾಗಿ 5 ವರ್ಷಗಳು ಉರುಳಿದೆ. ಇದೀಗ ಇವರಿಬ್ಬರ ಲವ್ ಸ್ಟೋರಿ ಸೀಕ್ರೆಟ್ ಬಯಲಾಗಿದೆ. ಇಲ್ಲಿದೆ ಗಪ್ ಚುಪ್ ಪ್ರೀತಿ ವಿವರ.

Cricketer Shikhar Dhawan wife Ayesha Mukharjee reveals their love story
Author
Bengaluru, First Published Sep 26, 2018, 5:07 PM IST
  • Facebook
  • Twitter
  • Whatsapp

ದುಬೈ(ಸೆ.26): ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ 2012ರಲ್ಲಿ ಭಾರತೀಯ ಮೂಲದ ಮೆಲ್ಬೋರ್ನ್ ಬಾಕ್ಸರ್ ಆಯೇಷಾ ಮುಖರ್ಜಿಯನ್ನ ಮದುವೆಯಾದರು. ಬಳಿಕ ಬಹುತೇಕ ಪಂದ್ಯಗಳಲ್ಲಿ ಧವನ್‌ಗೆ ಆಯೇಷ ಬೆಂಬಲಿಸಿದ್ದಾರೆ.

ಶಿಖರ್ ಧವನ್ ಹಾಗೂ ಆಯೇಷಾ ಮುಖರ್ಜಿ ಮದುವೆ ಎಲ್ಲಿರಿಗೂ ತಿಳಿದಿದೆ. ಆದರೆ ಇವರ ಲವ್ ಸ್ಟೋರಿ ಮಾತ್ರ ಹೆಚ್ಚಿನವರಿಗೆ ತಿಳಿದಿಲ್ಲ. ಟೀಂ ಇಂಡಿಯಾ ಕ್ರಿಕೆಟಿಗ, ಮೆಲ್ಬೋರ್ನ್ ಬಾಕ್ಸರ್ ಎಲ್ಲಿಂದ ಎಲ್ಲಿಗೆ ಅನ್ನೋ ಪ್ರಶ್ನೆಗೆ ಇದೀಗ ಸ್ವತಃ ಆಯೇಷ ಮುಖರ್ಜಿ ಉತ್ತರ ನೀಡಿದ್ದಾರೆ.

ಮಿಸ್ ಫೀಲ್ಡ್ ಅನ್ನೋ ಖಾಸಗಿ ಸಂದರ್ಶನದಲ್ಲಿ ಧವನ್ ಹಾಗೂ ಆಯೇಷಾ ಲವ್ ಸ್ಟೋರಿ ಹೇಳಿದ್ದಾರೆ. ಇವರಿಬ್ಬರು ಮೊದಲು ಪರಿಚಯವಾಗಿದ್ದು ಫೇಸ್‌ಬುಕ್‌ನಿಂದ. ಹೀಗಾಗಿ ಆಯೇಷ ಫೇಸ್‌ಬುಕ್‌ಗೆ ಧನ್ಯವಾದ ಹೇಳಿದ್ದಾರೆ.

ಆಯೇಷಾ ಅಮೆಚ್ಯೂರ್ ಬಾಕ್ಸರ್ ಆಗಿದ್ದ ಕಾರಣ ಕ್ರಿಕೆಟ್ ಹಾಗೂ ಇತರ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದರು. ಆರಂಭದಲ್ಲಿಧವನ್, ಆಯೇಷಾಗೆ ಫೇಸ್‌ಬುಕ್ ರಿಕ್ವೆಸ್ಟ್ ಕಳುಹಿಸಿದ್ದಾರೆ. ಐದೇ ನಿಮಿಷದಲ್ಲಿ ಆಯೇಷ ಆಹ್ವಾನವನ್ನ ಸ್ವೀಕರಿಸಿದ್ದಾರೆ. ಬಳಿಕ ಇವರ ಚಾಟಿಂಗ್  ಶುರುವಾಗಿದೆ.

ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹ ಪ್ರೀತಿಯಾಗಿ, ಪ್ರೀತಿ ಮದುವೆಯ ಅರ್ಥ ಪಡೆದು ವರ್ಷಗಳೇ ಉರಳಿದೆ. ಇದೀಗ ಇವರಿಬ್ಬರ ನಡುವಿನ ಲವ್ ಸ್ಟೋರಿ ಸೀಕ್ರೆಟ್ ಬಯಲಾಗಿದೆ.
 

Follow Us:
Download App:
  • android
  • ios