ಈಗಾಗಲೇ ಹರ್ಮನ್‌ಪ್ರೀತ್ ಅವರಿಗೆ 5 ಲಕ್ಷ ಬಹುಮಾನ ನೀಡುವುದಾಗಿ ಅಮರೀಂದರ್ ಸಿಂಗ್ ನೇತೃತ್ವ ಪಂಜಾಬ್ ಸರ್ಕಾರ ಹೇಳಿದೆ.
ಚಂಢೀಗಡ(ಜು.24): ಭಾರತ ಮಹಿಳಾ ತಂಡದ ಸ್ಟಾರ್ ಬ್ಯಾಟ್ಸ್'ವುಮನ್ ಹರ್ಮನ್ಪ್ರೀತ್ ಕೌರ್ ಅವರಿಗೆ ಪಂಜಾಬ್ ಪೊಲೀಸ್ ಇಲಾಖೆಯಲ್ಲಿ ಡಿಎಸ್'ಪಿ ಹಂತದ ಹುದ್ದೆಯನ್ನು ನೀಡುವುದಾಗಿ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಹೇಳಿದ್ದಾರೆ.
ಇಂಗ್ಲೆಂಡ್'ನಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಹರ್ಮನ್ಪ್ರೀತ್ ಪ್ರಭಾವಿ ಆಟದೊಂದಿಗೆ ತಂಡವನ್ನು ಫೈನಲ್'ಗೆ ಕೊಂಡೊಯ್ದಿದ್ದರು. ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ನಿರ್ಣಾಯಕ ಸೆಮೀಸ್'ನಲ್ಲಿ ಅಜೇಯ 171 ರನ್'ಗಳಿಸಿ ತಂಡದ ಜಯದಲ್ಲಿ ಮಹತ್ವದ ಪಾತ್ರವಹಿಸಿದ್ದರು.
ಇದೀಗ ಮೊಗಾದಲ್ಲಿ ಹರ್ಮನ್ಪ್ರೀತ್ ಅವರ ತಂದೆಯಾದ ಹರ್ಮಂದರ್ ಸಿಂಗ್ ಅವರೊಂದಿಗೆ ಡಿಎಸ್ಪಿ ಹುದ್ದೆ ನೀಡುವುದರ ಬಗ್ಗೆ ಮುಖ್ಯಮಂತ್ರಿ ಮಾತನಾಡಿದ್ದಾರೆ.
ಈಗಾಗಲೇ ಹರ್ಮನ್ಪ್ರೀತ್ ಅವರಿಗೆ 5 ಲಕ್ಷ ಬಹುಮಾನ ನೀಡುವುದಾಗಿ ಅಮರೀಂದರ್ ಸಿಂಗ್ ನೇತೃತ್ವ ಪಂಜಾಬ್ ಸರ್ಕಾರ ಹೇಳಿದೆ.
