ಟೀಂ ಇಂಡಿಯಾ ಅಲ್ರೌಂಡರ್ ಹಾರ್ದಿಕ್ ಪಾಂಡ್ಯ ಪ್ರತಿ ದಿನ ಸಂಕಷ್ಟ ಹೆಚ್ಚಾಗುತ್ತಿದೆ. ಅಸಭ್ಯ ಹೇಳಿಕೆಯಿಂದ ಟೀಂ ಇಂಡಿಯಾದಿಂದ ಅಮಾನತಾಗಿರುವ ಪಾಂಡ್ಯ ಜೊತೆಗಿನ ಖಾಸಗಿ ಜಾಹೀರಾತು ಒಪ್ಪಂದ ಕೂಡ ಕೈತಪ್ಪಿದೆ. ಇದರ ಬೆನ್ನಲ್ಲೇ ಕ್ರೀಡಾ ಸದಸ್ಯತ್ವ ಕೂಡ ರದ್ದಾಗಿದೆ.

ಮುಂಬೈ(ಜ.16): ಖಾಸಗಿ ಟಿವಿ ಕಾರ್ಯಕ್ರಮದಲ್ಲಿ ಮಹಿಳೆಯರು ಕುರಿತು ಅಸಭ್ಯ ಹೇಳಿಕೆ ನೀಡಿರುವ ಟೀಂ ಇಂಡಿಯಾ ಅಲ್ರೌಂಡರ್ ಹಾರ್ದಿಕ್ ಪಾಂಡ್ಯಗೆ ಪ್ರತಿ ದಿನ ಒಂದೊಂದು ಸಂಕಷ್ಟ ಎದುರಾಗುತ್ತಿದೆ. ಈಗಾಗಲೇ ಟೀಂ ಇಂಡಿಯಾದಿಂದ ಅಮಾನತಾಗಿರುವ ಪಾಂಡ್ಯ, ಇದೀಗ ಪ್ರತಿಷ್ಠಿತ ಕ್ರೀಡಾ ಸದಸ್ಯತ್ವ ಕೂಡ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: ಬ್ಯಾಡ್ ಟಾಕ್: ಟೀಕೆಗಳಿಂದ ಸುಸ್ತಾದ ರಾಹುಲ್ -ಹಾರ್ದಿಕ್

ಭಾರತ ತಂಡದಿಂದ ಅಮಾನತುಗೊಂಡಿರುವ ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯಗೆ ನೀಡಿದ್ದ ಗೌರವ ಸದಸ್ಯತ್ವವನ್ನು ಮಂಗಳವಾರ ಇಲ್ಲಿನ ಪ್ರತಿಷ್ಠಿತ ಖಾರ್‌ ಜಿಮ್ಖಾನಾ ಹಿಂಪಡೆದಿದೆ. ‘ಜಿಮ್ಖಾನಾ ವತಿಯಿಂದ ಕ್ರೀಡಾಪಟುಗಳಿಗೆ ಗೌರವ ಸದಸ್ಯತ್ವ ನೀಡಲಾಗುತ್ತದೆ. 2018ರ ಅಕ್ಟೋಬರ್‌ನಲ್ಲಿ ಪಾಂಡ್ಯಗೆ ಈ ಗೌರವ ಸದಸ್ಯತ್ವ ನೀಡಲಾಗಿತ್ತು. 

ಇದನ್ನೂ ಓದಿ: ಟೀಂ ಇಂಡಿಯಾ ಕ್ರಿಕೆಟಿಗರ ಕಪ್ ಆಫ್ ಟಿ - ಟ್ರೋಲ್ ಆದ ಹಾರ್ದಿಕ್ ಪಾಂಡ್ಯ!

ಪಾಂಡ್ಯ ಅಸಭ್ಯ ಹೇಳಿಕೆಯಿಂದ ಕ್ಲಬ್‌ನ ವ್ಯವಸ್ಥಾಪಕ ಸಮಿತಿ ಪಾಂಡ್ಯರಿಂದ ಗೌರವ ಸದಸ್ಯತ್ವವನ್ನು ಹಿಂಪಡೆಯಲು ಸೋಮವಾರ ಸಂಜೆ ತೀರ್ಮಾನಿಸಿತು’ ಎಂದು ಪ್ರಧಾನ ಕಾರ್ಯದರ್ಶಿ ಗೌರವ್‌ ಕಪಾಡಿಯಾ ಹೇಳಿದ್ದಾರೆ.