ನವದೆಹಲಿ[ಡಿ.07]: ಭಾರತ ತಂಡದ ಮಾಜಿ ನಾಯಕ ಎಂ.ಎಸ್‌.ಧೋನಿ ಜತೆ ಯಾವುದೇ ಮನಸ್ತಾಪವಿಲ್ಲ ಎಂದು ಗೌತಮ್‌ ಗಂಭೀರ್‌ ಸ್ಪಷ್ಟಪಡಿಸಿದ್ದಾರೆ. 

ಕೈಯಾರೆ ತನ್ನ ಕೆರಿಯರ್ ಹಾಳು ಮಾಡ್ಕೊಂಡ್ರಾ ಗೌತಮ್ ಗಂಭೀರ್?

ಗಂಭೀರ್‌ ಅವಕಾಶಗಳ ಕೊರತೆ ಎದುರಿಸಲು ಧೋನಿಯೇ ಕಾರಣ ಎನ್ನುವ ವದಂತಿ ಇತ್ತು. ಅದಕ್ಕೆ ಗಂಭೀರ್‌ ತೆರೆ ಎಳೆದಿದ್ದಾರೆ. ನಿವೃತ್ತಿ ಪಂದ್ಯವನ್ನಾಡುತ್ತಿರುವ ಗಂಭೀರ್‌ ತಮ್ಮನ್ನು 2015ರ ಏಕದಿನ ವಿಶ್ವಕಪ್‌ಗೆ ಆಯ್ಕೆ ಮಾಡದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. 

ಕ್ರಿಕೆಟ್‌ಗೆ ದಿಢೀರ್‌ ವಿದಾಯ ಹೇಳಿದ ಎರಡೆರಡು ವಿಶ್ವಕಪ್‌ ಹೀರೋ

‘ನನ್ನ ಜತೆ ಆಡಿದ ಕೆಲ ಆಟಗಾರರಿಗೆ 2-3 ವಿಶ್ವಕಪ್‌ಗಳಲ್ಲಿ ಆಡುವ ಅವಕಾಶ ಸಿಕ್ಕಿತು. ನನಗೆ ಆ ಅನುಭವ ಸಿಕ್ಕಿದ್ದು ಒಮ್ಮೆ ಮಾತ್ರ. ಆದರೆ ವಿಶ್ವಕಪ್‌ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕೆ ಹೆಮ್ಮೆ ಇದೆ’ ಎಂದು ಗಂಭೀರ್‌ ಹೇಳಿದ್ದಾರೆ.

ಕ್ರಿಕೆಟ್‌ಗೆ ಗೌತಮ್ ಗಂಭೀರ್ ಗುಡ್‌ ಬೈ : ಬಿಜೆಪಿ ಸೇರ್ಪಡೆ..?

ಪ್ರಸ್ತುತ ನಡೆಯುತ್ತಿರುವ ಡೆಲ್ಲಿ-ಆಂಧ್ರ ಪ್ರದೇಶ ನಡುವಿನ ರಣಜಿ ಪಂದ್ಯ ಗಂಭೀರ್ ಪಾಲಿಗೆ ವಿದಾಯದ ಪಂದ್ಯವಾಗಿರಲಿದೆ. ಇನ್ನು ಗಂಭೀರ್ ರಾಜಕೀಯ ಸೇರಲಿದ್ದಾರೆ ಎನ್ನುವ ವದಂತಿಯೂ ಇದೆ.