ಕಾಮನ್'ವೆಲ್ತ್ ಗೇಮ್ಸ್ 2022 ಆಯೋಜನೆ ಬರ್ಮಿಂಗ್ ಹ್ಯಾಮ್ ಪಾಲಾದರೆ ಪುರುಷರ ಕ್ರಿಕೆಟ್ ಮತ್ತೆ ವಾಪಾಸ್ಸಾಗಲಿದೆ. ಸದ್ಯ ಡರ್ಬನ್ ತನ್ನ ರಾಜಕಾರಣ ಹಾಗೂ ಆರ್ಥಿಕ ವಿವಾದಗಳಿಂದ ಕಾಮನ್ ವೆಲ್ತ್ ಗೇಮ್ಸ್ ಆಯೋಜನೆಯಿಂದ ಹಿಂದೆ ಸರಿದಿದೆ. ಹೀಗಾಗಿ ಬ್ರಿಟನ್ ಸರ್ಕಾರ ಸದ್ಯ ಕಾಮನ್ ವೆಲ್ತ್ ಆಯೋಜನೆಯ ಹರಾಜು ಪ್ರಕ್ರಿಯೆಗೆ ಬರ್ಗಿಂಗ್ ಹ್ಯಾಮ್'ಗೆ ಆಮಂತ್ರಣ ನೀಡಿದೆ.

ನವದೆಹಲಿ(ಎ.26): ಕಾಮನ್'ವೆಲ್ತ್ ಗೇಮ್ಸ್ 2022 ಆಯೋಜನೆ ಬರ್ಮಿಂಗ್ ಹ್ಯಾಮ್ ಪಾಲಾದರೆ ಪುರುಷರ ಕ್ರಿಕೆಟ್ ಮತ್ತೆ ವಾಪಾಸ್ಸಾಗಲಿದೆ. ಸದ್ಯ ಡರ್ಬನ್ ತನ್ನ ರಾಜಕಾರಣ ಹಾಗೂ ಆರ್ಥಿಕ ವಿವಾದಗಳಿಂದ ಕಾಮನ್ ವೆಲ್ತ್ ಗೇಮ್ಸ್ ಆಯೋಜನೆಯಿಂದ ಹಿಂದೆ ಸರಿದಿದೆ. ಹೀಗಾಗಿ ಬ್ರಿಟನ್ ಸರ್ಕಾರ ಸದ್ಯ ಕಾಮನ್ ವೆಲ್ತ್ ಆಯೋಜನೆಯ ಹರಾಜು ಪ್ರಕ್ರಿಯೆಗೆ ಬರ್ಗಿಂಗ್ ಹ್ಯಾಮ್'ಗೆ ಆಮಂತ್ರಣ ನೀಡಿದೆ.

ಡರ್ಬನ್'ನಲ್ಲಿ ನಡೆಯಲಿದ್ದ ಕಾಮನ್ ವೆಲ್ತ್ ಗೇಮ್ಸ್'ನಲ್ಲಿ ಈಗಾಗಲೇ ಮಹಿಳಾ ಕ್ರಿಕೆಟ್'ನ್ನು ಶಾಮೀಲು ಮಾಡಲಾಗಿತ್ತು. ಆದರೆ ಇದೀಗ ಪುರುಷರ ಕ್ರಿಕೆಟ್ ಕೂಡಾ ಸೇರ್ಪಡೆಗೊಳ್ಳುವ ಲಕ್ಷಣಗಳು ಕಂಡು ಬಡುತ್ತಿವೆ. ಹೀಗಾಗದಲ್ಲಿ ಬರೋಬ್ಬರಿ 24 ವರ್ಷಗಳ ಬಳಿಕ ಕ್ರಿಕೆಟ್ ಕಾಮನ್'ವೆಲ್ತ್'ಗೆ ಮತ್ತೆ ಸೇರ್ಪಡೆಗೊಂಡಂತಾಗುತ್ತದೆ. ಕ್ರಿಕೆಟ್ ಮಂಡಳಿಯ ಮುಖ್ಯ ಕಾರ್ಯಕಾರಿ ಅಧಿಕಾರಿ ಹಾಗೂ ಬರ್ಮಿಂಗ್ ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ ಆಟಗಳ ಹರಾಜು ಕಂಪೆನಿಯ ಸದಸ್ಯರಾಗಿರುವ ನೀಲ್ ಸ್ನೋ ಬಾಲ್ ಈ ವಿಚಾರವನ್ನು ಪುಷ್ಠೀಕರಿಸಿದ್ದಾರೆ. ಇವರು ICC ಹಾಗೂ ECB ಜೊತೆಗೂಡಿ ಕ್ರಿಕೆಟ್'ನ್ನು ಮತ್ತೆ ಕಾಮನ್ವೆಲ್ತ್ ಗೆ ಸೇರ್ಪಡಿಸುವ ಉದ್ದೇಶ ಹೊಂದಿದ್ದು, ಇದು ಟಿ 20 ಮಾದರಿಯಲ್ಲೇ ಇರಲಿದೆ ಎಂದು ತಿಳಿದು ಬಂದಿದೆ.

ಸದ್ಯ ಕಾಮನ್'ವೆಲ್ತ್ ಆಯೋಜನೆ ಮಾಡುವ ರೇಸ್'ನಲ್ಲಿ ಕೇವಲ ಬರ್ಮಿಂಗ್ ಹ್ಯಾಮ್ ಮಾತ್ರವಲ್ಲದೇ, ಕೆನಡಾ, ಮಲೇಷ್ಯಾ ಹಾಗೂ ಆಸ್ಟ್ರೇಲಿಯಾ ಪಟ್ಟಣಗಳಿವೆ. ಲಿವರ್ ಪೂಲ್ ಕೂಡಾ ಆಯೋಜನೆಯಲ್ಲಿ ಉತ್ಸಾಹ ತೋರಿಸಿದೆ.

ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಬ್ರಿಟನ್ ಸರ್ಕಾರಕ್ಕೆ ಮನವಿ ಸಲ್ಲಿಸಲು ಎಪ್ರಿಲ್ 28 ಅಂತಿಮ ದಿನಾಂಕವಾಗಿದ್ದು, ಈ ಕುರಿತಾದ ಕೊನೆಯ ನಿರ್ಧಾರ ಜುಲೈನಲ್ಲಿ ತೆಗೆದುಕೊಳ್ಳಲಾಗುತ್ತದೆ. ECB ಈಗಾಗಲೇ ಕಾಮನ್ವೆಲ್ತ್ ಗೇಮ್ಸ್'ನಲ್ಲಿ ಕ್ರಿಕೆಟ್'ನ್ನು ಸೇರ್ಪಡಿಸಲು ತನ್ನ ಒಪ್ಪಿಗೆ ನೀಡಿದೆಯಾದರೂ, ICC ಯಿಂದ ಗ್ರೀನ್ ಸಿಗ್ನಲ್ ಬರುವುದು ಬಾಕಿ ಇದೆ.

ಕೃಪೆ: Aaj Tak