Asianet Suvarna News Asianet Suvarna News

ಕೊಹ್ಲಿ ಇದೀಗ 10 ಸಾವಿರ ರನ್ ಸಿಡಿಸಿದ ಸರದಾರ..!

ಕೇವಲ 205 ಇನ್ನಿಂಗ್ಸ್’ಗಳಲ್ಲಿ ವಿರಾಟ್ ಕೊಹ್ಲಿ 10 ಸಾವಿರ ರನ್ ಪೂರೈಸುವ ಮೂಲಕ ಅತಿವೇಗವಾಗಿ ಈ ಸಾಧನೆ ಮಾಡಿದ ಕ್ರಿಕೆಟಿಗ ಎನ್ನುವ ಕೀರ್ತಿಗೆ ವಿರಾಟ್ ಪಾತ್ರರಾಗಿದ್ದಾರೆ. ಈ ಮೊದಲು ಭಾರತದ ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಹಾಗೂ ಮಹೇಂದ್ರ ಸಿಂಗ್ ಧೋನಿ 10 ಸಾವಿರ ರನ್ ಪೂರೈಸಿದ್ದಾರೆ. ಈ ಎಲ್ಲಾ ಕ್ರಿಕೆಟಿಗರು ಟೀಂ ಇಂಡಿಯಾ ಕ್ಯಾಪ್ಟನ್ಸ್’ಗಳಾಗಿದ್ದರು ಎನ್ನುವುದು ಮತ್ತೊಂದು ವಿಶೇಷ.

Cricket Virat Kohli fastest to 10,000 ODI runs, breaks Sachin Tendulkar Record
Author
Visakhapatnam, First Published Oct 24, 2018, 4:36 PM IST
  • Facebook
  • Twitter
  • Whatsapp

ವಿಶಾಕಪಟ್ಟಣಂ[ಅ.24]: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್’ನಲ್ಲಿ 10 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ವೈಯುಕ್ತಿಕ 81 ರನ್ ಸಿಡಿಸುತ್ತಿದ್ದಂತೆ ಕೊಹ್ಲಿ ಹತ್ತು ಸಹಸ್ರ ರನ್’ಗಳ ಸರದಾರ ಎನಿಸಿಕೊಂಡರು. ಈ ಮೂಲಕ 10 ಸಾವಿರ ರನ್ ಪೂರೈಸಿದ ಭಾರತದ 5ನೇ ಹಾಗೂ ವಿಶ್ವದ 13ನೇ ಕ್ರಿಕೆಟಿಗ ಎನ್ನುವ ಗೌರವಕ್ಕೆ ಕೊಹ್ಲಿ ಭಾಜನರಾಗಿದ್ದಾರೆ.

ಕೇವಲ 205 ಇನ್ನಿಂಗ್ಸ್’ಗಳಲ್ಲಿ ವಿರಾಟ್ ಕೊಹ್ಲಿ 10 ಸಾವಿರ ರನ್ ಪೂರೈಸುವ ಮೂಲಕ ಅತಿವೇಗವಾಗಿ ಈ ಸಾಧನೆ ಮಾಡಿದ ಕ್ರಿಕೆಟಿಗ ಎನ್ನುವ ಕೀರ್ತಿಗೆ ವಿರಾಟ್ ಪಾತ್ರರಾಗಿದ್ದಾರೆ. ಈ ಮೊದಲು ಭಾರತದ ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಹಾಗೂ ಮಹೇಂದ್ರ ಸಿಂಗ್ ಧೋನಿ 10 ಸಾವಿರ ರನ್ ಪೂರೈಸಿದ್ದಾರೆ. ಈ ಎಲ್ಲಾ ಕ್ರಿಕೆಟಿಗರು ಟೀಂ ಇಂಡಿಯಾ ಕ್ಯಾಪ್ಟನ್ಸ್’ಗಳಾಗಿದ್ದರು ಎನ್ನುವುದು ಮತ್ತೊಂದು ವಿಶೇಷ.

ಕೊಹ್ಲಿ ಮೊದಲ ಸಾವಿರ ರನ್ ಪೂರೈಸಲು 24 ಇನ್ನಿಂಗ್ಸ್ ತೆಗೆದುಕೊಂಡಿದ್ದರೆ, 9 ಸಾವಿರದಿಂದ 10 ಸಾವಿರ ರನ್ ಮೈಲಿಗಲ್ಲು ತಲುಪಲು ತೆಗೆದುಕೊಂಡ ಇನ್ನಿಂಗ್ಸ್’ಗಳ ಸಂಖ್ಯೆ ಕೇವಲ 11 ಮಾತ್ರ...! ಕೊಹ್ಲಿ ಟೀಂ ಇಂಡಿಯಾದ ರನ್ ಮಶೀನ್ ಎನ್ನಲು ಇದಕ್ಕಿಂತ ಉದಾಹರಣೆ ಬೇಕಿಲ್ಲ.

ಅತಿವೇಗವಾಗಿ 10 ಸಾವಿರ ರನ್ ಪೂರೈಸಿದರ ಟಾಪ್ 6 ಪಟ್ಟಿ ನಿಮಗಾಗಿ..

ಆಟಗಾರ                 ಇನ್ನಿಂಗ್ಸ್
ವಿರಾಟ್ ಕೊಹ್ಲಿ-          206
ಸಚಿನ್ ತೆಂಡುಲ್ಕರ್-    259
ಸೌರವ್ ಗಂಗೂಲಿ-      263
ರಿಕಿ ಪಾಂಟಿಂಗ್-         266
ಜ್ಯಾಕ್ ಕಾಲೀಸ್-        272
ಎಂ.ಎಸ್ ಧೋನಿ-       273

Follow Us:
Download App:
  • android
  • ios