Asianet Suvarna News Asianet Suvarna News

ಐಪಿಎಲ್ 2019: ಪ್ರಶಸ್ತಿ ರೇಸ್‌ನಲ್ಲಿರುವ 3 ತಂಡಗಳು ಯಾವುದು?

2019ರ ಐಪಿಎಲ್ ಟೂರ್ನಿಗೆ 8 ಫ್ರಾಂಚೈಸಿಗಳು ತಯಾರಿ ಆರಂಭಿಸಿದೆ. ಹರಾಜಿನ ಬಳಿಕ ಬಲಿಷ್ಠ ತಂಡವಾಗಿ ಹೊರಹೊಮ್ಮಿರುವ 3 ತಂಡಗಳು ಪ್ರಶಸ್ತಿ ರೇಸ್‌ನಲ್ಲಿ ಕಾಣಿಸಿಕೊಂಡಿದೆ. 2019ರ ಐಪಿಎಲ್ ಪ್ರಶಸ್ತಿ ಗೆಲ್ಲೋ ನೆಚ್ಚಿನ ತಂಡಗಳು ಯಾವುದು? ಇಲ್ಲಿದೆ.
 

Cricket Top 3 contenders for 2019 IPL title
Author
Bengaluru, First Published Jan 5, 2019, 3:45 PM IST

ಬೆಂಗಳೂರು(ಜ.05): ವಿಶ್ವಕಪ್ ಟೂರ್ನಿ, ಲೋಕಸಭಾ ಚುನಾವಣೆ ಸೇರದಂತೆ ಹಲವು ಅಡೆ ತಡೆಗಳು ಈ ಬಾರಿಯ ಐಪಿಎಲ್ ಟೂರ್ನಿಗಿದೆ. ಆದರೆ ಫ್ರಾಂಚೈಸಿಗಳು ಸದ್ದಿಲ್ಲದೆ ತಯಾರಿ ಆರಂಭಿಸಿದೆ. ಈಗಾಗಲೇ ಹರಾಜಿನಲ್ಲಿ ಆಟಗಾರರನ್ನ ಖರೀದಿಸಿರುವ ತಂಡಗಳು ಬಲಿಷ್ಠ ತಂಡವನ್ನ ಕಟ್ಟಿದೆ. 

ಇದನ್ನೂ ಓದಿ: ಐಪಿಎಲ್ 2019: ಯಾವ ತಂಡದಲ್ಲಿದ್ದಾರೆ ಉತ್ತಮ ವಿಕೆಟ್ ಕೀಪರ್?

ಹರಾಜಿನ ಬಳಿಕ ಆಟಗಾರರು, ಬಲಿಷ್ಠ ತಂಡ, ಅನುಭವ, ನಾಯಕತ್ವಗಳಿಂದ ಈ ಬಾರಿಯ ಐಪಿಎಲ್ ಪ್ರಶಸ್ತಿ ರೇಸ್‌ನಲ್ಲಿ 3 ತಂಡಗಳು ಗುರುತಿಸಿಕೊಂಡಿದೆ.  2019ರ ಪ್ರಶಸ್ತಿ ಗೆಲ್ಲೋ ನೆಚ್ಚಿನ ತಂಡಗಳ ಮಾಹಿತಿ ಇಲ್ಲಿದೆ.

ಮುಂಬೈ ಇಂಡಿಯನ್ಸ್
201, 2015 ಹಾಗೂ 2017ರಲ್ಲಿ ಐಪಿಎಲ್ ಪ್ರಶಸ್ತಿ ಗೆದ್ದಿರುವ ಮುಂಬೈ ಇಂಡಿಯನ್ಸ್ ಇದೀಗ ನಾಲ್ಕನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ರೋಹಿತ್ ಶರ್ಮಾ ನಾಯಕತ್ವದ ಮುಂಬೈ ತಂಡ ಸ್ಟಾರ್ ಪ್ಲೇಯರ್‌ಗಳನ್ನೇ ಹೊಂದಿದೆ. ವೇಗಿ ಜಸ್ಪ್ರೀತ್ ಬುಮ್ರಾ, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಕ್ರುನಾಲ್ ಪಾಂಡ್ಯ, ಹರಾಜಿನಲ್ಲಿ ಖರೀದಿಸಿರುಲ ವಿಕೆಟ್ ಕೀಪರ್ ಬಾಟ್ಸ್‌ಮನ್ ಕ್ವಿಂಟನ್ ಡಿಕಾಕ್ ಸೇರಿದಂತೆ ಬಲಿಷ್ಠ ಆಟಗಾರರು ತಂಡದಲ್ಲಿದ್ದಾರೆ.  ಹೀಗಾಗಿ ಈ ಬಾರಿ ಐಪಿಎಲ್ ಪ್ರಶಸ್ತಿ ಗೆಲ್ಲೋ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ.

ಇದನ್ನೂ ಓದಿ: ತಂಡ ಬದಲಿಸದೇ ಐಪಿಎಲ್ ಆಡಿದ ಐವರುಆಟಗಾರರು ಇವರು!

ಚೆನ್ನೈ ಸೂಪರ್ ಕಿಂಗ್ಸ್
2 ವರ್ಷಗಳ ನಿಷೇಧದ ಬಳಿಕ 2018ರ ಐಪಿಎಲ್ ಟೂರ್ನಿಗೆ ಕಾಲಿಟ್ಟ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿತು. ಎಂ.ಎಸ್. ಧೋನಿ ನಾಯಕತ್ವದ CSK ಐಪಿಎಲ್ ಇತಿಹಾಸದಲ್ಲೇ ಬಲಿಷ್ಠ ತಂಡವಾಗಿದೆ. ಅನುಭವಿ ಆಟಗಾರರನ್ನ ಹೊಂದಿರುವ CSK ತಂಡ, ಪ್ರಶಸ್ತಿ ರೇಸ್‌ನಲ್ಲಿ ಮುಂಚೂಣಿಯಲ್ಲಿದೆ. ಸುರೇಶ್ ರೈನಾ, ಫಾಫ್ ಡುಪ್ಲಸಿಸ್, ಡ್ವೇನ್ ಬ್ರಾವೋ, ಶೇನ್ ವ್ಯಾಟ್ಸನ್ ಸೇರದಂತೆ ಪ್ರಮುಖ ಆಟಗಾರರನ್ನ ಹೊಂದಿದೆ. 

ಸನ್ ರೈಸರ್ಸ್ ಹೈದರಾಬಾದ್
ಒಂದು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದು ಇತಿಹಾಸ ರಚಿಸಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ, ಹರಾಜಿನ ಬಳಿಕ ಮತ್ತಷ್ಟು ಬಲಿಷ್ಠವಾಗಿದೆ. ಐಪಿಎಲ್ ವೇಳೆ ನಿಷೇಧಕ್ಕೆ ಒಳಗಾಗಿದ್ದ ಆಸಿಸ್ ಕ್ರಿಕೆಟಿಗ ಡೇವಿಡ್ ವಾರ್ನರ್ ಲಭ್ಯರಾಗಲಿದ್ದಾರೆ. ಕೇನ್ ವಿಲಿಯಮ್ಸನ್, ಶಿಖರ್ ಧವನ್, ಮನೀಶ್ ಪಾಂಡೆ, ಭುವನೇಶ್ವರ್ ಕುಮಾರ್, ರಶೀದ್ ಖಾನ್ , ಮಾರ್ಟಿನ ಗಪ್ಟಿಲ್ ಸೇರಿದಂತೆ ಸ್ಟಾರ್ ಕ್ರಿಕೆಟಿಗರ ದಂಡೇ ಇದೆ. ಹೀಗಾಗಿ 2019ರ ಐಪಿಎಲ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲೋ ಸಾಧ್ಯತೆ ಅಲ್ಲಗೆಳೆಯುವಂತಿಲ್ಲ.

ಇದನ್ನೂ ಓದಿ:2008ರ ಐಪಿಎಲ್‌ನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ 5 ಕ್ರಿಕೆಟಿಗರು ಯಾರು?

ಈ ಮೂರು ತಂಡಗಳನ್ನ ಹೊರತು ಪಡಿಸಿದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಅಷ್ಟೇ ಬಲಿಷ್ಠವಾಗಿದೆ. ಹೀಗಾಗಿ ಈ ಮೂರು ತಂಡಗಳನ್ನ ಹಿಂದಿಕ್ಕಿ ಚೊಚ್ಚಲ ಐಪಿಎಲ್ ಪ್ರಶಸ್ತಿ ಗೆದ್ದರೆ ಆಶ್ಚರ್ಯವಿಲ್ಲ.

Follow Us:
Download App:
  • android
  • ios