ನವದೆಹಲಿ(ಸೆ.26): ವೆಸ್ಟ್ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಆಯ್ಕೆ ಮಾಡಲು ಸಜ್ಜಾಗಿದ್ದ ಬಿಸಿಸಿಐ ದಿಢೀರ್ ಸಭೆಯನ್ನ ರದ್ದುಗೊಳಿಸಿದೆ. ಹೀಗಾಗಿ ಎಂ.ಎಸ್.ಕೆ ಪ್ರಸಾದ್ ನೇೃತ್ವದ ಆಯ್ಕೆ ಸಮಿತಿ ಸೆಪ್ಟೆಂಬರ್ 29ರೊಳಗೆ ಟೀಂ ಇಂಡಿಯಾ ಆಯ್ಕೆ ಮಾಡಲು ನಿರ್ಧರಿಸಿದೆ.

ಇಂಜುರಿಗೆ ತುತ್ತಾಗಿರೋ ಆರ್ ಅಶ್ವಿನ್ ಸೇರಿದಂತೆ ಹಲವು ಕ್ರಿಕೆಟಿಗರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ತರಬೇತಿಯಲ್ಲಿ ಪಾಲ್ಗೊಂಡಿದ್ದಾರೆ. ಇವರ ಫಿಟ್ನೆಸ್ ಪರೀಕ್ಷೆ ಸೆ.29 ರಂದು ನಡೆಯಲಿದೆ. ಇದಕ್ಕೂ ಮುನ್ನ ಬಿಸಿಸಿಐ ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ತಂಡದ ಆಯ್ಕೆ ನಡೆಸಲು ಮುಂದಾಗಿದೆ.

ವೆಸ್ಟ್ಇಂಡೀಸ್ ವಿರುದ್ದದ ಸರಣಿ ಬಳಿಕ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಹೀಗಾಗಿ ಆಯ್ಕೆ ಸಮಿತಿ ಅಳೆದು ತೂಗಿ ಆಟಗಾರರನ್ನ ಆಯ್ಕೆಮಾಡಲು ನಿರ್ಧರಿಸಿದೆ. ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದರೂ ಕನ್ನಡಿಗ ಮಯಾಂಕ್ ಅಗರ್ವಾಲ್ ತಂಡಕ್ಕೆ ಆಯ್ಕೆಯಾಗಲು ವಿಫಲರಾಗಿದ್ದರು. ಇದೀಗ ವೆಸ್ಟ್ಇಂಡೀಸ್ ಸರಣಿಗೆ ಅಗರ್ವಾಲ್ ಆಯ್ಕೆಯಾಗೋ ಸಾಧ್ಯತೆ ಇದೆ.