18 ರನ್‌ಗೆ ಆಲೌಟ್- 12 ನಿಮಿಷದಲ್ಲಿ ಪಂದ್ಯ ಫಿನೀಶ್!

https://static.asianetnews.com/images/authors/2c1b126a-9adf-5f82-ae4f-e781463685fe.jpg
First Published 24, Jul 2018, 4:41 PM IST
Cricket team all-out for 18, target chased in just 12 minutes
Highlights

11 ಬ್ಯಾಟ್ಸ್‌ಮನ್‌ಗಳು ಕನಿಷ್ಠ 2 ರನ್ ಸಿಡಿಸಿದರೆ, ತಂಡದ ಮೊತ್ತ 22. ಆದರೆ ದಶಕಗಳ ಇತಿಹಾಸ ಹೊಂದಿರೋ ಆ ತಂಡ ಗಳಿಸಿದ್ದು ಮಾತ್ರ 18 ರನ್. ಈ ಟಾರ್ಗೆಟನ್ನ 12 ನಿಮಿಷದಲ್ಲಿ ಚೇಸ್ ಮಾಡಲಾಗಿದೆ. ಹಾಗಾದರೆ ಈ ರೋಚಕ ಪಂದ್ಯ ನಡೆದಿದ್ದು ಎಲ್ಲಿ? ಇಲ್ಲಿದೆ ಸಂಪೂರ್ಣ ವಿವರ.

ಲಂಡನ್(ಜು.24):  ತಂಡದ ಮೊತ್ತ 18. ಈ ಗುರಿಯನ್ನ ಬೆನ್ನಟ್ಟಿದ ಸಮಯ ಕೇವಲ 12 ನಿಮಿಷ. ಇದು ಇಂಗ್ಲೆಂಡ್‌ನ ಶೆಪರ್ಢ್ ನೀಮ್ ಕ್ರಿಕೆಟ್ ಲೀಗ್‌ನಲ್ಲಿ ನಡೆದ ಪಂದ್ಯ. ಬೆಕ್ಸೆಲೇ ಕ್ರಿಕೆಟ್ ಕ್ಲಬ್ ವಿರುದ್ಧದ ಪಂದ್ಯದಲ್ಲಿ ಬೆಕೆನ್‌ಹ್ಯಾಮ್ ಕ್ರಿಕೆಟ್ ಕ್ಲಬ್ ತಂಡ ಕೇವಲ 18 ರನ್‌ಗೆ ಆಲೌಟ್ ಆಗಿದೆ. ಬೆಕೆನ್‌ಹ್ಯಾಮ್ 18 ರನ್ ಗಳಿಸಿಲು 49 ನಿಮಿಷ ಕ್ರೀಸ್‌ನಲ್ಲಿ ಪರದಾಡಿತ್ತು.

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಬೆಕೆನ್‌ಹ್ಯಾಮ್ ತಂಡ ರನ್ ಗಳಿಸಲು ತಿಣುಕಾಡಿತು. 11 ಬ್ಯಾಟ್ಸ್‌ಮನ್‌ಗಳ ಪೈಕಿ ಐವರು ಬ್ಯಾಟ್ಸ್‌ಮನ್‌ಗಳು ಶೂನ್ಯಕ್ಕೆ ಔಟಾಗಿದ್ದಾರೆ. ಇನ್ನು ತಂಡದ ವೈಯುಕ್ತಿಕ ಗರಿಷ್ಠ ಮೊತ್ತ 4 ರನ್.  5ರನ್‌ಗೆ ಮೊದಲ ವಿಕೆಟ್ ಪತನಗೊಂಡರೆ, 18 ರನ್‌ಗೆ ಆಲೌಟ್ ಆಗಿದೆ.

 

 

18 ರನ್ ಟಾರ್ಗೆಟ್ ಬೆನ್ನಟ್ಟಿದ ಬೆಕ್ಸಲೇ ಕ್ರಿಕೆಟ್ ಕ್ಲಬ್ ತಂಡ 3.3 ಓವರ್‌ಗಳಲ್ಲಿ ಗೆಲುವು ಸಾಧಿಸಿತು. ಕೇವಲ 12 ನಿಮಿಷದಲ್ಲಿ ಗುರಿ ಬೆನ್ನಟ್ಟಿ ಗೆಲುವು ಸಾಧಿಸಿತು. ವಿಶೇಷ ಅಂದರೆ ಬೌಲಿಂಗ್‌ನಲ್ಲಿ ಬೆಕೆನ್‌ಹ್ಯಾಮ್ ತಂಡ ವೈಡ್, ನೋ ಬಾಲ್ ಸೇರಿ 6 ರನ್ ಹೆಚ್ಚುವರಿ ನೀಡಿದೆ. 

152 ವರ್ಷಗಳ ಬೆಕೆನ್‌ಹ್ಯಾಮ್ ತಂಡದ ಇತಿಹಾಸದಲ್ಲೇ ಇದು ಅತ್ಯಂತ ಕಡಿಮೆ ಮೊತ್ತ. ಇಷ್ಟೇ ಅಲ್ಲ ಇಂಗ್ಲೆಂಡ್ ಕೌಂಟ್ ಹಾಗೂ ಲೀಗ್ ಟೂರ್ನಿಗಳಲ್ಲೂ ಕಡಿಮೆ ಮೊತ್ತ ಅನ್ನೋ ಅಪಖ್ಯಾತಿಗೆ ಗುರಿಯಾಗಿದೆ.

loader