ಮುಂದಿನ ತಿಂಗಳು ಕ್ರೀಡಾಂಗಣದ ಉದ್ಘಾಟನೆ ನೆರವೇರಲಿದ್ದು, ಸ್ವತಃ ಗವಾಸ್ಕರ್ ಅವರೇ ಕ್ರೀಡಾಂಗಣವನ್ನು ಉದ್ಘಾಟಿಸಲಿದ್ದಾರೆ.

ಮುಂಬೈ(ಸೆ.28): ಲಿಟ್ಲ್ ಮಾಸ್ಟರ್ ಸುನಿಲ್ ಗವಾಸ್ಕರ್’ಗೆ ಮತ್ತೊಂದು ಗರಿ ಸಿಕ್ಕಂತಾಗಿದೆ.

ಹೌದು ಅಮೆರಿಕದ ಕೆಂಟುಕಿಯ ಲೂಯಿಸ್ ವಿಲ್ಲೆಯಲ್ಲಿ ನೂತನವಾಗಿ ನಿರ್ಮಿಸಿರುವ ಕ್ರಿಕೆಟ್ ಕ್ರೀಡಾಂಗಣಕ್ಕೆ ಭಾರತ ತಂಡದ ಹಿರಿಯ ಕ್ರಿಕೆಟಿಗ, ದಿಗ್ಗಜ ಬ್ಯಾಟ್ಸ್’ಮನ್ ಸುನಿಲ್ ಗವಾಸ್ಕರ್ ಹೆಸರಿಡಲಾಗುವುದು ಎಂದು ತಿಳಿದುಬಂದಿದೆ.

ಮುಂದಿನ ತಿಂಗಳು ಕ್ರೀಡಾಂಗಣದ ಉದ್ಘಾಟನೆ ನೆರವೇರಲಿದ್ದು, ಸ್ವತಃ ಗವಾಸ್ಕರ್ ಅವರೇ ಕ್ರೀಡಾಂಗಣವನ್ನು ಉದ್ಘಾಟಿಸಲಿದ್ದಾರೆ.

ಸ್ಟೇಡಿಯಂಗೆ ಕ್ರಿಕೆಟಿಗರ ಹೆಸರನ್ನು ಇಟ್ಟಿರುವುದು ಇದೇ ಮೊದಲೇನಲ್ಲ. ಮೊದಲು ವೆಸ್ಟ್ ಇಂಡಿಸ್’ನಲ್ಲಿ ಕೆರಿಬಿಯನ್ ದಿಗ್ಗಜ ಕ್ರಿಕೆಟಿಗ ವೀವ್ ರಿಚರ್ಡ್’ಸನ್, ಬ್ರಿಯಾನ್ ಲಾರಾ ಹಾಗೂ ಡ್ಯಾರನ್ ಸ್ಯಾಮಿ ಹೆಸರಿನಲ್ಲಿ ಕ್ರಿಕೆಟ್ ಮೈದಾನಗಳಿವೆ.

ಗವಾಸ್ಕರ್ 125 ಟೆಸ್ಟ್ ಹಾಗೂ 108 ಏಕದಿನ ಪಂದ್ಯಗಳನ್ನಾಡಿದ್ದು, ಕ್ರಮವಾಗಿ 10,122 ಹಾಗೂ 3,092 ರನ್ ಬಾರಿಸಿದ್ದಾರೆ.