‘ಭಾರತೀಯ ಆಟಗಾರರಿಗೆ ವಿದೇಶಿ ಲೀಗ್‌'ಗಳಲ್ಲಿ ಆಡಲು ಬಿಸಿಸಿಐ ಈವರೆಗೂ ಬಿಟ್ಟಿಲ್ಲ. ಆದರೆ ಭಾರತೀಯ ಕ್ರಿಕೆಟ್ ಮಂಡಳಿ ಜತೆ ನಾವು ಚರ್ಚೆ ನಡೆಸುತ್ತಿದ್ದು, ಆಟಗಾರರು ಗ್ಲೋಬಲ್ ಟಿ20 ಲೀಗ್‌'ನಲ್ಲಿ ಆಡಲಿದ್ದಾರೆ ಎನ್ನುವ ಭರವಸೆ ಇದೆ ಎಂದು ಕ್ರಿಸ್ ನೆನ್ಜಾನಿ ಹೇಳಿದ್ದಾರೆ.

ಜೋಹಾನ್ಸ್‌'ಬರ್ಗ್(ಡಿ.29): ಕ್ರಿಕೆಟ್ ಸೌತ್ ಆಫ್ರಿಕಾ ತನ್ನ ಕನಸಿನ ಕೂಸು ಗ್ಲೋಬಲ್ ಟಿ20 ಲೀಗ್‌'ಗೆ ಚಾಲನೆ ನೀಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೊರೆ ಹೋಗಿದೆ. ಈ ವರ್ಷ ನಡೆಯಬೇಕಿದ್ದ ಲೀಗ್, ಆರ್ಥಿಕ ಸಂಕಷ್ಟದಿಂದಾಗಿ ರದ್ದಾಗಿತ್ತು. ತಂಡಗಳ ಖರೀದಿ, ಆಟಗಾರರ ಹರಾಜು ಎಲ್ಲವೂ ಮುಕ್ತಾಯಗೊಂಡಿದ್ದರೂ, ಲೀಗ್ ಮಾತ್ರ ಆರಂಭವಾಗಿರಲಿಲ್ಲ.

ಲೀಗ್‌'ನ ಬಹುತೇಕ ತಂಡಗಳಿಗೆ ಭಾರತೀಯರೇ ಮಾಲೀಕರಾಗಿರುವುದು ವಿಶೇಷ. ಇದೀಗ ಭಾರತೀಯ ಆಟಗಾರರು ಪಾಲ್ಗೊಂಡರೆ ಮಾತ್ರ ಲೀಗ್ ಆರಂಭಿಸಲು ಸಾಧ್ಯ ಎನ್ನುತ್ತಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ, ಆಟಗಾರರಿಗೆ ಪಾಲ್ಗೊಳ್ಳಲು ಅನುಮತಿ ನೀಡುವಂತೆ ಬಿಸಿಸಿಐ ಬಳಿ ಮನವಿ ಮಾಡಿದೆ. ಇದುವರೆಗೂ ಯಾವುದೇ ವಿದೇಶಿ ಟಿ20 ಲೀಗ್‌'ಗಳಲ್ಲಿ ಆಡಲು ಬಿಸಿಸಿಐ ತನ್ನ ಆಟಗಾರರಿಗೆ ಅನುಮತಿ ನೀಡಿಲ್ಲವಾದರೂ, ಆಫ್ರಿಕಾ ಕ್ರಿಕೆಟ್ ಮಂಡಳಿ ಅಧ್ಯಕ್ಷ ಕ್ರಿಸ್ ನೆನ್ಜಾನಿ ಧನಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.

‘ಭಾರತೀಯ ಆಟಗಾರರಿಗೆ ವಿದೇಶಿ ಲೀಗ್‌'ಗಳಲ್ಲಿ ಆಡಲು ಬಿಸಿಸಿಐ ಈವರೆಗೂ ಬಿಟ್ಟಿಲ್ಲ. ಆದರೆ ಭಾರತೀಯ ಕ್ರಿಕೆಟ್ ಮಂಡಳಿ ಜತೆ ನಾವು ಚರ್ಚೆ ನಡೆಸುತ್ತಿದ್ದು, ಆಟಗಾರರು ಗ್ಲೋಬಲ್ ಟಿ20 ಲೀಗ್‌'ನಲ್ಲಿ ಆಡಲಿದ್ದಾರೆ ಎನ್ನುವ ಭರವಸೆ ಇದೆ ಎಂದು ಕ್ರಿಸ್ ನೆನ್ಜಾನಿ ಹೇಳಿದ್ದಾರೆ. ಬಿಸಿಸಿಐ, ಮಹಿಳಾ ಕ್ರಿಕೆಟರ್‌ಗಳಿಗೆ ಆಸ್ಟ್ರೇಲಿಯಾದ ಬಿಗ್‌'ಬ್ಯಾಶ್‌'ನಲ್ಲಿ ಆಡಲು ಅನುಮತಿ ನೀಡಿದೆ. ಹೀಗಾಗಿ ಭಾರತೀಯ ಆಟಗಾರರನ್ನು ಗ್ಲೋಬಲ್ ಟಿ20 ಲೀಗ್‌ಗೆ ಕಳುಹಿಸಿ ಕೊಡುವಂತೆ ಆಫ್ರಿಕಾ ಮನವಿ ಮಾಡಿದೆ.