Asianet Suvarna News Asianet Suvarna News

ಸೌತ್ಆಫ್ರಿಕಾದಲ್ಲಿ ಮತ್ತೆ ಕಣಕ್ಕಿಳಿಯುತ್ತಿದ್ದಾರೆ ಎಬಿ ಡಿವಿಲಿಯರ್ಸ್!

ಸ್ಫೋಟಕ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಪ್ರೇಮಿಗೆಳ ಮನ ಗೆದ್ದಿರುವ ಎಬಿ ಡಿವಿಲಿಯರ್ಸ್ ಇದೀಗ ತವರಿನಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಎಬಿಡಿ ಕಮ್‌ಬ್ಯಾಕ್ ವಿವರ ಇಲ್ಲಿದೆ.
 

Cricket South Africa Confirms AB de Villier Availability for T20 league
Author
Bengaluru, First Published Oct 15, 2018, 9:29 PM IST
  • Facebook
  • Twitter
  • Whatsapp

ಜೋಹಾನ್ಸ್‌ಬರ್ಗ್(ಅ.15): ಸೌತ್ಆಫ್ರಿಕಾದ ದಿಗ್ಗಜ ಕ್ರಿಕೆಟಿಗ, ಭಾರತೀಯರ ನೆಚ್ಚಿನ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ 2018ರ ಮೇ ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಹೀಗಾಗಿ ಸೌತ್ಆಫ್ರಿಕಾ ಅಭಿಮಾನಿಗಳು ಡಿವಿಲಿಯರ್ಸ್ ತವರಿನ ಆಟವನ್ನ ಮಿಸ್ ಮಾಡಿಕೊಂಡಿದ್ದರು.

ಇದೀಗ ಎಬಿಡಿ ತವರಿನ ಅಭಿಮಾನಿಗಳಿಗೆ ಸಿಹಿ ಸುದ್ದಿ ಬಂದಿದೆ. ಎಬಿ ಡಿವಿಲಿಯರ್ಸ್ ತವರಿನಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಸೌತ್ಆಫ್ರಿಕಾ ಕ್ರಿಕೆಟ್ ಮಂಡಳಿ ಆರಂಭಿಸುತ್ತಿರುವ ಮಜಾನ್ಸಿ ಕ್ರಿಕೆಟ್ ಲೀಗ್ ಟೂರ್ನಿಯಲ್ಲಿ ಎಬಿಡಿ ಆಡುವುದು ಖಚಿತವಾಗಿದೆ.

ಮಜಾನ್ಸಿ ಲೀಗ್ ಟೂರ್ನಿಯಲ್ಲಿ ಎಬಿಡಿ ಸ್ವಾನ್ ಸ್ಪಾರ್ಟನ್ ತಂಡದ ಪರ ಕಣಕ್ಕಿಳಿಯಲಿದ್ದಾರೆ ಎಂದು ಸೌತ್ಆಫ್ರಿಕಾ ಕ್ರಿಕೆಟ್ ಮಂಡಳಿ ಸ್ಪಷ್ಟಪಡಿಸಿದೆ. ನವೆಂಬರ್ 16 ರಿಂದ ನೂತನ ಮಜಾನ್ಸಿ ಲೀಗ್ ಟೂರ್ನಿ ಆರಂಭಗೊಳ್ಳಲಿದೆ.

ಡರ್ಬನ್ ಹೀಟ್ ಪರ ಹಶೀಮ್ ಆಮ್ಲಾ ಕಣಕ್ಕಿಳಿದರೆ, ಪರ್ಲ್ ರಾಕ್ಸ್ ಪರ ಫಾಫ್ ಡುಪ್ಲೆಸಿಸ್ ಆಡಲಿದ್ದಾರೆ. ಇನ್ನು ವೆಸ್ಟ್ಇಂಡೀಸ್ ಸ್ಟಾರ್ ಕ್ರಿಸ್ ಗೇಲ್, ಡ್ವೇನ್ ಬ್ರಾವೋ ಸೇರಿದಂತೆ ವಿದೇಶಿ ಆಟಗಾರರು ಮಜಾನ್ಸಿ ಲೀಗ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

Follow Us:
Download App:
  • android
  • ios