ನ್ಯೂಜಿಲೆಂಡ್ ನೀಡಿದ್ದ 193 ರನ್’ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಭಾರತ ಮಹಿಳಾ ತಂಡ ಆಕರ್ಷಕ ಬ್ಯಾಟಿಂಗ್ ನಡೆಸಿತು. ಸ್ಮೃತಿ ಮಂದಾನ-ಜೆಮಿಮಾ ರೋಡ್ರಿಗಸ್ ಜೋಡಿ 190 ರನ್’ಗಳ ಜತೆಯಾಟವಾಡುವ ಮೂಲಕ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ನೇಪಿಯರ್[ಜ.24]: ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಮೊದಲ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಬಗ್ಗುಬಡಿದ ರೀತಿಯಲ್ಲಿಯೇ ಭಾರತ ವನಿತೆಯರ ಟೀಂ ಇಂಡಿಯಾ ಕಿವೀಸ್ ತಂಡವನ್ನು ಅನಾಯಾಸವಾಗಿ ಮಣಿಸಿ ಶುಭಾರಂಭ ಮಾಡಿದೆ. ಸ್ಮೃತಿ ಮಂದಾನ ಆಕರ್ಷಕ ಶತಕದ ನೆರವಿನಿಂದ ಭಾರತ ಮಹಿಳಾ ಕ್ರಿಕೆಟ್ ತಂಡ 9 ವಿಕೆಟ್’ಗಳ ಭರ್ಜರಿ ಜಯ ದಾಖಲಿಸಿದೆ.

ನ್ಯೂಜಿಲೆಂಡ್ ನೀಡಿದ್ದ 193 ರನ್’ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಭಾರತ ಮಹಿಳಾ ತಂಡ ಆಕರ್ಷಕ ಬ್ಯಾಟಿಂಗ್ ನಡೆಸಿತು. ಸ್ಮೃತಿ ಮಂದಾನ-ಜೆಮಿಮಾ ರೋಡ್ರಿಗಸ್ ಜೋಡಿ 190 ರನ್’ಗಳ ಜತೆಯಾಟವಾಡುವ ಮೂಲಕ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ನ್ಯೂಜಿಲೆಂಡ್ ಬೌಲರ್’ಗಳನ್ನು ಮನಬಂದಂತೆ ದಂಡಿಸಿದ ಮಂದಾನ ಕೇವಲ 104 ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್’ಗಳ ನೆರವಿನಿಂದ 105 ಬಾರಿಸಿ ವಿಕೆಟ್ ಒಪ್ಪಿಸಿದರು. ಮಂದಾನಗೆ ಉತ್ತಮ ಸಾಥ್ ನೀಡಿದ ಜಮಿಮಾ ಅಜೇಯ 81 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

Scroll to load tweet…

ಎರಡು ದಿನಗಳ ಹಿಂದಷ್ಟೇ 2018ನೇ ಸಾಲಿನ ಐಸಿಸಿ ವರ್ಷದ ಮಹಿಳಾ ಆಟಗಾರ್ತಿ ಎನ್ನುವ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಮಂದಾನ, 2019ರ ವರ್ಷವನ್ನೂ ಶತಕದೊಂದಿಗೆ ಆರಂಭಿಸಿದ್ದಾರೆ.

"

ಇದಕ್ಕೂ ಮೊದಲು ಟಾಸ್ ಗೆದ್ದ ಮಿಥಾಲಿ ರಾಜ್ ಫೀಲ್ಡಿಂಗ್ ಆಯ್ದುಕೊಂಡರು. ನಾಯಕಿಯ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ನಡೆಸಿದ ಏಕ್ತಾ ಬಿಷ್ಠ್, ಪೂನಂ ಯಾದವ್ ತಲಾ 3, ದೀಪ್ತಿ ಶರ್ಮಾ 2 ಹಾಗೂ ಶಿಖಾ ಪಾಂಡೆ ಒಂದು ವಿಕೆಟ್ ಕಬಳಿಸುವ ಮೂಲಕ ನ್ಯೂಜಿಲೆಂಡ್ ತಂಡವನ್ನು ಕೇವಲ 192 ರನ್’ಗಳಿಗೆ ನಿಯಂತ್ರಿಸಿದರು.

Scroll to load tweet…

ಇನ್ನು ಎರಡನೇ ಏಕದಿನ ಪಂದ್ಯ ಬೇ ಓವಲ್’ನಲ್ಲಿ ಜನವರಿ 29ರಂದು ನಡೆಯಲಿದೆ.