ಕ್ರಿಕೆಟ್ ಸೀಕ್ರೆಟ್ಸ್: ನೆನಪಿದೆಯಾ ಧೋನಿ ಸಿಕ್ಸರ್ ಹಾಗೂ ರೋಚಕ ಗೆಲುವು!

Cricket secrets cricket flashback on this july 11
Highlights

ಕ್ರಿಕೆಟ್‌ನಲ್ಲಿ ಪ್ರತಿ ದಿನವೂ ಒಂದಲ್ಲ ಒಂದು ದಾಖಲೆಗಳು ನಿರ್ಮಾಣವಾಗುತ್ತೆ. ಇಂತಹ ದಾಖಲೆಗಳು, ಐತಿಹಾಸಿಕ ನಿಮಿಷಗಳನ್ನ ಮೆಲುಕು ಹಾಕುವ ವಿಶೇಷ ಪ್ರಯತ್ನವೇ ಕ್ರಿಕೆಟ್ ಸೀಕ್ರೆಟ್ಸ್. ಹಾಗಾದರೆ ಜುಲೈ 11 ರ ಸ್ಪೆಷಾಲಿಟಿ ಏನು? ಇಲ್ಲಿದೆ ವಿವರ.

ಬೆಂಗಳೂರು(ಜು.11): ಅದು ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆದ ತ್ರೀಕೋನ ಏಕದಿನ ಸರಣಿಯ ಫೈನಲ್ ಪಂದ್ಯ. ಪ್ರಶಸ್ತಿಗಾಗಿ ಭಾರತ ಹಾಗೂ ಶ್ರೀಲಂಕಾ ನಡುವಿನ ಹೋರಾಟ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ರೋಚಕ ಪಂದ್ಯವಾಗಿ ಮಾರ್ಪಟ್ಟಿದೆ.

ಅಂತಿಮ ಓವರ್, ಭಾರತದ ಗೆಲುವಿಗೆ 15 ರನ್‌ಗಳ ಅವಕಶ್ಯತೆ. ಉಳಿದಿರೋದು ಒಂದೇ ವಿಕೆಟ್. ಕ್ರೀಸ್‌ನಲ್ಲಿರೋದು ಎಂ ಎಸ್ ಧೋನಿ, ನಾನ್ ಸ್ಟ್ರೈಕರ್ ಇಶಾಂತ್ ಶರ್ಮಾ. ವೇಗಿ ಶಮಿಂಡಾ ಎರಂಗಾ ಮೊದಲ ಎಸೆತದಲ್ಲಿ ಯಾವುದೇ ರನ್ ಇಲ್ಲ. 

ಅಷ್ಟರಲ್ಲೇ ಭಾರತೀಯ ಅಭಿಮಾನಿಗಳಲ್ಲಿ ಆತಂಕ. ಆದರೆ ಎಂ ಎಸ್ ಧೋನಿ ಮುಂದಿನ 3 ಎಸೆತದಲ್ಲಿ 2 ಸಿಕ್ಸರ್ ಹಾಗೂ ಒಂದು ಬೌಂಡರಿ ಮೂಲಕ ಇನ್ನು 2 ಎಸೆತ ಬಾಕಿ ಇರುವಂತೆಯೇ ಪಂದ್ಯ ಗೆಲ್ಲಿಸಿಕೊಟ್ಟಿದ್ದರು. 

ಶ್ರೀಲಂಕಾ ನೀಡಿದ 202ರನ್ ಟಾರ್ಗೆಟನ್ನ ಭಾರತ 49.4 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು ಗುರಿತಲುಪಿತು. ಈ ಮೂಲಕ ಭಾರತ ತ್ರಿಕೋನ ಏಕದಿನ ಸರಣಿ ಗೆದ್ದು ಸಂಭ್ರಮಿಸಿತು. ಈ ರೋಚಕ ಪಂದ್ಯ ನಡೆದು ಇಂದಿಗೆ 5 ವರ್ಷಗಳು ಉರುಳಿಸಿದೆ. ಆದರೆ ಕ್ರಿಕೆಟ್ ಪ್ರೇಮಿಗಳು ಯಾರು ಈ ಪಂದ್ಯವನ್ನ ಮರೆತಿಲ್ಲ. ಜುಲೈ 11, 2013ರ ರೋಚಕ ಪಂದ್ಯ, ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾಗೆ ಸ್ಪೂರ್ತಿಯಾಗಲಿ.

ರೋಚಕ ಪಂದ್ಯದ ವಿಡೀಯೋ ಇಲ್ಲಿದೆ:

loader