ಕ್ರಿಕೆಟ್ ಸೀಕ್ರೆಟ್ಸ್: ಈ ದಿನ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್‌ಗೆ ವಿಶೇಷ ಯಾಕೆ?

https://static.asianetnews.com/images/authors/2c1b126a-9adf-5f82-ae4f-e781463685fe.jpg
First Published 10, Jul 2018, 5:15 PM IST
Cricket Secrets: Cricket Flashback On this Day
Highlights

ಕ್ರಿಕೆಟ್‌ನಲ್ಲಿ ಪ್ರತಿ ದಿನವೂ ಒಂದಲ್ಲ ಒಂದು ದಾಖಲೆಗಳು ನಿರ್ಮಾಣವಾಗುತ್ತೆ. ಇಂತಹ ದಾಖಲೆಗಳು, ಐತಿಹಾಸಿಕ ನಿಮಿಷಗಳನ್ನ ಮೆಲುಕು ಹಾಕುವ ವಿಶೇಷ ಪ್ರಯತ್ನವೇ ಕ್ರಿಕೆಟ್ ಸೀಕ್ರೆಟ್ಸ್. ಹಾಗಾದರೆ ಜುಲೈ 10 ರ ಸ್ಪೆಷಾಲಿಟಿ ಏನು? ಇಲ್ಲಿದೆ ವಿವರ.

ಬೆಂಗಳೂರು(ಜು.10): ವಿಶ್ವ ಕಂಡ ಶ್ರೇಷ್ಠ ಬ್ಯಾಟ್ಸ್‌ಮನ್, ಟೀಂ ಇಂಡಿಯಾ ಮಾಜಿ ನಾಯಕ ಸುನಿಲ್ ಗವಾಸ್ಕರ್‌ಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 69ನೇ ವಸಂತಕ್ಕೆ ಕಾಲಿಟ್ಟ ಸುನಿಲ್ ಗವಾಸ್ಕರ್, ಜುಲೈ 10, 1949 ರಂದು ಮುಂಬೈನಲ್ಲಿ ಹುಟ್ಟಿದರು.

1971ರಲ್ಲಿ ಟೀಂ ಇಂಡಿಯಾಗೆ ಪಾದರ್ಪಣೆ ಮಾಡಿದ ಸುನಿಲ್ ಗವಾಸ್ಕರ್, ಚೊಚ್ಚಲ ಸರಣಿಯ 4 ಟೆಸ್ಟ್ ಪಂದ್ಯದಲ್ಲಿ ನಾಲ್ಕು ಸೆಂಚುರಿ ಸಿಡಿಸಿ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ ಕ್ರಿಕೆಟಿಗ. ಬಲಿಷ್ಠ ವೆಸ್ಟ್ಇಂಡೀಸ್ ವಿರುದ್ದದ ಡೆಬ್ಯೂ ಸರಣಿಯಲ್ಲಿ ಅಬ್ಬರಿಸಿದ ಗವಾಸ್ಕರ್, ಓಟ್ಟು ಟೆಸ್ಟ್ ಕ್ರಿಕೆಟ್‌ನಲ್ಲಿ 34 ಶತಕ ಸಿಡಿಸಿ ದಾಖಲೆ ಬರೆದಿದ್ದರು.

125 ಟೆಸ್ಟ್ ಪಂದ್ಯ ಆಡಿರುವ ಗವಾಸ್ಕರ್ 10122ರನ್ ಸಿಡಿಸಿದ್ದಾರೆ. ಈ ಮೂಲಕ 10 ಸಾವಿರ ರನ್ ಗಡಿ ದಾಟಿದ ಮೊದಲ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅಜೇಯ 236 ರನ್ ಗವಾಸ್ಕರ್ ಬೆಸ್ಟ್ ಸ್ಕೋರ್. 108 ಏಕದಿನ ಪಂದ್ಯಗಳಿಂದ ಗವಾಸ್ಕರ್ 3092 ರನ್ ಗಳಿಸಿದ್ದಾರೆ.

ಬ್ಯಾಟ್ಸ್‌ಮನ್ ಆಗಿ, ಟೀಂ ಇಂಡಿಯಾ ನಾಯಕನಾಗಿ ಭಾರತೀಯ ಕ್ರಿಕೆಟ್‌ನಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಗವಾಸ್ಕರ್ ಸದ್ಯ ವೀಕ್ಷಕ ವಿವರಣೆಗಾರರಾಗಿ, ವಿಶ್ಲೇಶಷಕರಾಗಿಯೂ ಜನಪ್ರೀಯರಾಗಿದ್ದಾರೆ. 69ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಗವಾಸ್ಕರ್‌ಗೆ ಹ್ಯಾಪಿ ಬರ್ತ್‌ಡೇ.

ಶ್ರೀಲಂಕಾ ತಂಡಕ್ಕೆ ಆಘಾತ:
ಇದೇ ದಿನ ಶ್ರೀಲಂಕಾ ತಂಡ ಭಾರಿ ಮುಖಭಂಗ ಅನುಭವಿಸಿದ ದಿನ. 2017ರಲ್ಲಿ ಶ್ರೀಲಂಕಾ ಪ್ರವಾಸ ಕೈಗೊಂಡ ಜಿಂಬಾಬ್ವೆ ತಂಡ 5 ಏಕದಿನ ಪಂದ್ಯಗಳ ಸರಣಿ ಆಡಿತ್ತು. ಜುಲೈ 10,2017ರಲ್ಲಿನಡೆದ ಅಂತಿಮ ಪಂದ್ಯ ಸರಣಿ ಗೆಲುವನ್ನ ನಿರ್ಧರಿಸಿತ್ತು. ಈ ರೋಚಕ ಪಂದ್ಯದಲ್ಲಿ ಜಿಂಬಾಬ್ವೆ ಗೆಲುವು ಸಾಧಿಸೋ ಮೂಲಕ 3-2 ಅಂತರದಲ್ಲಿ ಶ್ರೀಲಂಕಾ ತಂಡವನ್ನ ಸೋಲಿಸಿತ್ತು. ಇದು ಜಿಂಬಾಬ್ವೆ ತಂಡ ಮೊತ್ತ ಮೊದಲ ವಿದೇಶಿ ಗೆಲುವು.  

ಸ್ಕಾಟ್ ಸ್ಟೈರಿಸ್:

ನ್ಯೂಜಿಲೆಂಡ್ ಕ್ರಿಕೆಟಿಗ ಸ್ಕಾಟ್ ಸ್ಟೈರಿಸ್‌ಗೆ 43ನೇ ವರ್ಷದ ಹುಟ್ಟು ಹಬ್ಬ ಸಂಭ್ರಮ. ನ್ಯೂಜಿಲೆಂಡ್ ಕಂಡ ಶ್ರೇಷ್ಠ ಆಲ್‌ರೌಂಡರ್ ಸ್ಕಾಟ್ ಪದಾರ್ಪಣಾ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಹಾಗೂ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಸಿಡಿಸಿದ್ದಾರೆ. ಇಷ್ಟೇ ಅಲ್ಲ ಚೊಚ್ಚಲ ಪಂದ್ಯದಲ್ಲೇ ವೆಸ್ಟ್ಇಂಡೀಸ್ ದಿಗ್ಗಜ ಬ್ರಿಯಾನ್ ಲಾರ ವಿಕೆಟ್ ಕಬಳಿಸಿದ ಸಾಧನೆಯೂ ಮಾಡಿದ್ದಾರೆ. 1999ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಸ್ಕಾಟ್, 2010ರಲ್ಲಿ ಕ್ರಿಕೆಟ್‌ಗೆ ವಿದಾಯ ಹೇಳಿದರು.

 

loader