ಕ್ರಿಕೆಟ್ ಸೀಕ್ರೆಟ್ಸ್: ವರ್ಷ ಕಳೆದರೂ ಇನ್ನೂ ಮಾಸಿಲ್ಲ ಕಹಿ ನೆನಪು

cricket secrets: Cricket Flashback on this Day-June 18
Highlights

ಕ್ರಿಕೆಟ್ ಇತಿಹಾಸದಲ್ಲಿ ಪ್ರತಿ ದಿನವೂ ಒಂದಲ್ಲ ಒಂದು ದಾಖಲೆಗಳು ನಿರ್ಮಾಣವಾಗುತ್ತೆ. ಇಂತಹ ದಾಖಲೆಗಳು, ಐತಿಹಾಸಿಕ ನಿಮಿಷಗಳನ್ನ ಮೆಲುಕು ಹಾಕುವ ವಿಶೇಷ ಪ್ರಯತ್ನವೇ ಕ್ರಿಕೆಟ್ ಸೀಕ್ರೆಟ್ಸ್. ಹಾಗಾದರೆ ಜೂನ್ 18ರ ಸ್ಪೆಷಾಲಿಟಿ ಏನು? ಇಲ್ಲಿದೆ ವಿವರ.

ಬೆಂಗಳೂರು(ಜೂ.18): ಕಳೆದೊಂದು ವರ್ಷದಲ್ಲಿ ಜೂನ್ 18 ಭಾರತೀಯರಿಗೆ ಕಹಿ ನೆನಪು ಕೊಟ್ಟಿದೆ. ಇದೇ ಜೂನ್ 18, 2017ರಲ್ಲಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತ ಪಾಕಿಸ್ತಾನ ಮುಖಾಮುಖಿಯಾಗಿತ್ತು. ಪ್ರಶಸ್ತಿ ಗೆಲ್ಲೋ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದ್ದ ಭಾರತ ಅಂತಿಮ ಹಂತದಲ್ಲಿ ಎಡವಿತು. ಯಾರೂ ಊಹಿಸಿದ ರೀತಿಯಲ್ಲಿ ಪ್ರದರ್ಶನ ನೀಡಿದ ಪಾಕಿಸ್ತಾನ 180 ರನ್‌ಗಳ ಗೆಲುವು ದಾಖಲಿಸಿ ಪ್ರಶಸ್ತಿ ಗೆದ್ದುಕೊಂಡಿತು. ಪಾಕಿಸ್ತಾನ ನೀಡಿ 339 ರನ್ ಟಾರ್ಗೆಟ್ ಬೆನ್ನಟ್ಟಿದ ಭಾರತ ಕೇವಲ 158 ರನ್‌ಗೆ ಆಲೌಟ್ ಆಗಿತ್ತು. ಈ ಮೂಲಕ ಸತತ 2ನೇ ಬಾರಿ ಚಾಂಪಿಯನ್ಸ್ ಟ್ರೋಫಿ ಗೆಲ್ಲೋ ಅವಕಾಶವನ್ನ ಕೈಚೆಲ್ಲಿತು.

ಕಪಿಲ್ ಆರ್ಭಟ:
ಕಳೆದ ವರ್ಷದ ಒಂದು ಕಹಿ ನೆನಪು ಹೊರತುಪಡಿಸಿದರೆ, ಜೂನ್ 18 ಭಾರತೀಯರಿಗೆ ಹೆಚ್ಚು ಯಶಸ್ಸು ನೀಡಿದೆ. 1983ರ ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಭಾರತ ಜಿಂಬಾಬ್ವೆ ವಿರುದ್ಧ ಹೋರಾಟ ನಡೆಸಿತ್ತು. ಮೊದಲು ಬ್ಯಾಟಿಂಗ್ ಇಳಿದ ಭಾರತ 15 ರನ್ ಗಳಿಸುವಷ್ಟರಲ್ಲೇ ಪ್ರಮುಖ 5 ವಿಕೆಟ್ ಕಳೆದುಕೊಂಡಿತು. ಆದರೆ ನಾಯಕ ಕಪಿಲ್ ದೇವ್ ಕಣಕ್ಕಿಳಿಯುತ್ತಿದ್ದಂತೆ ಪಂದ್ಯದ ಚಿತ್ರಣ ಬದಲಾಯಿತು. 138 ಎಸೆತದಲ್ಲಿ 16 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ ಅಜೇಯ 175 ರನ್ ಸಿಡಿಸಿದರು.  ಹೀಗಾಗಿ ಭಾರತ 8 ವಿಕೆಟ್ ನಷ್ಟಕ್ಕೆ 266 ರನ್ ಸಿಡಿಸಿತು. ಬಳಿಕ ಬೌಲಿಂಗ್‌ನಲ್ಲಿ ಅದ್ಬುತ ಪ್ರದರ್ಶನ ನೀಡಿದ ಭಾರತ ಜಿಂಬಾಬ್ವೆ ತಂಡವನ್ನ 235ರನ್‌ಗೆ ಆಲೌಟ್ ಮಾಡಿ 31 ರನ್‌ಗಳ ಗೆಲುವು ಸಾಧಿಸಿತು.

ಆಸ್ಟ್ರೇಲಿಯಾಗೆ ಆಘಾತ:
ಜೂನ್ 18, 2005ರಲ್ಲಿ ನಡೆದ ನಾಟ್‌ವೆಸ್ಟ್ ಸರಣಿಯ 2ನೇ ಪಂದ್ಯದಲ್ಲಿ ವಿಶ್ವಚಾಂಪಿಯನ್ ಆಸ್ಟ್ರೇಲಿಯಾ ತಂಡಕ್ಕೆ ಆಘಾತ ಎದುರಾಗಿತ್ತು. ಬಾಂಗ್ಲಾದೇಶ ನೀಡಿದ ಅದ್ಬುತ ಪ್ರದರ್ಶನಕ್ಕೆ ಬೆಚ್ಚಿಬಿದ್ದ ಆಸಿಸ್, ಸೋಲಿಗೆ ಶರಣಾಗಿತ್ತು. ಆಸ್ಟ್ರೇಲಿಯಾ ತಂಡವನ್ನ 249 ರನ್‌ಗಳಿಗೆ ಕಟ್ಟಿಹಾಕಿದ ಬಾಂಗ್ಲಾದೇಶ 49.2 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಗುರಿ ತಲುಪಿ ದಾಖಲೆ ಬರೆಯಿತು.

loader