ಟೆಸ್ಟ್ ಕ್ರಿಕೆಟ್'ನಲ್ಲಿ ಮೊದಲ ಓವರ್'ನಲ್ಲೇ ಹ್ಯಾಟ್ರಿಕ್ ವಿಕೆಟ್ ಕಿತ್ತ ಸಾಧನೆ ಮಾಡಿದ ಏಕೈಕ ಬೌಲರ್ ಇರ್ಫಾನ್ ಪಠಾಣ್

ಟೀಂ ಇಂಡಿಯಾದ ಕ್ರಿಕೆಟಿಗ ಇರ್ಫಾನ್ ಪಠಾಣ್, ಲಂಕಾ ಕ್ರಿಕೆಟ್ ದಂತಕತೆ ಕುಮಾರ್ ಸಂಗಕ್ಕಾರ ಹಾಗೂ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್'ಮನ್ ಡೇವಿಡ್ ವಾರ್ನರ್ 27/10 ರಂದು ಹುಟ್ಟುಹಬ್ಬ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಇವರ ಅಪರೂಪದ ಸಾಧನೆ ನಿಮ್ಮ ಮುಂದೆ...

* ಕುಮಾರ್ ಸಂಗಕ್ಕಾರ ಟೆಸ್ಟ್ ಕ್ರಿಕೆಟ್'ನಲ್ಲಿ ಅತಿ ವೇಗವಾಗಿ 8,9,10,11&12 ಸಾವಿರ ರನ್ ಪೂರೈಸಿದ ದಾಖಲೆ ಹೊಂದಿದ್ದಾರೆ.

* ಏಕದಿನ ಕ್ರಿಕೆಟ್'ನಲ್ಲಿ ಸತತ 4 ಶತಕ ಹಾಗೂ ಟೆಸ್ಟ್ ಕ್ರಿಕೆಟ್'ನಲ್ಲಿ ಸತತ 4 ಬಾರಿ 150+ ರನ್ ಸಿಡಿಸಿದ ಏಕೈಕ ಬ್ಯಾಟ್ಸ್'ಮನ್ ಕುಮಾರ್ ಸಂಗಕ್ಕಾರ.

* ಟೆಸ್ಟ್ ಕ್ರಿಕೆಟ್'ನಲ್ಲಿ ಮೊದಲ ಓವರ್'ನಲ್ಲೇ ಹ್ಯಾಟ್ರಿಕ್ ವಿಕೆಟ್ ಕಿತ್ತ ಸಾಧನೆ ಮಾಡಿದ ಏಕೈಕ ಬೌಲರ್ ಇರ್ಫಾನ್ ಪಠಾಣ್

* ಐಪಿಎಲ್'ನಲ್ಲಿ ಅತಿಹೆಚ್ಚು ರನ್ ಸಿಡಿಸಿರುವ ಭಾರತಿಯೇತರ ಆಟಗಾರ ಡೇವಿಡ್ ವಾರ್ನರ್.

* ಟಿ20 ಕ್ರಿಕೆಟ್ ಇತಿಹಾಸದಲ್ಲಿ ಸತತ 2 ಶತಕ ಸಿಡಿಸಿದ ಏಕೈಕ ಬ್ಯಾಟ್ಸ್'ಮನ್ ಕೂಡಾ ವಾರ್ನರ್.

(2011 ಚಾಂಪಿಯನ್ಸ್ ಲೀಗ್ ಟಿ20ಯಲ್ಲಿ: ಸಿಎಸ್'ಕೆ ವಿರುದ್ಧ 135*& ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 123*)

* 5 ದೇಶಗಳ ವಿರುದ್ಧ ಏಕದಿನ ಕ್ರಿಕೆಟ್'ನಲ್ಲಿ 100+ ಪಂದ್ಯಗಳನ್ನಾಡಿದ ಏಕೈಕ ತಂಡ ಭಾರತ

(ಶ್ರೀಲಂಕಾ: 155, ಪಾಕಿಸ್ತಾನ: 129, ಆಸ್ಟ್ರೇಲಿಯಾ: 128, ವೆಸ್ಟ್'ಇಂಡಿಸ್: 121 & ನ್ಯೂಜಿಲೆಂಡ್: 100)