ಮಹೇಂದ್ರ ಸಿಂಗ್ ಧೋನಿ ಬಗ್ಗೆ ಗೊತ್ತಿರದ ಆ 8 ಸತ್ಯಗಳು!

Cricket Secret: 8 things you did not know about MS Dhoni
Highlights

ಮಹೇಂದ್ರ ಸಿಂಗ್ ಧೋನಿ ಹೆಸರು ಯಾರಿಗೆ ತಾನೆ ಗೊತ್ತಿಲ್ಲ. ಜಗತ್ತು ಕಂಡ ಕ್ರಿಕೆಟ್ ದಿಗ್ಗಜರಲ್ಲಿ ಧೋನಿಗೂ ಒಂದು ಸ್ಥಾನವಿದೆ. ಧೋನಿ ಜೀವನದ ಕುರಿತಾಗಿ ಬಾಲಿವುಡ್ ಸಿನಿಮಾವೂ ಬಂದು ಹೋಗಿದೆ. ಆದರೆ ಅದೇ ಕೂಲ್ ಕ್ಯಾಪ್ಟನ್ ಬಗ್ಗೆ ಗೊತ್ತಿಲ್ಲದ ಒಂದಿಷ್ಟು ವಿಚಾರಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.. 

ರೈಲ್ವೆ ಇಲಾಖೆಯಲ್ಲಿ ಸಣ್ಣ ಕೆಲಸ ಮಾಡಿಕೊಂಡಿದ್ದ ಮಹೇಂದ್ರ ಸಿಂಗ್ ಧೋನಿ ಭಾರತ ಕ್ರಿಕೆಟ್ ತಂಡದ ನಾಯಕನಾಗಿ ಬೆಳೆದ ಕತೆಯೇ ಒಂದು ರೋಚಕ ಅಧ್ಯಾಯ. ಅದರಲ್ಲಿ ಹಲವಾರು ಏಳು ಬೀಳುಗಳಿವೆ. ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕನಾಗಿ ಟ್ರೋಫಿಗಳಿಗೆ ಮುತ್ತಿಟ್ಟಿದ್ದನ್ನು ಮರೆಯುವಂತೆ ಇಲ್ಲ.

ಧೊನಿ ಬಗ್ಗೆ ನಿಮಗೆ ಗೊತ್ತಿರದ 8 ಸತ್ಯಗಳು
1. ಶ್ವಾನ ಪ್ರೀತಿ:

ಮಹೇಂದ್ರ ಸಿಂಗ್ ಧೋನಿಗೆ ಶ್ವಾನಗಳೆಂದರೆ ಮೊದಲಿನಿಂದಲೂ ಅಚ್ಚು-ಮೆಚ್ಚು. 2013 ರಲ್ಲಿ ಬೀದಿ ನಾಯಿಗಳನ್ನು ಧೋನಿ ದತ್ತು ತೆಗೆದುಕೊಂಡಿದ್ದು ಸುದ್ದಿಯಾಗಿತ್ತು. ಐಪಿಎಲ್ ಸಂದರ್ಭದಲ್ಲಿ ಧೋನಿ ನಾಯಿಗಳೊಂದಿಗೆ ಆಟ ಆಡುತ್ತಿರುವ ಫೋಟೋಗಳು ವೈರಲ್ ಆಗಿದ್ದವು. ಧೋನಿ ತಮ್ಮ ನಾಯಿಗಳಿಗೆ ಪ್ರೀತಿಯ ಹೆಸರುಗಳನ್ನು ಇಡುತ್ತಾರೆ. ಸ್ಯಾಮ್ ಎನ್ನುವ ನಾಯಿ ಧೋನಿಯವರ ಮೆಚ್ಚಿನ ಸ್ಥಾನದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.

2. ಐಸಿಸಿಯ 3 ಪ್ರಮುಖ ಪ್ರಶಸ್ತಿ ಗೆದ್ದ ನಾಯಕ:
ಐಸಿಸಿಯ 3 ಪ್ರಮುಖ ಪ್ರಶಸ್ತಿ ಗೆದ್ದ ನಾಯಕ ಯಾರಾದರೂ ಇದ್ದರೆ ಅದು ಮಹೇಂದ್ರ ಸಿಂಗ್ ಧೋನಿ ಮಾತ್ರ. 2007 ರ ಟಿ-20 ವಿಶ್ವಕಪ್, 2013ರ ಚಾಂಪಿಯನ್ಸ್ ಟ್ರೋಫಿ ಮತ್ತು 2011 ರಲ್ಲಿ ಏಕದಿನ ವಿಶ್ವಕಪ್ ಗೆದ್ದ ಸಾಧನೆ ಧೋನಿ ಹೆಸರಿನಲ್ಲಿಯೇ ಇದೆ.

3. ಲೆಫ್ಟಿನೆಂಟ್ ಕರ್ನಲ್ ಧೋನಿ
2011 ನವೆಂಬರ್ ನಲ್ಲಿ ಸೇನೆ ಧೋನಿ ಅವರಿಗೆ ಲೆಫ್ಟಿನೆಂಟ್ ಕರ್ನಲ್ ಹುದ್ದೆ ನೀಡುತ್ತದೆ. 1983ರ ವಿಶ್ವಕಪ್ ಗೆದ್ದ ನಾಐಕ ಕಪಿಲ್ ದೇವ್ ಅವರಿಗೆ ಮಾತ್ರ ಈ ಗೌರವ ಹಿಂದೆ ಸಿಕ್ಕಿತ್ತು. 2018ರಲ್ಲಿ ಧೋನಿ ಅವರಿಗೆ ಪದ್ಮಭೂಷಣ ಗೌರವ ಸಹ ನೀಡಿ ಗೌರವಿಸಲಾಗುತ್ತದೆ.

4. ಬಾಲಿವುಡ್ ನಟಿ ಬಿಪಾಶಾ ಬಸು ನೆಚ್ಚಿನ ಗೆಳತಿ!
ಎಲ್ಲರೊಂದಿಗೂ ಸ್ನೇಹ ಪರವಾಗಿ ನಡೆದುಕೊಳ್ಳುವ ಧೋನಿಗೆ ಬಾಲಿವುಡ್ ನಟಿ ಬಿಪಾಶಾ ಬಸು ನೆಚ್ಚಿನ ಗೆಳತಿ. ಧೋನಿ ಸಾಕ್ಷಿ ಅವರನ್ನು ಮದುವೆಯಾಗುವುದಕ್ಕೂ ಮುನ್ನ ರೂಮರ್ ಗಳು ಕೇಳಿ ಬಂದಿದ್ದವು. ಮದುವೆಯಾದ ನಂತರವೂ ಇವರ ಗೆಳೆತನ ಹಾಗೆ ಇದೆ.

5. ಹಾಲು ಇಷ್ಟ,,ಚಿಕನ್ ಕಷ್ಟ:
ಆಹಾರದ ವಿಷಯಕ್ಕೆ ಬಂದರೆ  ಧೋನಿಗೆ ಎಲ್ಲವೂ ಇಷ್ಟ. ಆದರೆ ಚಿಕನ್ ಅಂದ್ರೆ ಸ್ವಲ್ಪ ಹಿಂದಕ್ಕೆ ಹೆಜ್ಜೆ ಇಡುತ್ತಾರೆ. ಇನ್ನು ಹಾಲು ಕುಡಿಯುವುದರಲ್ಲಿ ಮಹಿ ಮೀರಿಸಿದವರು ಯಾರೂ ಇಲ್ಲ ಬಿಡಿ! ಚಿಕನ್ ಬಟರ್ ಮಸಾಲಾ, ಕಬಾಬ್, ಚಿಕನ್ ಟಿಕ್ಕಾ ಪಿಜ್ಜಾ ಸಹ ಧೋನಿಗೆ ಇಷ್ಟವಾಗುತ್ತಂತೆ.

6. ಈ ದಾಖಲೆಯನ್ನು ಮುರಿಯಲು ಸಾಧ್ಯವಿದೆ:
ಫುಟ್ ಬಾಲ್ ಗೋಲ್ ಕೀಪರ್ ಆಗಿದ್ದವ ಕ್ರಿಕೆಟ್ ಆಟಗಾರನಾದ ಕತೆ ನಿಮಗೆ ಗೊತ್ತೆ ಇದೆ. ವಿಕೆಟ್ ನ ಹಿಂದೆ ಅತಿ ಹೆಚ್ಚು ಬಲಿ ಪಡೆದ ದಾಖಲೆಯಲ್ಲಿ ಧೋನಿಗೆ ವಿಶ್ವದಲ್ಲೇ ಮೂರನೆ ಸ್ಥಾನ. ಟಿ-20, ಏಕದಿನ ಮತ್ತು ಟೆಸ್ಟ್ ಮೂರನ್ನು ಸೇರಿಸಿ ದಾಖಲೆಗಳ ಲೆಕ್ಕ ಹಾಕಿದರೆ ಮಾರ್ಕ್ ಬೌಚರ್[998], ಗಿಲ್ ಕ್ರಿಸ್ಟ್ [905] ನಂತರದ ಸ್ಥಾನ ಧೋನಿಗೆ[778]. ಧೋನಿ 602 ಕ್ಯಾಚ್ ಮತ್ತು 176 ಸ್ಟಂಪಿಂಗ್ ಮಾಡಿದ ದಾಖಲೆಯನ್ನು ಹೊಂದಿದ್ದಾರೆ. ಧೋನಿ ಇನ್ನು ಪಂದ್ಯ ಆಡುತ್ತಿದ್ದು ನಂಬರ್ 1 ಆಗುವ ಸಾದ್ಯತೆಗಳು ಹಾಗೆ ಇದೆ.

7. ಜಾಹೀರಾತು ಮಾರುಕಟ್ಟೆ ಬಾದ್ ಷಾ: 
ಶಾರುಖ್ ಖಾನ್ ಬಿಟ್ಟರೆ ಅತಿ ಹೆಚ್ಚು ಜಾಹೀರಾತಿನಲ್ಲಿ ಕಾಣಿಸಿಕೊಂಡ ದಾಖಲೆಯೂ ಧೋನಿ ಬಳಿಯಲ್ಲೇ ಇದೆ. 2015ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ವಿಶ್ವದ 100 ಜನ ಸ್ಫೋರ್ಟ್ ಮೆನ್ ಗಳಲ್ಲಿ ಧೋನಿಗೆ 23ನೇ ಸ್ಥಾನ ಇತ್ತು. ಪೆಪ್ಸಿ, ರೀಬಾಕ್ ಸೇರಿದಂತೆ ಅನೇಕ ಕಂಪನಿಗಳ ಬ್ಯ್ರಾಂಡ್ ವ್ಯಾಲ್ಯೂ ಮಹೇಂದ್ರರಿಂದ ಹೆಚ್ಚಿದೆ!

8. ಧೋನಿ ಸದ್ಯದ ಆಸ್ತಿ 759 ಕೋಟಿ!
ವಿವಿಧ ಜಾಹೀರಾತುಗಳ ಒಪ್ಪಂದ ಹೊರತುಪಡಿಸಿ ಲೆಕ್ಕಹಾಕಿದರೆ ಧೋನಿ ಸದ್ಯದ ಆಸ್ತಿ 111 ಮಿಲಿಯನ್ ಡಾಲರ್ ಅಂದರೆ ಬರೋಬ್ಬರಿ  759 ಕೋಟಿ ರೂ. ಗೂ ಅಧಿಕ. 36 ವರ್ಷದ ಕ್ರಿಕೆಟಿಗ ವಿವಿಧ ಬಿಜಿನಸ್ ಗಳಲ್ಲೂ ಪಾಲುದಾರ. ಫುಟ್ ಬಾಲ್, ಹಾಕಿ ಟೀಮ್ ಗಳ ಒಡೆತನ ಸಹ ಧೋನಿ ಬಳಿ ಇದೆ.

loader