Asianet Suvarna News Asianet Suvarna News

ಬಹುತೇಕ ಎಲ್ಲಾ ಕ್ರಿಕೆಟ್ ರೂಲ್ಸ್ ಚೇಂಜ್..!: ಅಭಿಮಾನಿಗಳ ಗೊಂದಲಕ್ಕೆ ಬೀಳುತ್ತೆ ಬ್ರೇಕ್..!

ನೀವು ಇಷ್ಟು ದಿನ ನೋಡಿದ್ದ ಕ್ರಿಕೆಟ್​​​ ಇನ್ಮುಂದೆ ಇರೋದಿಲ್ಲ. ಕ್ರಿಕೆಟ್​​ನ ಬಹುತೇಕ ರೂಲ್ಸ್​​ಗಳು ನಾಳೆಯಿಂದ ಚೇಂಜ್​ ಆಗ್ತಿದೆ. ಕಾಲ ಬದಲಾಗ್ತಿದಂತೆ ಕ್ರಿಕೆಟ್​​​ ರೂಲ್ಸ್​​ ಕೂಡ ಬದಲಾಗ್ತಿದೆ. ಹೌದು ಸದ್ಯ ಕ್ರಿಕೆಟ್​​​ ಅಭಿಮಾನಿಗಳು ತಮ್ಮ ಕ್ರಿಕೆಟ್​​​ ನಾಲೆಡ್ಜ್​​​ ಅನ್ನ ಅಪ್​​​ಡೇಟ್ ಮಾಡಿಕೊಳ್ಳೋ ಟೈಮ್​​​ ಬಂದಿದೆ. ಯಾವೆಲ್ಲಾ ಹೊಸ ರೂಲ್ಸ್​​​​ ಇಂದು ಜಾರಿಯಾಗ್ತಿದೆ ಅನ್ನೋ ಡಿಟೈಲ್ಸ್​​ ಇಲ್ಲಿದೆ ನೋಡಿ.

Cricket Rules has been changed

ಅಕ್ಟೋಬರ್​​​ 28 ಅಂದ್ರೆ ನಾಳೆಯಿಂದ ಅಂತಾರಾಷ್ಟ್ರೀಯ ಕ್ರಿಕೆಟ್​​​​ ಬದಲಾಗಲಿದೆ. ಹೊಸಹೊಸ ರೂಲ್ಸ್​​ ನಾಳೆಯಿಂದ ಪರಿಚಯವಾಗ್ತಿವೆ. ಅದರಂತೆ ಎಲ್ಲಾ ಆಟಗಾರರು ಮತ್ತು ಕ್ರಿಕೆಟ್​​​ ಮಂಡಳಿಗಳು  ಜೊತೆಗೆ ಕ್ರಿಕೆಟ್​​ ಅಭಿಮಾನಿಗಳು ಕೊಂಚ ಅಪ್​​ಡೇಟ್​​ ಆಗುವ ಅವಶ್ಯಕತೆ ಇದೆ.

ಟಿ20 ಕ್ರಿಕೆಟ್​​​ನಲ್ಲೂ DRS ಬಳಕೆ: ಟೆಸ್ಟ್​​ ಕ್ರಿಕೆಟ್'​​​ನಲ್ಲಿ ಒಂದು ಇನ್ನಿಂಗ್ಸ್​​ಗೆ ಒಂದೇ DRS

ಇನ್ಮುಂದೆ ಟಿ20 ಪಂದ್ಯಗಳಲ್ಲೂ DRS ಅನ್ನು ಬಳಸಬಹುದು. ಇಲ್ಲಿಯವರೆಗೆ ಕೇವಲ ಟೆಸ್ಟ್​​ ಮತ್ತು ಏಕದಿನ ಪಂದ್ಯಗಳಿಗೆ ಮಾತ್ರ DRSಗೆ ಅವಕಾಶವಿತ್ತು. ಅಷ್ಟೇ ಅಲ್ಲ ಟೆಸ್ಟ್​​​ ಸರಣಿಯಲ್ಲಿ ಪ್ರತೀ 80 ಓವರ್​ಗಳಿಗೆ ನೀಡುತ್ತಿದ್ದ ಎರಡು DRS ಅವಕಾಶವನ್ನ ಕಡಿತಗೊಳಿಸಿ ಒಂದು ಇನ್ನಿಂಗ್ಸ್​​ಗೆ ಒಂದೇ ಬಾರಿ DRS ಪಡೆಯುವ ರೂಲ್ಸ್​​ ಅನ್ನು ತರಲಾಗಿದೆ. ಒಂದು ವೇಳೆ ಎಲ್​ಬಿಡಬ್ಲ್ಯುಗಾಗಿ DRS ಪಡೆದಲ್ಲಿ ಅದು ಅಂಪೈರ್ಸ್​​​ ಕಾಲ್​ ಎಂದು ಬಂದ್ರೆ ಆಗ DRS ಅವಕಾಶವನ್ನ ಕಳೆದುಕೊಳ್ಳುವುದಿಲ್ಲ.

ಅನುಚಿತ ವರ್ತನೆ ತೋರಿದ್ರೆ ಆಟಗಾರ ಸಸ್ಪೆಂಡ್​​​

ಇನ್ಮುಂದೆ ಆಟಗಾರರು ಹೇಗೆಬೇಕಾದ್ರೂ ಹಾಗೆ ಮೈದಾನದಲ್ಲಿ ನಡೆದುಕೊಳ್ಳುವಂತಿಲ್ಲ. ಮೈದಾನದಲ್ಲಿ ಆಟಗಾರರು ಅನುಚಿತ ವರ್ತನೆ ತೋರಿದ್ರೆ ಅಂಥವರನ್ನ ವಾಪಸ್​​​ ಪೆವಿಲಿಯನ್​​ಗೆ ಕಳುಹಿಸೋ ಅಧಿಕಾರ ಅಂಪೈರ್​​ಗೆ ನೀಡಲಾಗಿದೆ. ಒಮ್ಮೆ ಅಂಪೈರ್​​​ ಆಟಗಾರನನ್ನ ಮೈದಾನದಿಂದ ಹೊರಕಳಿಸಿದ್ರೆ ಮತ್ತೆ ಆ ಆಟಗಾರ ಯಾವುದೇ ಕಾರಣಕ್ಕೂ ಮೈದಾನಕ್ಕಿಳಿಯುವಂತಿಲ್ಲ.

ರನೌಟ್​​​ಗೂ ಬಂದಿದೆ ಹೊಸ ನಿಯಮ

ರನ್​ ಕದಿಯುವ ವೇಳೆ ಒಮ್ಮೆ ಬ್ಯಾಟ್ಸ್​​ಮನ್​ ಕ್ರಿಸ್​ ಒಳ ಭಾಗವನ್ನ ಮುಟ್ಟಿದರೆ ಸಾಕು. ನಂತರ ಅದು ಗಾಳಿಯಲ್ಲಿ ಇದ್ರೂ ಬ್ಯಾಟ್ಸ್​​ಮನ್​ ನಾಟೌಟ್​. ಮೊದಲೆಲ್ಲಾ ಫೀಲ್ಡರ್​​​ ಅಥವಾ ಕೀಪರ್​​​ ಬೇಲ್ಸ್​​ ಎಗರಿಸುವಾಗ ಬ್ಯಾಟ್​​ ಕ್ರೀಸ್​​ನೊಳಗೆ ತಾಕಿದ್ಯಾ ಅನ್ನೋದರ ಮೇಲೆ ಔಟ್​​ ಅಥವಾ ನಾಟೌಟ್​​ ಎಂದು ನಿರ್ಧರಿಸಲಾಗುತ್ತಿತ್ತು. ಈ ನಿಯಮ ಆರಂಭದಲ್ಲಿ ಕೊಂಚ ಗೊಂದಲ ಹುಟ್ಟಿಸಿದ್ರೂ ನಂತರ ಅದು ಪಕ್ವವಾಗುತ್ತೆ ಎಂಬ ನಂಬಿಕೆ ICCಯದ್ದು.

ಬ್ಯಾಟ್​​​​ ವಿನ್ಯಾಸಕ್ಕೆ ಹೊಸ ರೂಲ್ಸ್​​​​

ಇಲ್ಲಿಯವರೆಗೆ ಬ್ಯಾಟ್ಸ್​​​ಮನ್​ಗಳು ತಮ್ಮಿಷ್ಟದ ಅನುಗುಣವಾಗಿ ಬ್ಯಾಟ್​​ಗಳನ್ನ ಬದಲಿಸುತ್ತಿದ್ರು. ಆದ್ರೆ ICC ಅದಕ್ಕೆ ಬ್ರೇಕ್​​ ಹಾಕಿದೆ. ಬ್ಯಾಟ್​​ಗಳ ವಿನ್ಯಾಸವನ್ನ ಫೈನಲ್​​ ಮಾಡಿದೆ. ಇನ್ಮುಂದೆ ಬ್ಯಾಟ್​​ಗಳ ಅಗಲ 108 ಮಿಲಿಮೀಟರ್​​​ ಮೀರಬಾರದು. ಮತ್ತು ಗಾತ್ರ 67 ಮಿಲಿಮೀಟರ್​​ಗಿಂತ ಹೆಚ್ಚಿರಬಾರದು. ಬ್ಯಾಟ್​​ನ ಎರಡೂ ಇಕ್ಕಲಗಳ ಗಾತ್ರ 40 ಮಿಲಿಮೀಟರ್​​​ ದಾಟಿರಬಾರದು.

ಬೌಂಡರಿಯಲ್ಲಿ ಕ್ಯಾಚ್​​ ಪಡೆಯುವಾಗ ಹುಷಾರ್​​​..!

ಬ್ಯಾಟ್ಸ್​​ಮನ್​ ಸಿಕ್ಸ್​​ ಬಾರಿಸುವಾಗ ಸೂಪರ್​​ ಮ್ಯಾನ್​ ನಂತೆ ಹೆಗರಿ ಅದ್ಭುತವಾಗಿ ಕ್ಯಾಚ್​​ ಹಿಡಿದು ಹೀರೋ ಅನಿಸಿಕೊಳ್ತಿದ್ದ ಫೀಲ್ಡರ್​​ಗಳ ಮೇಲೆ ICCಯ ವಕ್ರದೃಷ್ಟಿ ಬಿದ್ದುಬಿಟ್ಟಿದೆ. ನಾಳೆಯಿಂದ ಇಂಥಃ ಕ್ಯಾಚ್​​ಗಳು ಹಿಡಿಯುವಾಗ ಕೊಂಚ ಎಚ್ಚರ ವಹಿಸಬೇಕು. ಯಾಕಂದ್ರೆ ಇನ್ಮುಂದೆ ಕ್ಯಾಚ್​​ ಹಿಡಿಯುವ ಫೀಲ್ಡರ್​​​ ಒಮ್ಮೆ ಬೌಂಡರಿಯನ್ನ ದಾಟಿ ಆಚೆ ಹೋದರೆ ಮುಗೀತು. ನಂತರ ಬಂದು ಕ್ಯಾಚ್​​ ಹಿಡಿದರೂ ಅಥವಾ ಬಾಲ್​ ಅನ್ನ ತಡೆದರೂ ಅದು ಬೌಂಡರಿ ಎಂದು ಘೋಷಿಸಲಾಗುತ್ತೆ.

ಇನ್ಮೇಲೆ ಎರಡು ಸಲ ಬೌನ್ಸ್​​ ಆದ್ರೆ ನೋಬಾಲ್​​

ಈ ನಿಯಮದ ಬಗ್ಗೆ ಗಲ್ಲಿ ಕ್ರಿಕೆಟರ್​​'ಗಳಿಗೆ ಹೆಚ್ಚು ಪರಿಚಯವಿರುತ್ತೆ. ಬೌಲರ್​​ ಎಸೆದ ಬಾಲ್​​ ಬ್ಯಾಟ್ಸ್​​ಮನ್​ ಬಳಿ ಹೋಗುವ ಹೊತ್ತಿಗೆ ಎರಡು ಪಿಚ್​​ ಬಿದ್ರೆ ಅದು ಗುಡ್​​ ಬಾಲ್​ ಎರಡಕ್ಕಿಂತ ಹೆಚ್ಚು ಪಿಚ್​​ ಬಿದ್ರೆ ಅದು ನೋಬಾಲ್​​ ಆಗಿತ್ತು. ಆದ್ರೆ ಇನ್ಮುಂದೆ 2 ಪಿಚ್​​ ಬಿದ್ರೂ ನೋಬಾಲೇ.

ಒಟ್ಟಿನಲ್ಲಿ, ಇನ್ಮುಂದೆ ಕ್ರಿಕೆಟ್​ನ ಎಷ್ಟೋ ರೂಲ್ಸ್​ಗಳು​​​ ಬದಲಾಗಲಿವೆ. ಕಾಲ ಬದಲಾದಂತೆ ಕ್ರಿಕೆಟ್​​ ಅನ್ನೂ ಬದಲಿಸುವ ಇರಾದೆ ICC ಯದ್ದು. ಹೀಗಾಗಿ ಹೊಸ ಹೊಸ ರೂಲ್ಸ್​ಗಳು ನಾಳೆಯಿಂದ ಜಾರಿಗೆ ಬರ್ತಿದೆ. ಏನೇಯಾದ್ರೂಈ ಹೊಸ ನಿಯಮಗಳು ಫ್ಲಾಪ್​​​​ ಆಗದೇ, ವೀಕ್ಷಕರಿಗೆ ಗೊಂದಲವೂ ಆಗದೇ ಯಶಸ್ವಿಯಾದ್ರೆ ಅಷ್ಟೇ ಸಾಕು.

 

 

Follow Us:
Download App:
  • android
  • ios