2ನೇ ದಿನದಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 208 ರನ್‌ಗಳಿಸಿದ್ದ ಕರ್ನಾಟಕ, 3ನೇ ದಿನವನ್ನು ಆತ್ಮವಿಶ್ವಾಸದೊಂದಿಗೆ ಆರಂಭಿಸಿತು. ಬಿ.ಆರ್.ಶರತ್ 93 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. 2ನೇ ದಿನದಂತ್ಯಕ್ಕೆ 66 ರನ್ ಗಳಿಸಿ ಅಜೇಯರಾಗಿ ಉಳಿದಿದ್ದ ಡಿ.ನಿಶ್ಚಲ್, 292 ಎಸೆತಗಳಲ್ಲಿ ಶತಕ ಪೂರೈಸಿದರು.
ನಾಗ್ಪುರ[ನ.15]: ಹಾಲಿ ಚಾಂಪಿಯನ್ ವಿದರ್ಭ ವಿರುದ್ಧ ರಣಜಿ ಟ್ರೋಫಿ ‘ಎ’ ಗುಂಪಿನ ಪಂದ್ಯದಲ್ಲಿ ಕರ್ನಾಟಕ 3 ಅಂಕ ಖಚಿತಪಡಿಸಿಕೊಂಡಂತೆ ತೋರುತ್ತಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ವಿದರ್ಭ ಗಳಿಸಿದ 307 ರನ್‌ಗಳಿಗೆ ಪ್ರತಿಯಾಗಿ ರಾಜ್ಯ ತಂಡ 378 ರನ್ ಕಲೆಹಾಕಿ, 71 ರನ್‌ಗಳ ಮುನ್ನಡೆ ಪಡೆದುಕೊಂಡಿತು. 3ನೇ ದಿನದಂತ್ಯಕ್ಕೆ ವಿದರ್ಭ 2ನೇ ಇನ್ನಿಂಗ್ಸ್‌ನಲ್ಲಿ 2 ವಿಕೆಟ್ ನಷ್ಟಕ್ಕೆ 72 ರನ್ ಗಳಿಸಿದ್ದು, 1 ರನ್ ಮುನ್ನಡೆ ಪಡೆದಿದೆ. ಗುರುವಾರ ಅಂತಿಮ ದಿನವಾಗಿದ್ದು, ಪಂದ್ಯ ಬಹುತೇಕ ಡ್ರಾನತ್ತ ಸಾಗಿದೆ.
2ನೇ ದಿನದಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 208 ರನ್‌ಗಳಿಸಿದ್ದ ಕರ್ನಾಟಕ, 3ನೇ ದಿನವನ್ನು ಆತ್ಮವಿಶ್ವಾಸದೊಂದಿಗೆ ಆರಂಭಿಸಿತು. ಬಿ.ಆರ್.ಶರತ್ 93 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. 2ನೇ ದಿನದಂತ್ಯಕ್ಕೆ 66 ರನ್ ಗಳಿಸಿ ಅಜೇಯರಾಗಿ ಉಳಿದಿದ್ದ ಡಿ.ನಿಶ್ಚಲ್, 292 ಎಸೆತಗಳಲ್ಲಿ ಶತಕ ಪೂರೈಸಿದರು. ಪ್ರ.ದರ್ಜೆ ಕ್ರಿಕೆಟ್‌ನಲ್ಲಿ ಇದು ಅವರ 2ನೇ ಶತಕ. ಇನ್ನಿಂಗ್ಸ್‌ನ 100ನೇ ಓವರ್‌ನಲ್ಲಿ 300 ರನ್‌ಗಳ ಗಡಿ ದಾಟಿದ ಕರ್ನಾಟಕ, ಇನ್ನಿಂಗ್ಸ್ ಮುನ್ನಡೆಯತ್ತ ಹೆಜ್ಜೆ ಹಾಕಿತು.
ಶರತ್ 159 ಎಸೆತಗಳಲ್ಲಿ 100 ರನ್ ಗಳಿಸಿ, ಚೊಚ್ಚಲ ರಣಜಿ ಪಂದ್ಯದಲ್ಲೇ ಶತಕ ಬಾರಿಸಿದ ಕರ್ನಾಟಕದ 9ನೇ ಆಟಗಾರ ಎನ್ನುವ ಹಿರಿಮೆಗೆ ಪಾತ್ರರಾದರು. ರಾಜ್ಯ ತಂಡ ಮುನ್ನಡೆ ಗಳಿಸಿದ ಬಳಿಕ ಶರತ್ ವಿಕೆಟ್ ಕಳೆದುಕೊಂಡರು. 161 ಎಸೆತಗಳಲ್ಲಿ 20 ಬೌಂಡರಿಗಳೊಂದಿಗೆ 103 ರನ್ ಗಳಿಸಿ ಔಟಾದರು. ಇದರೊಂದಿಗೆ 6ನೇ ವಿಕೆಟ್‌ಗೆ ದಾಖಲಾದ 160 ರನ್‌ಗಳ ಜೊತೆಯಾಟಕ್ಕೆ ತೆರೆಬಿತ್ತು. 338 ಎಸೆತಗಳನ್ನು ಎದುರಿಸಿ 10 ಬೌಂಡರಿಗಳೊಂದಿಗೆ 113 ರನ್ ಗಳಿಸಿದ ನಿಶ್ಚಲ್ ತಂಡದ ಮೊತ್ತ 346 ರನ್ ಆಗಿದ್ದಾಗ ಔಟಾದರು. ನಾಯಕ ವಿನಯ್ 39, ಸುಚಿತ್ 20 ರನ್‌ಗಳ ಕೊಡುಗೆ ನೀಡಿದರು. 134 ಓವರ್ ಬ್ಯಾಟಿಂಗ್ ಮಾಡಿದ ಕರ್ನಾಟಕ 378ಕ್ಕೆ ಆಲೌಟ್ ಆಯಿತು. ಆದಿತ್ಯ ಸರವಾಟೆ 5 ವಿಕೆಟ್ ಕಿತ್ತರು.
71 ರನ್‌ಗಳ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ವಿದರ್ಭ, 32 ರನ್ ಗಳಿಸುವಷ್ಟರಲ್ಲಿ ಆರಂಭಿಕರನ್ನು ಕಳೆದುಕೊಂಡಿತು. ವಾಸೀಂ ಜಾಫರ್(21), ಗಣೇಶ್ ಸತೀಶ್ (24) ರನ್ ಗಳಿಸಿದ್ದು 4ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಸ್ಕೋರ್: ವಿದರ್ಭ 307 ಹಾಗೂ 72/1, ಕರ್ನಾಟಕ 378
