2020ರ ಟಿ20 ಏಷ್ಯಾಕಪ್ ಟೂರ್ನಿ ಯುಎಇನಲ್ಲಿ..?
ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ದಶಕ ಬಳಿಕ ಇದೇ ಮೊದಲ ಬಾರಿಗೆ ಏಷ್ಯಾಕಪ್ ಆತಿಥ್ಯದ ಹಕ್ಕನ್ನು ಪಡೆದಿದೆ. ಆದರೆ ಗುರುವಾರ ಢಾಕಾದಲ್ಲಿ ನಡೆದ ಏಷ್ಯನ್ ಕ್ರಿಕೆಟ್ ಸಮಿತಿ(ಎಸಿಸಿ) ಸಭೆಯಲ್ಲಿ, ಪಿಸಿಬಿ ಅಧಿಕಾರಿಗಳಿಗೆ ಪಾಕಿಸ್ತಾನದಿಂದ ಹೊರಗೆ ಟೂರ್ನಿ ನಡೆಸಬೇಕು ಎಂದು ತಿಳಿಸಲಾಗಿದೆ.
ನವದೆಹಲಿ(ಡಿ.15):2020ರ ಏಷ್ಯಾಕಪ್ ಟಿ20 ಟೂರ್ನಿ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ)ನಲ್ಲಿ ನಡೆಯುವ ಸಾಧ್ಯತೆಗಳು ಹೆಚ್ಚಾಗಿವೆ.
ಬಾಂಗ್ಲಾ ವಿರುದ್ಧ ರೋಚಕ ಗೆಲುವು-ಭಾರತಕ್ಕೆ 7ನೇ ಏಷ್ಯಾಕಪ್ ಕಿರೀಟ
ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ದಶಕ ಬಳಿಕ ಇದೇ ಮೊದಲ ಬಾರಿಗೆ ಏಷ್ಯಾಕಪ್ ಆತಿಥ್ಯದ ಹಕ್ಕನ್ನು ಪಡೆದಿದೆ. ಆದರೆ ಗುರುವಾರ ಢಾಕಾದಲ್ಲಿ ನಡೆದ ಏಷ್ಯನ್ ಕ್ರಿಕೆಟ್ ಸಮಿತಿ(ಎಸಿಸಿ) ಸಭೆಯಲ್ಲಿ, ಪಿಸಿಬಿ ಅಧಿಕಾರಿಗಳಿಗೆ ಪಾಕಿಸ್ತಾನದಿಂದ ಹೊರಗೆ ಟೂರ್ನಿ ನಡೆಸಬೇಕು ಎಂದು ತಿಳಿಸಲಾಗಿದೆ. ಅಲ್ಲದೆ ಬಿಸಿಸಿಐ ಕೂಡ ಎಸಿಸಿ ನಡೆಗೆ ಸಮ್ಮತಿ ಸೂಚಿಸಿದ್ದು, ಪಾಕಿಸ್ತಾನದ ಹೊರಗೆ ಟೂರ್ನಿ ನಡೆಸಬೇಕು ಎಂದಿದೆ.
ಏಷ್ಯಾಕಪ್’ನಲ್ಲಿ ಮಿಂಚಿದ ಟಾಪ್ 5 ಬೌಲರ್’ಗಳಿವರು
2019ರಲ್ಲಿ ಏಕದಿನ ವಿಶ್ವಕಪ್ ನಡೆಯುವುದರಿಂದ 2018ರ ಏಷ್ಯಾಕಪ್‌ನ್ನು ಏಕದಿನ ಮಾದರಿಯಲ್ಲಿ ನಡೆಸಲಾಗಿತ್ತು. 2020ರಲ್ಲಿ ಟಿ20 ವಿಶ್ವಕಪ್ ಇರುವುದರಿಂದ 2020ರ ಏಷ್ಯಾಕಪ್‌ನ್ನು ಟಿ20 ಮಾದರಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ.