ಐಸ್ ಟಿ20 : ಹಿಮದ ಮೇಲೆ ದಿಗ್ಗಜ ಕ್ರಿಕೆಟಿಗರ ಸಾಹಸ

sports | Friday, February 9th, 2018
Suvarna Web Desk
Highlights

ಟಿ20ಯಿಂದಾಗಿ ಕ್ರಿಕೆಟ್ ಜಗತ್ತಿನ ಮೂಲೆ ಮೂಲೆಗೆ ತಲುಪುತ್ತಿದೆ. ಇಲ್ಲಿನ ಹೆಪ್ಪುಗಟ್ಟಿದ ಕೆರೆಯ ಮೇಲೆ ಕ್ರಿಕೆಟ್ ಆಡುವ ದಿಗ್ಗಜ ಆಟಗಾರರ ಸಾಹಸ ಕ್ರಿಕೆಟ್ ಅಭಿಮಾನಿ ಗಳ ಮನ ಸೆಳೆದಿದೆ.

ಸೇಂಟ್ ಮೊರಿಟ್ಜ್(ಸ್ವಿಟ್ಜರ್‌ಲೆಂಡ್): ಟಿ20ಯಿಂದಾಗಿ ಕ್ರಿಕೆಟ್ ಜಗತ್ತಿನ ಮೂಲೆ ಮೂಲೆಗೆ ತಲುಪುತ್ತಿದೆ. ಇಲ್ಲಿನ ಹೆಪ್ಪುಗಟ್ಟಿದ ಕೆರೆಯ ಮೇಲೆ ಕ್ರಿಕೆಟ್ ಆಡುವ ದಿಗ್ಗಜ ಆಟಗಾರರ ಸಾಹಸ ಕ್ರಿಕೆಟ್ ಅಭಿಮಾನಿ ಗಳ ಮನ ಸೆಳೆದಿದೆ.

ಗುರುವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ವೀರೇಂದ್ರ ಸೆಹ್ವಾಗ್ ನೇತೃತ್ವದ ಡೈಮಂಡ್ಸ್ ತಂಡದ ವಿರುದ್ಧ ಶಾಹಿದ್ ಅಫ್ರಿದಿಯ ರಾಯಲ್ಸ್ ತಂಡ 6 ವಿಕೆಟ್‌ಗಳ ಗೆಲುವು ಸಾಧಿಸಿ 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿತು.

ಚಳಿಯಲ್ಲಿ ನಡುಗಿದ ತಾರೆಯರು: ಸ್ವಿಸ್‌ನ ಮನ ಮೋಹಕ ಹಿಮಪರ್ವತದ ಮಧ್ಯೆ ಇರುವ ಸೇಂಟ್ ಮೊರಿಟ್ಜ್ ಕೆರೆ, ಕ್ರಿಕೆಟಿಗರಿಗೆ ಹೊಸ ಅನುಭವ ನೀಡಿತು. ರಮಣೀಯ ದೃಶ್ಯಗಳನ್ನು ಕಣ್ತುಂಬಿಕೊಂಡ ಕ್ರಿಕೆಟಿಗರು ಚಳಿಯಲ್ಲಿ ನಡುಗಿದರು. ಪಂದ್ಯದ ಆರಂಭದಲ್ಲಿ ಕಷ್ಟವಾದರೂ, ಮೈಚಳಿ ಬಿಟ್ಟು ತೋರಿದ ಪ್ರದರ್ಶನ ನೆರೆದಿದ್ದ ಸುಮಾರು 500 ಪ್ರೇಕ್ಷಕರನ್ನು ರಂಜಿಸಿತು.

ವೀರೂ ಮೊದಲ ಬಾಲ್ ಬೌಂಡರಿ: ಕ್ರಿಕೆಟ್‌ನಲ್ಲಿ ಕೆಲವೊಂದು ಬದಲಾಗುವುದಿಲ್ಲ. ಸೆಹ್ವಾಗ್ ನಿವೃತ್ತಿ ಪಡೆದಿರಬಹುದು, ಆದರೆ ಅವರ ಬ್ಯಾಟಿಂಗ್ ಶೈಲಿ ಬದಲಾಗಿಲ್ಲ. ಮೊದಲು ಬ್ಯಾಟಿಂಗ್‌ಗಿಳಿದ ಡೈಮಂಡ್ಸ್ ಪರ ಇನ್ನಿಂಗ್ಸ್ ಆರಂಭಿಸಿದ ಸೆಹ್ವಾಗ್, ತಮ್ಮ ಹಳೆ ವೈರಿ ಪಾಕಿಸ್ತಾನದ ಅಖ್ತರ್ ಎಸೆದ ಪಂದ್ಯದ ಮೊದಲ ಎಸೆತವನ್ನೇ ಬೌಂಡರಿಗಟ್ಟಿದರು.

ಸೆಹ್ವಾಗ್ ಕೇವಲ 31 ಎಸೆತಗಳಲ್ಲಿ 62 ರನ್ ಚಚ್ಚಿದರು. ಡೈಮಂಡ್ಸ್ ತಂಡ 9 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತು. ಈ ಗುರಿಯನ್ನು ರಾಯಲ್ಸ್ 15.2 ಓವರ್‌ಗಳಲ್ಲೇ ಬೆನ್ನಟ್ಟಿತು. ಶುಕ್ರವಾರ 2ನೇ ಟಿ20 ಪಂದ್ಯ ನಡೆಯಲಿದೆ.

Comments 0
Add Comment

    Related Posts

    ಮೈತ್ರಿ ಸರ್ಕಾರ ಹೆಚ್ಚು ದಿನ ಉಳಿಯೋದಿಲ್ಲ: ಜಗ್ಗೇಶ್ ಭವಿಷ್ಯ

    news | Tuesday, May 22nd, 2018