ಟಿ20 ವಿಶ್ವಕಪ್ ಸೆಮಿಫೈನಲ್‌ಗೆ ತಂಡದ ಆಯ್ಕೆ ವಿಚಾರವಾಗಿ ಎದ್ದಿರುವ ವಿವಾದದ ಬಗ್ಗೆ ವಿವರಣೆ ನೀಡಿದರು. ಆಟಗಾರ್ತಿಯರ ಜತೆ ಭೇಟಿಯನ್ನು ಜೋಹ್ರಿ ಖಚಿತಪಡಿಸಿದ್ದಾರೆ. ಬುಧವಾರ ಕೋಚ್ ರಮೇಶ್ ಪೊವಾರ್, ಬಿಸಿಸಿಐ ಅಧಿಕಾರಿಗಳನ್ನು ಭೇಟಿ ಮಾಡಿ ವಿವರಣೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನವದೆಹಲಿ: ಭಾರತ ಟಿ20 ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಹಾಗೂ ಏಕದಿನ ತಂಡದ ನಾಯಕಿ ಮಿಥಾಲಿ ರಾಜ್ ಸೋಮವಾರ ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ಹಾಗೂ ಕ್ರಿಕೆಟ್ ವ್ಯವಹಾರಗಳ ವ್ಯವಸ್ಥಾಪಕ ಸಾಬಾ ಕರೀಂರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದರು.
ಹರ್ಮನ್, ಮಿಥಾಲಿ ಜತೆ ಬಿಸಿಸಿಐ ಆಡಳಿತ ಸಮಿತಿ ಸಭೆ!
ಟಿ20 ವಿಶ್ವಕಪ್ ಸೆಮಿಫೈನಲ್‌ಗೆ ತಂಡದ ಆಯ್ಕೆ ವಿಚಾರವಾಗಿ ಎದ್ದಿರುವ ವಿವಾದದ ಬಗ್ಗೆ ವಿವರಣೆ ನೀಡಿದರು. ಆಟಗಾರ್ತಿಯರ ಜತೆ ಭೇಟಿಯನ್ನು ಜೋಹ್ರಿ ಖಚಿತಪಡಿಸಿದ್ದಾರೆ. ಬುಧವಾರ ಕೋಚ್ ರಮೇಶ್ ಪೊವಾರ್, ಬಿಸಿಸಿಐ ಅಧಿಕಾರಿಗಳನ್ನು ಭೇಟಿ ಮಾಡಿ ವಿವರಣೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭೇಟಿಯ ವೇಳೆ ಏನೇನು ಚರ್ಚಿಸಲಾಯಿತು ಎಂದು ದಯವಿಟ್ಟು ಕೇಳಬೇಡಿ ಎಂದು ಜೋಹ್ರಿ ಮಾಧ್ಯಮದವರಿಗೆ ಹೇಳಿದರು ಎನ್ನಲಾಗಿದೆ. ಸೆಮಿಫೈನಲ್ ಪಂದ್ಯದ ವೇಳೆ ಮಿಥಾಲಿ ರಾಜ್ ಅವರನ್ನು ತಂಡದಿಂದ ಕೈಬಿಟ್ಟಿದ್ದು ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವು ಇಂಗ್ಲೆಂಡ್ ಎದುರು ಸೋಲುಂಡು ಟೂರ್ನಿಯಿಂದ ಹೊರಬಿದ್ದಿತ್ತು.