ಕಬ್ಬಡಿ ತಂಡದ ಸಾಧನೆಯನ್ನು ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಹಾಗೂ ವಿರೇಂದ್ರ ಸೆಹ್ವಾಗ್ ತಮ್ಮದೇ ಶೈಲಿಯಲ್ಲಿ ಟ್ವಿಟ್ಟರ್'ನಲ್ಲಿ ಅಭಿನಂಧನೆ ಸಲ್ಲಿಸಿದ್ದಾರೆ.
ನವದೆಹಲಿ(ಅ.22): ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿರುವ ಕಬಡ್ಡಿ ಟೀಂ ಇಂಡಿಯಾ ಥಾಯ್ಲೆಂಡ್ ತಂಡವನ್ನು ಬಗ್ಗುಬಡಿದು ಅರ್ಹವಾಗಿಯೇ ಫೈನಲ್ ಪ್ರವೇಶಿಸಿದೆ. ಕಬ್ಬಡಿ ತಂಡದ ಸಾಧನೆಯನ್ನು ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಹಾಗೂ ವಿರೇಂದ್ರ ಸೆಹ್ವಾಗ್ ತಮ್ಮದೇ ಶೈಲಿಯಲ್ಲಿ ಟ್ವಿಟ್ಟರ್'ನಲ್ಲಿ ಅಭಿನಂಧನೆ ಸಲ್ಲಿಸಿದ್ದಾರೆ.
ಅನೂಪ್ ಕುಮಾರ್ ನೇತೃತ್ವದ ಕಬಡ್ಡಿ ಟೀಂ ಇಂಡಿಯಾ ಥಾಯ್ಲೆಂಡ್ ತಂಡವನ್ನು 73-20 ಅಂತರದಲ್ಲಿ ಮಣಿಸಿ ಫೈನಲ್ ಪ್ರವೇಶಿಸಿದೆ. ಕಬಡ್ಡಿ ತಂಡದ ಸಾಧನೆಯನ್ನು ವಿನೂತನ ಶೈಲಿಯಲ್ಲಿ ಟ್ವೀಟ್ ಮಾಡಿರುವ ಸೆಹ್ವಾಗ್, ಫೈನಲ್ ತಲುಪಿದ ಟೀಂ ಇಂಡಿಯಾಗೆ ಅಭಿನಂದನೆಗಳು, ಥಾಯ್ ಕೊ ಕರ್ ದಿಯಾ ಬಾಯ್, ಡ್ರಿಂಕ್ ಇರಾನಿ ಚಾಯ್ ಟುಮಾರೊ' ಎಂದು ಶುಭಕೋರಿದ್ದಾರೆ.
ಇನ್ನು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್, ಯಸ್ ನಾವು ಕಬಡ್ಡಿ ವಿಶ್ವಕಪ್ ಫೈನಲ್ ತಲುಪಿದ್ದೇವೆ. ಕಮಾನ್ ಇಂಡಿಯಾ ಎಂದು ಟ್ವೀಟ್ ಮಾಡಿದ್ದಾರೆ.
