ಜೈಪುರದಲ್ಲಿ ನಡೆಯಲಿರುವ ಐಪಿಎಲ್ ಹರಾಜಿಗೆ ಸಕಲ ಸಿದ್ಧತೆಗಳು ನಡೆದಿದೆ. ಆಟಗಾರರನ್ನ ಖರೀದಿಸಲು ಫ್ರಾಂಚೈಸಿಗಳ ಬಳಿ ಇರೋ ಹಣವೆಷ್ಟು? ಎಷ್ಟು ಆಟಗಾರರನ್ನ ಖರೀದಿಸಬಹುದು? ಇಲ್ಲಿದೆ ಲಿಸ್ಟ್.

ಜೈಪುರ(ಡಿ.14): ಐಪಿಎಲ್ ಹರಾಜಿಗೆ ಫ್ರಾಂಚೈಸಿಗಳು ಲೆಕ್ಕಾಚಾರ ಆರಂಭಗೊಂಡಿದೆ. ಯಾರನ್ನ ಖರೀದಿಸಬೇಕು? ಎಷ್ಟು ಹಣ ಖರ್ಚು ಮಾಡಬೇಕು ಅನ್ನೋ ಲೆಕ್ಕ ಶುರುವಾಗಿದೆ. ಡಿಸೆಂಬರ್ 18 ರಂದು ಜೈಪುರದಲ್ಲಿ ನಡೆಯಲಿರುವ ಹರಾಜಿಗೆ 346 ಆಟಗಾರರನ್ನ ಶಾರ್ಟ್ ಲಿಸ್ಟ್ ಮಾಡಲಾಗಿದೆ.

ಇದನ್ನೂ ಓದಿ: ಐಪಿಎಲ್ ಹರಾಜು: 346 ಆಟಗಾರರ ಶಾರ್ಟ್‌ಲಿಸ್ಟ್-ಯಾರಿಗಿದೆ ಅವಕಾಶ?

ಹರಾಜಿಕೆ ಸಿದ್ದವಾಗಿರುವ ಫ್ರಾಂಚೈಸಿಗಳು ಅಳೆದು ತೂಗಿ ಆಟಗಾರರನ್ನ ಖರೀದಿಸಬೇಕಿದೆ. ಕಾರಣ ತಮ್ಮಲ್ಲಿರುವ ಹಣ ಹಾಗೂ ಗರಿಷ್ಠ ಆಟಗಾರರ ಸಂಖ್ಯೆ ಗಮನದಲ್ಲಿರಿಸಿ ಆಟಗಾರರನ್ನ ಖರೀದಿಸಬೇಕಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಡೆಲ್ಲಿ ಡೇರ್‌ಡೆವಿಲ್ಸ್ ತಂಡದಲ್ಲಿ ಗರಿಷ್ಠ ಹಣವಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ ಬಳಿ ಕನಿಷ್ಠ ಹಣವಿದೆ. ಇಲ್ಲಿದೆ ಫ್ರಾಂಚೈಸಿಗಳಲ್ಲಿರುವ ಬಾಕಿ ಹಣ ಹಾಗೂ ಇತರ ವಿವರ.

ಫ್ರಾಂಚೈಸಿಒಟ್ಟು ಆಟಗಾರರುವಿದೇಶಿ ಆಟಗಾರರುಖರ್ಚು ಮಾಡಿದ ಹಣಬಾಕಿ ಹಣಗರಿಷ್ಠ ಖರೀದಿ 
ಸಿಎಸ್‌ಕೆ23873.60 ಕೋಟಿ8.40 ಕೋಟಿ2
ಡೆಲ್ಲಿ15556.50 ಕೋಟಿ25.50 ಕೋಟಿ10
ಪಂಜಾಬ್10445.80 ಕೋಟಿ36.20 ಕೋಟಿ15
ಕೆಕೆಆರ್13366.80 ಕೋಟಿ15.20 ಕೋಟಿ12
ಮುಂಬೈ18770.85 ಕೋಟಿ11.15 ಕೋಟಿ7
ಆರ್‌ಆರ್16561.05 ಕೋಟಿ20.95 ಕೋಟಿ9
ಆರ್‌ಸಿಬಿ15663.85 ಕೋಟಿ18.15 ಕೋಟಿ10
ಎಸ್‌ಆರ್‌ಎಚ್20672.30 ಕೋಟಿ9.70 ಕೋಟಿ5
ಒಟ್ಟು13044510.75 ಕೋಟಿ145.25 ಕೋಟಿ70