ಭಾರತ-ವೆಸ್ಟ್ ಇಂಡೀಸ್ ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ ಭಾರತ 5 ವಿಕೆಟ್ ಕಳೆದುಕೊಂಡು 377 ರನ್ ಬಾರಿಸಿತ್ತು. ರೋಹಿತ್ ಶರ್ಮಾ ಒಬ್ಬರೇ 162 ರನ್ ಚಚ್ಚಿದ್ದರು.
ಮುಂಬೈ[ಅ.31]: ಟೀಂ ಇಂಡಿಯಾದ ಸ್ಫೋಟಕ ಆರಂಭಿಕ ಬ್ಯಾಟ್ಸ್’ಮನ್ ರೋಹಿತ್ ಶರ್ಮಾ ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಫಾರ್ಮ್’ನಲ್ಲಿದ್ದು ಈಗಾಗಲೇ ವಿಂಡೀಸ್ ವಿರುದ್ಧ ಆಡಿದ 4 ಪಂದ್ಯಗಳಲ್ಲಿ ಎರಡು ಬಾರಿ 150+ ರನ್ ಬಾರಿಸಿ ಮಿಂಚಿದ್ದಾರೆ.
ಭಾರತ-ವೆಸ್ಟ್ ಇಂಡೀಸ್ ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ ಭಾರತ 5 ವಿಕೆಟ್ ಕಳೆದುಕೊಂಡು 377 ರನ್ ಬಾರಿಸಿತ್ತು. ರೋಹಿತ್ ಶರ್ಮಾ ಒಬ್ಬರೇ 162 ರನ್ ಚಚ್ಚಿದ್ದರು. ಮೊದಲು ಬ್ಯಾಟಿಂಗ್ ಮುಗಿಸಿ ಟೀಂ ಇಂಡಿಯಾ ಫೀಲ್ಡಿಂಗ್’ಗೆ ಇಳಿಯಿತು. ಈ ವೇಳೆ ಬೌಂಡರಿ ಬಳಿ ಕ್ಷೇತ್ರರಕ್ಷಣೆ ಮಾಡುತ್ತಿದ್ದ ರೋಹಿತ್ ಶರ್ಮಾ ಕಂಡ ಪ್ರೇಕ್ಷಕರು ರೋಹಿತ್-ರೋಹಿತ್ ಎಂದು ಕೂಗುತ್ತಾ ಚಿಯರ್ ಅಪ್ ಮಾಡುತ್ತಿದ್ದರು. ಆಗ ರೋಹಿತ್ ಅಭಿಮಾನಿಗಳಿಗೆ ಹೇಳಿದ್ದೇನು..? ನೀವೇ ನೋಡಿ..
ಭಾರತ ನೀಡಿದ ಬೃಹತ್ ಮೊತ್ತಕ್ಕೆ ಉತ್ತರವಾಗಿ ವೆಸ್ಟ್ ಇಂಡೀಸ್ ಕೇವಲ 153 ರನ್’ಗಳಿಗೆ ಸರ್ವಪತನ ಕಾಣುವ ಮೂಲಕ ಹೀನಾಯ ಸೋಲು ಕಂಡಿತು.
ಏಕದಿನ ಕ್ರಿಕೆಟ್’ನಲ್ಲಿ ಮೂರು ದ್ವಿಶತಕ ಸಿಡಿಸಿದ ಏಕೈಕ ಬ್ಯಾಟ್ಸ್’ಮನ್ ಎನ್ನುವ ಕೀರ್ತಿಗೆ ರೋಹಿತ್ ಶರ್ಮಾ ಭಾಜನರಾಗಿದ್ದಾರೆ. 2013ರಲ್ಲಿ ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ದ್ವಿಶತಕ ಸಿಡಿಸಿದ್ದ ರೋಹಿತ್ ಆ ಬಳಿಕ 2014ರಲ್ಲಿ ಶ್ರೀಲಂಕಾ ಎದುರು 264 ರನ್ ಸಿಡಿಸಿ ಹೊಸ ಇತಿಹಾಸ ಬರೆದಿದ್ದರು. ಮತ್ತೆ 2017ರಲ್ಲಿ ಶ್ರೀಲಂಕಾ ಎದುರೇ ಇನ್ನೊಂದು ದ್ವಿಶತಕ ಸಿಡಿಸಿದ್ದಾರೆ.
