ರೋಹಿತ್ ಕೇವಲ 97 ಎಸೆತಗಳಲ್ಲಿ 13 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ಶತಕ ಪೂರೈಸಿದರು. ಇದು ರೋಹಿತ್ ಶರ್ಮಾ ಏಕದಿನ ಕ್ರಿಕೆಟ್’ನಲ್ಲಿ ಬಾರಿಸಿದ 21ನೇ ಶತಕವಾಗಿದೆ. ಈ ಶತಕದೊಂದಿಗೆ ರೋಹಿತ್ ಹಲವು ಅಪರೂಪದ ದಾಖಲೆಗಳನ್ನು ಬರೆದಿದ್ದಾರೆ.

ಮುಂಬೈ[ಅ.29]: ಹಿಟ್’ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಖಾತೆಗೆ ಮತ್ತೊಂದು ಶತಕ ಸೇರ್ಪಡೆಯಾಗಿದೆ. ವೆಸ್ಟ್ ಇಂಡೀಸ್ ವಿರುದ್ಧ ಈ ಸರಣಿಯಲ್ಲೇ ರೋಹಿತ್ ಶರ್ಮಾ ಬಾರಿಸಿದ ಎರಡನೇ ಶತಕ ಇದಾಗಿದೆ.

ರೋಹಿತ್ ಕೇವಲ 97 ಎಸೆತಗಳಲ್ಲಿ 13 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ಶತಕ ಪೂರೈಸಿದರು. ಇದು ರೋಹಿತ್ ಶರ್ಮಾ ಏಕದಿನ ಕ್ರಿಕೆಟ್’ನಲ್ಲಿ ಬಾರಿಸಿದ 21ನೇ ಶತಕವಾಗಿದೆ. ಈ ಶತಕದೊಂದಿಗೆ ರೋಹಿತ್ ಹಲವು ಅಪರೂಪದ ದಾಖಲೆಗಳನ್ನು ಬರೆದಿದ್ದಾರೆ.

* ಕ್ರಿಕೆಟ್ ವೃತ್ತಿಜೀವನದ ಅದ್ಭುತ ಫಾರ್ಮ್’ನಲ್ಲಿರುವ ರೋಹಿತ್ ಕಳೆದ 9 ಸರಣಿಗಳಲ್ಲೂ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಿಂದ ಇಲ್ಲಿಯವರೆಗೆ ರೋಹಿತ್ ಪ್ರತಿ ಸರಣಿಯಲ್ಲೂ ಶತಕ ಸಿಡಿಸಿದ್ದಾರೆ. 

* ಇನ್ನು 2013ರಿಂದೀಚೆಗೆ ವಿರಾಟ್ ಕೊಹ್ಲಿ[25] ಬಳಿಕ ಅತಿಹೆಚ್ಚು ಶತಕ ಸಿಡಿಸಿದ ಬ್ಯಾಟ್ಸ್’ಮನ್ ಎನ್ನುವ ಕೀರ್ತಿಗೂ ರೋಹಿತ್ ಭಾಜನರಾಗಿದ್ದಾರೆ. ರೋಹಿತ್ 2013ರಿಂದೀಚೆಗೆ 19 ಶತಕ ಸಿಡಿಸಿದ್ದಾರೆ.

* ಆರಂಭಿಕನಾಗಿ ಅತಿ ಕಡಿಮೆ ಇನ್ನಿಂಗ್ಸ್’ಗಳಲ್ಲಿ ಅತಿಹೆಚ್ಚು ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಈಗ ರೋಹಿತ್ ಎರಡನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ರೋಹಿತ್ ಕೇವಲ 107 ಇನ್ನಿಂಗ್ಸ್’ಗಳಲ್ಲಿ 19 ಶತಕ ಸಿಡಿಸಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಹಾಶೀಂ ಆಮ್ಲಾ ಕೇವಲ 102 ಇನ್ನಿಂಗ್ಸ್’ಗಳಲ್ಲಿ 19 ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ.

ಇದೀಗ ಟೀಂ ಇಂಡಿಯಾ 36 ಓವರ್ ಮುಕ್ತಾಯದ ವೇಳೆಗೆ 2 ವಿಕೆಟ್ ಕಳೆದುಕೊಂಡು 222 ರನ್ ಬಾರಿಸಿದೆ. ರೋಹಿತ್ 110 ಹಾಗೂ ಅಂಬಟಿ ರಾಯುಡು 49 ರನ್ ಸಿಡಿಸಿದ್ದಾರೆ.