ಹೆಬ್ಬೆರಳು ಗಾಯದ ಸಮಸ್ಯೆಯಿಂದ ಇಂಗ್ಲೆಂಡ್ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದ ಬುಮ್ರಾ, ಏಷ್ಯಾಕಪ್’ನಲ್ಲಿ ಕಮ್’ಬ್ಯಾಕ್ ಮಾಡಿದ್ದರು. ಮೊದಲೆರಡು ಏಕದಿನ ಪಂದ್ಯಗಳಿಗೆ ಅವರಿಗೆ ರೆಸ್ಟ್ ನೀಡಲಾಗಿತ್ತು. ಇನ್ನು ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ಭುವನೇಶ್ವರ್ ಕುಮಾರ್ ಕೂಡಾ ತಂಡ ಕೂಡಿಕೊಂಡಿದ್ದಾರೆ. ಖಲೀಲ್ ಅಹಮ್ಮದ್ ಹಾಗೂ ಉಮೇಶ್ ಯಾದವ್ ಕೂಡಾ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮುಂಬೈ[ಅ.25]: ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ 3 ಏಕದಿನ ಪಂದ್ಯಗಳಿಗೆ 15 ಆಟಗಾರರನ್ನೊಳಗೊಂಡ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದ್ದು, ವೇಗಿಗಳಾದ ಭುವನೇಶ್ವರ್ ಕುಮಾರ್ ಹಾಗೂ ಜಸ್ಪ್ರೀತ್ ಬುಮ್ರಾ ತಂಡ ಕೂಡಿಕೊಂಡಿದ್ದಾರೆ. ಮೊಹಮ್ಮದ್ ಶಮಿ ಅವರನ್ನು ಕೈಬಿಡಲಾಗಿದೆ.
ಇದನ್ನು ಓದಿ: ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ ಆ ಒಂದು ಓವರ್ ಮತ್ತೊಮ್ಮೆ ಕಣ್ತುಂಬಿಕೊಳ್ಳಿ
ಹೆಬ್ಬೆರಳು ಗಾಯದ ಸಮಸ್ಯೆಯಿಂದ ಇಂಗ್ಲೆಂಡ್ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದ ಬುಮ್ರಾ, ಏಷ್ಯಾಕಪ್’ನಲ್ಲಿ ಕಮ್’ಬ್ಯಾಕ್ ಮಾಡಿದ್ದರು. ಮೊದಲೆರಡು ಏಕದಿನ ಪಂದ್ಯಗಳಿಗೆ ಅವರಿಗೆ ರೆಸ್ಟ್ ನೀಡಲಾಗಿತ್ತು. ಇನ್ನು ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ಭುವನೇಶ್ವರ್ ಕುಮಾರ್ ಕೂಡಾ ತಂಡ ಕೂಡಿಕೊಂಡಿದ್ದಾರೆ. ಖಲೀಲ್ ಅಹಮ್ಮದ್ ಹಾಗೂ ಉಮೇಶ್ ಯಾದವ್ ಕೂಡಾ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ನಾಯಕ ವಿರಾಟ್ ಕೊಹ್ಲಿ ಅದ್ಭುತ ಫಾರ್ಮ್’ನಲ್ಲಿದ್ದು, ಎರಡು ಶತಕಗಳ ನೆರವಿನಿಂದ 297 ರನ್ ಬಾರಿಸಿದ್ದು ಗರಿಷ್ಠ ರನ್ ಬಾರಿಸಿದ ಆಟಗಾರ ಎನಿಸಿದ್ದರೆ, ಯಜುವೇಂದ್ರ ಚೆಹಾಲ್ 4 ವಿಕೆಟ್ ಕಬಳಿಸಿದ್ದು ಭಾರತ ಪರ ಯಶಸ್ವಿ ಬೌಲರ್ ಎನಿಸಿದ್ದಾರೆ. ಭಾರತ ಈಗಾಗಲೇ 5 ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ್ದು, ಅಕ್ಟೋಬರ್ 27, 29 ಹಾಗೂ ನವೆಂಬರ್ 01ರಂದು ಕ್ರಮವಾಗಿ ಪುಣೆ, ಮುಂಬೈ ಹಾಗೂ ತಿರುವನಂತಪುರಂನಲ್ಲಿ ಪಂದ್ಯಗಳು ಜರುಗಲಿವೆ.
ಟೀಂ ಇಂಡಿಯಾ ಹೀಗಿದೆ:
ವಿರಾಟ್ ಕೊಹ್ಲಿ[ನಾಯಕ], ರೋಹಿತ್ ಶರ್ಮಾ[ಉಪ ನಾಯಕ], ಶಿಖರ್ ಧವನ್, ಅಂಬಟಿ ರಾಯುಡು, ಕೆ.ಎಲ್ ರಾಹುಲ್, ಮನೀಶ್ ಪಾಂಡೆ, ರಿಶಭ್ ಪಂತ್, ಎಂ.ಎಸ್ ಧೋನಿ, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಯಜುವೇಂದ್ರ ಚೆಹಾಲ್, ಭುವನೇಶ್ವರ್ ಕುಮಾರ್, ಖಲೀಲ್ ಅಹಮ್ಮದ್, ಉಮೇಶ್ ಯಾದವ್.