ಮೆಲ್ಬರ್ನ್[ಜ.18]: ಮಣಿಕಟ್ಟು ಸ್ಪಿನ್ನರ್ ಯುಜುವೇಂದ್ರ ಚೆಹಲ್ ಸಿಕ್ಕ ಅವಕಾಶವನ್ನು ಸಂಪೂರ್ಣವಾಗಿ ಚೆನ್ನಾಗಿಯೇ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ತಾವೆಸೆದ ಮೊದಲ ಓವರ್’ನಲ್ಲೇ ಇಬ್ಬರು ಬ್ಯಾಟ್ಸ್’ಮನ್’ಗಳನ್ನು ಬಲಿ ಪಡೆಯುವ ಮೂಲಕ ಆಸಿಸ್’ಗೆ ಮರ್ಮಾಘಾತ ಮಾಡುವಲ್ಲಿ ಚೆಹಲ್ ಯಶಸ್ವಿಯಾಗಿದ್ದಾರೆ.

27 ರನ್’ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆಸಿಸ್’ಗೆ ಬಲ ತುಂಬಲು ಉಸ್ಮಾನ್ ಖ್ವಾಜಾ-ಶಾನ್ ಮಾರ್ಷ್ ಜೋಡಿ ನೆರವಾದರು. ಮೂರನೇ ವಿಕೆಟ್’ಗೆ ಈ ಜೋಡಿ 73 ರನ್’ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು ನೂರರ ಗಡಿ ಮುಟ್ಟಿಸಿದರು. ಈ ವೇಳೆ 24ನೇ ಓವರ್’ನಲ್ಲಿ ದಾಳಿಗಿಳಿದ ಚೆಹಾಲ್ ಎರಡನೇ ಎಸೆತದಲ್ಲಿ ಶಾನ್ ಮಾರ್ಷ್ ವಿಕೆಟ್ ಕಬಳಿಸಿದರು. ಮುನ್ನುಗ್ಗಿ ಬಾರಿಸುವ ಯತ್ನದಲ್ಲಿ ಮಾರ್ಷ್ ಸ್ಟಂಪೌಟ್ ಆಗಿ ಪೆವಿಲಿಯನ್ ಸೇರಿದರು. ಮಾರ್ಷ್ ಔಟ್ ಆಗುವ ಮುನ್ನ 54 ಎಸೆತಗಳನ್ನು ಎದುರಿಸಿ 4 ಬೌಂಡರಿ ಸಹಿತ 39 ರನ್ ಬಾರಿಸಿದರು. ಇದಾದ ಬಳಿಕ 4ನೇ ಎಸೆತದಲ್ಲಿ ಉಸ್ಮಾನ್ ಖ್ವಾಜಾ ಅವರನ್ನು ಕ್ಯಾಚ್’ಔಟ್ ಮಾಡುವ ಮೂಲಕ ಆಸಿಸ್’ಗೆ ಮತ್ತೊಂದು ಆಘಾತ ನೀಡಿದರು. ಖ್ವಾಜಾ 51 ಎಸೆತಗಳನ್ನು ಎದುರಿಸಿ 2 ಬೌಂಡರಿ ಸಹಿತ 34 ರನ್ ಬಾರಿಸಿದ್ದಾರೆ.

ಇದೀಗ ಆಸ್ಟ್ರೇಲಿಯಾ 25 ಓವರ್ ಮುಕ್ತಾಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 105 ರನ್ ಬಾರಿಸಿದೆ.