ದುಬೈ[ನ.01]: ಶ್ರೀಲಂಕಾ ಬೌಲಿಂಗ್‌ ಕೋಚ್‌ ನುವಾನ್‌ ಜೋಯ್ಸಾರನ್ನು ಫಿಕ್ಸಿಂಗ್‌ ಆರೋಪದ ಹಿನ್ನೆಲೆಯಲ್ಲಿ ಬುಧವಾರ ಐಸಿಸಿ ಅಮಾನತುಗೊಳಿಸಿದೆ. 

ಇದನ್ನು ಓದಿ: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗರ ಮೇಲೆ ಸ್ಫಾಟ್ ಫಿಕ್ಸಿಂಗ್ ಆರೋಪ?

ಶ್ರೀಲಂಕಾ ತಂಡ ಕೆಲವೇ ದಿನಗಳಲ್ಲಿ ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಸರಣಿ ಆರಂಭಿಸಲಿದ್ದು, ಈ ಬೆಳವಣಿಗೆ ತಂಡಕ್ಕೆ ಆಘಾತ ನೀಡಿದೆ. ಮ್ಯಾಚ್‌ ಫಿಕ್ಸಿಂಗ್‌ ಹಾಗೂ ಫಲಿತಾಂಶ ಬದಲಿಸುವಂತೆ ಆಟಗಾರರಿಗೆ ಪ್ರೇರೇಪಿಸಿದ್ದಕ್ಕಾಗಿ ಈ ಕ್ರಮ ಕೈಗೊಂಡಿರುವುದಾಗಿ ಐಸಿಸಿ ಹೇಳಿದೆ. 

ಇದನ್ನು ಓದಿ: ಕ್ರಿಕೆಟ್’ಗೆ ಕಮ್’ಬ್ಯಾಕ್ ಮಾಡಿದ ನಿಷೇಧಿತ ಕ್ರಿಕೆಟಿಗ..!

‘ಜೋಯ್ಸಾರನ್ನು ತಕ್ಷಣ ಅಮಾನತುಗೊಳಿಸಿದ್ದು, ಉತ್ತರಿಸಲು ನ.1ರಿಂದ 14 ದಿನಗಳ ಗಡುವು ನೀಡಲಾಗಿದೆ. ಅಲ್ಲಿ ತನಕ ಐಸಿಸಿ ಯಾವುದೇ ಹೇಳಿಕೆಗಳನ್ನು ನೀಡುವುದಿಲ್ಲ’ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಯಾವ ನಿರ್ದಿಷ್ಟ ಪ್ರಕರಣದಲ್ಲಿ ಜೋಯ್ಸಾ ತಪ್ಪಿತಸ್ಥ ಎನ್ನುವುದನ್ನು ಐಸಿಸಿ ಬಹಿರಂಗಗೊಳಿಸಿಲ್ಲ.