6ನೇ ಆವೃತ್ತಿ ಬಿಪಿಎಲ್ 2019ರ ಜನವರಿ 5ಕ್ಕೆ ಆರಂಭವಾಗಲಿದ್ದು, ಅಷ್ಟರೊಳಗೆ ಅಶ್ರಫುಲ್ ನಿಷೇಧ ಅವಧಿ ಮುಗಿಯಲಿದೆ. ಲೀಗ್‌ನ ಚಿತ್ತಗಾಂಗ್ ವೈಕಿಂಗ್ಸ್ ಫ್ರಾಂಚೈಸಿ ಅಶ್ರಫುಲ್‌ರನ್ನು ಖರೀದಿಸಿದೆ.
ಢಾಕಾ[ಅ.29]: ಸ್ಪಾಟ್ ಫಿಕ್ಸಿಂಗ್‌ನಿಂದಾಗಿ 5 ವರ್ಷ ನಿಷೇಧಕ್ಕೊಳಗಾಗಿದ್ದ ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮದ್ ಅಶ್ರಫುಲ್, ಬಾಂಗ್ಲಾದೇಶ ಪ್ರೀಮಿಯರ್ ಲೀಗ್(ಬಿಪಿಎಲ್) ಟಿ20 ಪಂದ್ಯಾವಳಿಯಲ್ಲಿ ಆಡಲಿದ್ದಾರೆ.
6ನೇ ಆವೃತ್ತಿ ಬಿಪಿಎಲ್ 2019ರ ಜನವರಿ 5ಕ್ಕೆ ಆರಂಭವಾಗಲಿದ್ದು, ಅಷ್ಟರೊಳಗೆ ಅಶ್ರಫುಲ್ ನಿಷೇಧ ಅವಧಿ ಮುಗಿಯಲಿದೆ. ಲೀಗ್‌ನ ಚಿತ್ತಗಾಂಗ್ ವೈಕಿಂಗ್ಸ್ ಫ್ರಾಂಚೈಸಿ ಅಶ್ರಫುಲ್‌ರನ್ನು ಖರೀದಿಸಿದೆ.
2013ರ ಟಿ20 ಸರಣಿಯಲ್ಲಿ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಸಿಕ್ಕಿಬಿದ್ದಿದರಿಂದ ಅಶ್ರಫುಲ್‌ಗೆ ದಂಡ ಸಹಿತ 8 ವರ್ಷಗಳ ನಿಷೇಧ ಹೇರಲಾಗಿತ್ತು. ಆದರೆ ಅಶ್ರಫುಲ್ ಅರ್ಜಿ ಸಲ್ಲಿಸಿ, ಮನವಿ ಮಾಡಿದ್ದರಿಂದ ನಿಷೇಧವನ್ನು 5 ವರ್ಷಕ್ಕೆ ಇಳಿಸಲಾಗಿತ್ತು.