ಟೆಸ್ಟ್ ಕ್ರಿಕೆಟ್’ನಲ್ಲಿ ಮುತ್ತಯ್ಯ ಮುರುಳೀಧರನ್, ಶೇನ್ ವಾರ್ನ್, ಅನಿಲ್ ಕುಂಬ್ಳೆ, ಜೇಮ್ಸ್ ಆ್ಯಂಡರ್’ಸನ್, ಗ್ಲೇನ್ ಮೆಗ್ರಾತ್, ಕರ್ಟ್ನಿ ವಾಲ್ಷ್, ಕಪಿಲ್ ದೇವ್ ಬಳಿಕ ಬ್ರಾಡ್ ಹಾಗೂ ಹೆರಾತ್ ಜಂಟಿ 8ನೇ ಸ್ಥಾನ ಹಂಚಿಕೊಂಡಿದ್ದಾರೆ.

ಗಾಲೆ[ನ.08]: ವಿಶ್ವಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ಎಡಗೈ ಸ್ಪಿನ್ನರ್ ಶ್ರೀಲಂಕಾದ ರಂಗನಾ ಹೆರಾತ್ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಆಟ ಮುಗಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್’ನ ಎರಡನೇ ಇನ್ನಿಂಗ್ಸ್’ನಲ್ಲಿ ಎರಡು ವಿಕೆಟ್ ಕಬಳಿಸುವ ಮೂಲಕ 93 ಟೆಸ್ಟ್ ಪಂದ್ಯದಲ್ಲಿ 433 ವಿಕೆಟ್’ಗಳೊಂದಿಗೆ ವೃತ್ತಿ ಬದುಕಿಗೆ ಗುಡ್’ಬೈ ಹೇಳಿದ್ದಾರೆ.

Scroll to load tweet…

ಇದನ್ನು ಓದಿ: ವಿದಾಯದ ಪಂದ್ಯದಲ್ಲಿ ಇತಿಹಾಸ ಬರೆದ ರಂಗನಾ ಹೆರಾತ್..!

ಈ ಮೂಲಕ ಟೆಸ್ಟ್ ಕ್ರಿಕೆಟ್’ನಲ್ಲಿ ಮುತ್ತಯ್ಯ ಮುರುಳೀಧರನ್, ಶೇನ್ ವಾರ್ನ್, ಅನಿಲ್ ಕುಂಬ್ಳೆ, ಜೇಮ್ಸ್ ಆ್ಯಂಡರ್’ಸನ್, ಗ್ಲೇನ್ ಮೆಗ್ರಾತ್, ಕರ್ಟ್ನಿ ವಾಲ್ಷ್, ಕಪಿಲ್ ದೇವ್ ಬಳಿಕ ಬ್ರಾಡ್ ಹಾಗೂ ಹೆರಾತ್ ಜಂಟಿ 8ನೇ ಸ್ಥಾನ ಹಂಚಿಕೊಂಡಿದ್ದಾರೆ. ಜತೆಗೆ ಸಮಕಾಲೀನ ಕ್ರಿಕೆಟ್’ನಲ್ಲಿ ಆ್ಯಂಡರ್’ಸನ್ ಬಳಿಕ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನ್ನುವ ಕೀರ್ತಿಗೂ ಹೆರಾತ್ ಪಾತ್ರರಾಗಿದ್ದಾರೆ. ಇದೇ ಪಂದ್ಯದಲ್ಲಿ ಒಂದೇ ಮೈದಾನದಲ್ಲಿ 100 ವಿಕೆಟ್ ಕಬಳಿಸಿದ ಜಗತ್ತಿನ ಮೂರನೇ ಬೌಲರ್ ಎನ್ನುವ ಕೀರ್ತಿಗೂ ಹೆರಾತ್ ಪಾತ್ರರಾಗಿದ್ದರು. ಟೆಸ್ಟ್ ಕ್ರಿಕೆಟ್’ನಲ್ಲಿ ತ್ರಿವಳಿ ದಿಗ್ಗಜ ಸ್ಪಿನ್ನರ್[ಮುರುಳಿ,ವಾರ್ನ್, ಕುಂಬ್ಳೆ]ಗಳ ಬಳಿಕ ಅತಿ ಹೆಚ್ಚು ವಿಕೆಟ್ ಕಬಳಿಸಿದ 4ನೇ ಸ್ಪಿನ್ನರ್ ಎನ್ನುವ ಶ್ರೇಯ ಕೂಡಾ ಹೆರಾತ್ ಮುಡಿಗೇರಿದೆ.

Scroll to load tweet…

ವಾರ್ನ್’ಗಿಂತ ಗ್ರೇಟ್:
ಲಂಕಾ ತಂಡದಲ್ಲಿ ಮುರುಳಿ ಇರುವಾಗ ಮಂಕಾಗಿದ್ದ ಹೆರಾತ್, 2010ರ ಬಳಿಕ ಲಂಕಾ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡರು. ಕುತೂಹಲದ ವಿಚಾರವೆಂದರೆ, ಆಸೀಸ್ ಮಾಂತ್ರಿಕ ಸ್ಪಿನ್ನರ್ ಶೇನ್ ವಾರ್ನ್’ಗಿಂತ ವೇಗವಾಗಿ ವಿಕೆಟ್ ಕಬಳಿಸಿದ ಕೀರ್ತಿ ಕೂಡಾ ಹೆರಾತ್ ಹೆಸರಿನಲ್ಲಿದೆ. ಗಾಲೆ ಟೆಸ್ಟ್ ಆರಂಭಕ್ಕೂ ಮುನ್ನ ಹೆರಾತ್ 168 ಇನ್ನಿಂಗ್ಸ್’ಗಳಲ್ಲಿ 430 ವಿಕೆಟ್ ಕಬಳಿಸಿದ್ದರೇ, ವಾರ್ನ್ ಅಷ್ಟೇ ಇನ್ನಿಂಗ್ಸ್’ಗಳಲ್ಲಿ ವಿಕೆಟ್ ಕಬಳಿಸಿದ ಸಂಖ್ಯೆ 396 ಮಾತ್ರ. ಅಂದರೆ ವಾರ್ನ್’ಗಿಂತ ಹೆರಾತ್ 34 ವಿಕೆಟ್ ಹೆಚ್ಚಿಗೆ ಕಬಳಿಸಿದ್ದಾರೆ.

ಟೆಸ್ಟ್ ಕ್ರಿಕೆಟ್’ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಟಾಪ್ 10 ಬೌಲರ್’ಗಳ ಪಟ್ಟಿ ನಿಮ್ಮ ಮುಂದೆ..

1. ಮುತ್ತಯ್ಯ ಮುರುಳೀಧರನ್ - 800
2. ಶೇನ್ ವಾರ್ನ್ - 708
3. ಅನಿಲ್ ಕುಂಬ್ಳೆ - 619
4. ಜೇಮ್ಸ್ ಆ್ಯಂಡರ್’ಸನ್ - 565*
5. ಗ್ಲೇನ್ ಮೆಗ್ರಾತ್ - 563
6. ಕರ್ಟ್ನಿ ವಾಲ್ಷ್ - 519
7. ಕಪಿಲ್ ದೇವ್ - 434
8. ರಂಗನಾ ಹೆರಾತ್ - 433
9. ಸ್ಟುವರ್ಟ್ ಬ್ರಾಡ್ - 433
10. ರಿಚರ್ಡ್ ಹ್ಯಾಡ್ಲಿ - 431