ವಾಷಿಂಗ್​​ಟನ್​​(ಸೆ.17): ಭಾರತದಲ್ಲಿ ಕ್ರಿಕೆಟ್ ಅನ್ನು ಮನೆ-ಮನಗಳಿಗೂ ತಲುಪಿಸಿರುವ ಬಿಸಿಸಿಐ, ಸದ್ಯ ಅಮೇರಿಕಾದ ಕಡೆ ಮುಖ ಮಾಡಿದ್ದು, ಅಮೇರಿಕಾದವರಿಗೂ ಕ್ರಿಕೆಟ್ ಜ್ವರ ಹತ್ತಿಸಿ ಅಲ್ಲಿಯೂ ಕ್ರಿಕೆಟ್ ಮಾರ್ಕೆಟ್ ಮಾಡಲು ಚಿಂತನೆ ನಡೆಸಿದೆ. 

ಕ್ರಿಕೆಟ್​​ ಬಗ್ಗೆ ಹೆಚ್ಚು ಒಲವು ತೋರಿರುವ ಅಮೇರಿಕನ್ನರ ಬಗ್ಗೆ ಬಿಸಿಸಿಐ ಅಧ್ಯಕ್ಷ ಅನುರಾಗ್​​ ಠಾಕೂರ್​​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಅಲ್ಲಿಯೂ ಕ್ರಿಕೆಟ್ ಅಭಿಮಾನವನ್ನು ಮತಷ್ಟು ಹೆಚ್ಚಿಲು ಕ್ರಮಕ್ಕೆ ಮುಂದಾಗಿದ್ದಾರೆ. 

ಅಲ್ಲದೇ ಅಮೇರಿಕಾ ಮಾರುಕಟ್ಟೆಯನ್ನು ಬಳಸಿಕೊಳ್ಳುವ ಚಿಂತನೆಯಲ್ಲಿ ಬಿಸಿಸಿಐ ಇದೆ ಅಂತ ಅವರು ತಿಳಿಸಿದ್ದಾರೆ. ಇದಕ್ಕಾಗಿ ಒಂದು ತಂಡವನ್ನು ರಚನೆ ಮಾಡಲಿದೆ. ಅದು ಅಲ್ಲಿ ಕ್ರಿಕೆಟ್ ಅಭಿವೃದ್ಧಿಗೆ ಕ್ರಮ ವಹಿಸಲಿದೆ. 

ಇತ್ತೀಚೆಗಷ್ಟೆ ನಡೆದ ಭಾರತ-ವಿಂಡೀಸ್​​ ಟಿ20 ಸರಣಿ ಫ್ಲೋರಿಡಾದಲ್ಲಿ ಭರ್ಜರಿ ಯಶಸು ಕಂಡಿತ್ತು. ಈ ಹಿನ್ನಲೆಯಲ್ಲಿ ಮುಂದಿನ ವರ್ಷಗಳಲ್ಲಿ ಇಲ್ಲಿನ ಕ್ರೀಡಾಂಗಣಗಳ ಅಧ್ಯಾಯನ ಮಾಡುವುದಾಗಿ ಅವರು ಹೇಳಿದ್ದಾರೆ.