ಮುಂಬೈ(ಜ.25): ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ಕೆ.ಎಲ್.ರಾಹುಲ್ ಅಮಾನತು ಶಿಕ್ಷೆಯನ್ನ ಹಿಂಪೆಡೆದ ಬಿಸಿಸಿಐ, ಇಬ್ಬರನ್ನೂ ತಂಡಕ್ಕೆ ಆಯ್ಕೆ ಮಾಡಿದೆ. ನ್ಯೂಜಿಲೆಂಡ್ ವಿರುದ್ದದ ಏಕದಿನ ಸರಣಿಗೆ ಹಾರ್ದಿಕ್ ಪಾಂಡ್ಯ ಆಯ್ಕೆಯಾಗಿದ್ದರೆ, ರಾಹುಲ್ ಭಾರತ ಎ ತಂಡಕ್ಕೆ ಆಯ್ಕೆಯಾಗಿದ್ದಾರೆ. ಬಿಸಿಸಿಐ ಆಡಳಿತ ಸಮಿತಿ ಅಮಾನತು ಹಿಂಪಡೆದ ಬೆನ್ನಲ್ಲೇ ಆಯ್ಕೆ ಸಮಿತಿ ಇಬ್ಬರನ್ನೂ ತಂಡಕ್ಕೇ ಸೇರಿಸಿಕೊಂಡಿದೆ.

ಮಹಿಳೆಯರ ಕುರಿತು ಅಸಭ್ಯ ಹೇಳಿಕೆಯಿಂದ ಅಮಾನತು ಶಿಕ್ಷೆ ಅನುಭವಿಸಿದ ಈ ಕ್ರಿಕೆಟಿಗರು ಸದ್ಯ ನಿರಾಳರಾಗಿದ್ದಾರೆ. ಆದರೆ ಬಿಸಿಸಿಐ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಹಾರ್ದಿಕ್ ಹಾಗೂ ರಾಹುಲ್ ಮೇಲಿನ ಅಮಾನತು ಹಿಂಪಡೆದಿರುವುದು ಸ್ವಾಗತ ಎಂದಿದ್ದಾರೆ. ಆದರೆ ಇನ್ನೂ ಕೆಲವರು ದೇಶದ ಗೌರವಕ್ಕಿಂತ ದೊಡ್ಡದು ಯಾವುದೂ ಇಲ್ಲ. ಹೀಗಾಗಿ ಇವರ ಅಮಾನತು ಹಿಂಪೆದಿರುವುದ ಸೂಕ್ತ ನಿರ್ಧಾವಲ್ಲ ಎಂದಿದ್ದಾರೆ.